ಸಾಹಿತ್ಯ ದಾಸೋಹ ಕಾರ್ಯಕ್ರಮದಲ್ಲಿ ತಪ್ಪದೆ ಭಾಗವಹಿಸಿಸಾಹಿತ್ಯಾಸಕ್ತರಿಗೆ ಸಾಹಿತ್ಯ ದಾಸೋಹ ಕಾರ್ಯಕ್ರಮವನ್ನು ಸಮನ್ವಯ ಸಮಿತಿ ಆಯೋಜಿಸಲಾಗಿದ್ದು, ಮೇ ೨೮, ೨೦೨೨ ಶನಿವಾರ ೩.೩೦ಕ್ಕೆ ನಡೆಯಲಿದೆ, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನಂತಿದೆ. ಮುಂದೆ ಓದಿ…

ಸಮನ್ವಯ ಸಮಿತಿಯ ಅಧ್ಯಕ್ಷರು ಶ್ರೀ ರವೀಂದ್ರರವರು. ಸುಮಾರು ಇನ್ನೂರು ಜನ ಸಾಹಿತ್ಯಾಸಕ್ತರ ವ್ಯಾಟ್ಸಪ್ ಸಮೂಹ. ಇಲ್ಲಿ ಪ್ರತಿ ತಿಂಗಳು ಸಾಹಿತ್ಯ ದಾಸೋಹ ಕಾರ್ಯಕ್ರಮ ನಡೆಯುತ್ತದೆ. ಹಿರಿಯ ಸಾಹಿತಿಗಳು ತಮ್ಮ ಹೊಸ ಕೃತಿಗಳನ್ನು ವಾಚಿಸುತ್ತಾರೆ. ಕೊನೆಯಲ್ಲಿ ಅಧ್ಯಕ್ಷರ ಸಾಂಪ್ರದಾಯಿಕ ಮಾತುಗಳು ಇರುತ್ತವೆ. ಪ್ರತಿ ತಿಂಗಳು ಹೊಸ ಅಧ್ಯಕ್ಷರು ಕಾರ್ಯಕ್ರಮ ನಡೆಸುತ್ತಾರೆ. ಈ ಸಮೂಹದಲ್ಲಿ ಪ್ರತಿ ನಿತ್ಯ ಸಾಹಿತ್ಯ ದಾಸೋಹ ನಡೆಯುತ್ತದೆ. ನೋಡಿಯೋ ಅಂದರೆ ವಿಡಿಯೋ ಪದಕ್ಕೆ ಮಾಡಿರುವ ಕನ್ನಡ ರೂಪ. ತಿಂಗಳಿಗೊಮ್ಮೆ ನೋಡಿಯೋ ಕಾರ್ಯಕ್ರಮವಿರುತ್ತದೆ. ಈ ಸಾರಿಯದು ವೇದಿಕೆಯ 201ನೇಯ ಕಾರ್ಯಕ್ರಮ.

ನೋಡಿಯೋ ಸಾಹಿತ್ಯ ದಾಸೋಹ ೨೦೧

೨೮.೦೫.೨೦೨೨

ಸಮಯ: ಶನಿವಾರ, ೩.೩೦ಕ್ಕೆ

ಕಾರ್ಯಕ್ರಮದ ಅಧ್ಯಕ್ಷತೆ: ಶ್ರೀ ಎನ್ ವಿ ರಘುರಾಂ

ಸ್ವಾಗತ ಹಾಗೂ ಅಧ್ಯಕ್ಷರ‌ ಪರಿಚಯ : ಶ್ರೀಮತಿ ರಾಧಿಕಾ ವಿ.ಗುಜ್ಜರ್

ಪ್ರಾಸ್ತಾವಿಕ ಮಾತು : ಶ್ರಿ ಬಿ ಎಸ್ ರವೀಂದ್ತ

ಜಿಮೀಟ್ ಆತಿಥ್ಯ: ಶ್ರೀಮತಿ ರೇಣುಕಾ ದೇಸಾಯಿ

ನೋಡಿಯೋ ಸಾಹಿತ್ಯ ದಾಸೋಹ ೨೦೦ರ ಪಿ ಡಿ ಎಫ್ ರೂಪ ಸಂಕಲನ ಹಾಗೂ ಲೋಕಾರ್ಪಣೆ ಶ್ರೀ ಶೃಂಗೇಶ್ವರ ಶರ್ಮ

ವಂದನಾರ್ಪಣೆ : ಶ್ರೀ ಗುರುರಾಜ ಶಾಸ್ತ್ರಿ

ಕತೆ, ಕವನ, ಪ್ರಬಂಧ, ಲೇಖನ, ಕೀರ್ತನೆ ಇತ್ಯಾದಿಗಳ ಸ್ವಂತ ರಚನೆಗಳಿಗೆ ಮಾತ್ರ ಸ್ವಾಗತ.

ಪ್ರಸ್ತುತಪಡಿಸುವವರು ಮೊದಲೇ ನೋಡಿಯೋ ಸಾಹಿತ್ಯ ದಾಸೋಹ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳಬೇಕು‌ ಮತ್ತು ಲೇಖನಗಳನ್ನು ಅಧ್ಯಕ್ಷರ ದೂರವಾಣಿ ಸಂಖ್ಯೆ 87629 66050 ಗೆ ದಿನಾಂಕ ೨೬.೦೫.೨೦೨೨ರೊಳಗೆ ಕಳಿಸಿಕೊಡಬೇಕು. ಇಲ್ಲದಿದ್ದರೆ ಪ್ರಸ್ತುತಿಗೆ ಅವಕಾಶವಿಲ್ಲ.

ಪ್ರಸ್ತುತಿಗೆ ಗರಿಷ್ಠ ಕಾಲಮಿತಿ ಆರು ನಿಮಿಷಗಳು. ಪ್ರೇಕ್ಷಕರಾಗಿ ಭಾಗವಹಿಸಲೂ ಸ್ವಾಗತವಿದೆ. ದಾಸೋಹದಲ್ಲಿ ಪ್ರಸ್ತುತಿಯಾದ ಲೇಖನಗಳನ್ನು ಒಂದು ವಾರದೊಳಗೆ ಶ್ರೀ ಶೃಂಗೇಶ್ವರ ಶರ್ಮ ದೂರವಾಣಿ ಸಂ:9448291329 ಅವರಿಗೆ ಕಳುಹಿಸಿಕೊಡಬೇಕು.

ಜಿ ಮೀಟ್ ಕೊಂಡಿಯನ್ನು ದಾಸೋಹ ಆರಂಭವಾಗುವ ಹದಿನೈದು ನಿಮಿಷಗಳ ಮುನ್ನ ಎಲ್ಲ ವೇದಿಕೆಗಳಲ್ಲೂ ಹಂಚಿಕೊಳ್ಳಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.ದಾಸೋಹ ಯಶಸ್ವಿಗೊಳಿಸಿ.

ಸಂಚಾಲಕ ಸಮಿತಿ

ಇನ್ನೂ ಲೇಖನ ಕಳಿಸದಿರುವವರು ತ್ವರೆ ಮಾಡಿ.


  • ಆಕೃತಿ ನ್ಯೂಸ್
0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW