ಸತ್ಯದ ಹಾದಿಯಲಿ ನಡೆದರೆ ಸಾವಿಲ್ಲ… !

ಸತ್ಯ ಹರಿಶ್ಚಂದ್ರ ಸತ್ಯ ಮಾರ್ಗದಿ ಗೆದ್ದ ! … ಕವಿ ಪ್ರೊ.ಸಿದ್ದು ಸಾವಳಸಂಗ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…  

ಸತ್ಯದ ಹಾದಿಯಲ್ಲಿ
ನಡೆದರೆ ಸಾವಿಲ್ಲ !
ಮಿಥ್ಯದ ಮುಖವಾಡಕ್ಕೆ
ಜಗದಲ್ಲಿ ಬೆಲೆಯಿಲ್ಲ !!

ಸತ್ಯದ ಹಾದಿ
ಪಯಣಿಗನಿಗೆ ಬಲು ಕಠಿಣ !
ಮಿಥ್ಯದ ದಾರಿ ಹಾದಿ
ಹೋಗುವವನಿಗೆ ಅತಿ ಸುಲಭ !!

ಸತ್ಯ ಹರಿಶ್ಚಂದ್ರ
ಸತ್ಯ ಮಾರ್ಗದಿ ಗೆದ್ದ !
ದುರ್ಯೋಧನ
ಮಿಥ್ಯ ಮಾರ್ಗದಿ ಬಿದ್ದ !!

ಸತ್ಯದಿ ನಡೆದರೆ
ಕೊನೆಗೆ ನಿಶ್ಚಿತ ಗೆಲುವು !
ಮಿಥ್ಯದಿ ಹೋದರೆ
ಕೊನೆಯಲ್ಲಿ ಖಚಿತ ಸೋಲು !!

ಸತ್ಯವಂತರು ಈ
ಜಗದಲ್ಲಿ ಕಡಿಮೆ !
ಮಿಥ್ಯನುಡಿಯುವವರು
ಜಗದಲ್ಲಿ ಅಧಿಕ !!

ಸತ್ಯವು ಬೂದಿ
ಮುಚ್ಚಿದ ಕೆಂಡ !
ಹೊರಗೆ ಬಂದಾಗ
ಬಟಾಬಯಲಾಗುವುದು ಭಂಡ !!

ಸತ್ಯ-ಸುಳ್ಳಿಗೆ ಬಿಡದೆ
ಸತತ ನಡೆದಿದೆ ಹೋರಾಟ !
ಕೊನೆಯಲ್ಲಿ ಸತ್ಯಗೆದ್ದು
ಸುಳ್ಳು ಗಾಳಿಯಲಿ ಹಾರಾಟ !!


  • ಪ್ರೊ. ಸಿದ್ದು ಸಾವಳಸಂಗ, ವಿಜಯಪುರ (ಕಾವ್ಯನಾಮ – ಚಿರಂಜೀವಿ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW