‘ಸೃಷ್ಟಿಯ ಸ್ಪರ್ಶ’ ಕವನ – ಸಿದ್ದರಾಜು ಸೊನ್ನದ

ವಸಂತಾಗಮನದ ಕಾಲಕ್ಕೆ ಸಮಸ್ತವೂ ಚೈತನ್ಯ ಪೂರ್ಣ ಪ್ರಕೃತಿ ಪುರುಷ ಸಮ್ಮಿಲನದ ಮಧ್ಯ ಜಗವೇ ಸುಂದರ…ಕವಿ ಸಿದ್ದರಾಜು ಸೊನ್ನದ ಅವರ ಲೇಖನಿಯಲ್ಲಿ ಅರಳಿದ ಒಂದು ಸುಂದರ ಕವನ, ತಪ್ಪದೆ ಓದಿ…

ಕಾಡಾದರೂ ನಾಡಾದರೂ ಸೃಷ್ಟಿಯ
ಸ್ಥಿತಿ ಲತೆಯ ಲಯ ಬರುವ ಕಾಲವೇ
ನಿಸರ್ಗ ಪ್ರಕೃತಿಯ ಪ್ರಸನ್ನತೆ ಕಲಶ
ಭೂವನತೆ ಎರಕ ಹೊಯ್ದ ಬಿನ್ನಾಣ ಗಿತ್ತಿ
ಒಡಲಿನ ಸೊಬಗು ಆರಾಧನೆಯ ಪ್ರಶಸ್ತಿ ಸಿರಿ
ಪ್ರಕೃತಿಯ ಚೆಲುವು ಮನದೊಲವು ಶೃಂಗಾರ
ಪರಿಸರದ ಕಂಪು ವಿಜೃಂಭಣೆಯ ವೈಭವ

ಪ್ರೇಮಿ ಪರಿಸರದ ಒಡಲು ಹೂ ದುಂಬಿಗಳ
ಪರಸ್ಪರ ಸ್ಪರ್ಶದ ಪುಳಕಿತ ಯೌವನವೂ ನಾಚಿ
ನೀರಾಗಿ ರಸಭರಿತ ಸೌರಭ ಹೊರ ಹೊಂಬಲು
ವರ್ಣನಾತೀತ ರತಿಮನ್ಮತರ ವಸಂತ ಕಾಲವೂ
ಪ್ರೀತಿ ಪ್ರೇಮದ ಒಲವು ಆಕರ್ಷಣೆಯ ಪ್ರತೀಕ

ಋತು ಸಮಯ ಕೊಡುವ ವಸಂತ ಮಾಸ
ಯೌವನದ ವಸಂತ ಋತು ಸುಖದ ಕಲ್ಪನೆ
ಭವದ ಪ್ರಿಯಕರ ಪುಳಕಿತಗೊಳ್ಳುವ
ಹಂಬಲಿಸುವ ಕಾಲವೇ ಸುಖದ ಧಾಮ

ಭೂಮಿ ರಂಗು ರಂಗಾಗಿ ಅಲಂಕರಿಸಿಕೊಂಡ
ವೈಭವ ಕಣ್ಮನ ತುಂಬಿ ಕೊಳ್ಳುವ ಪರಿ
ರಸಿಕರಿಗೂ ವಸಂತದ ಸಂಭ್ರಮ ಶೃಂಗಾರ
ಪ್ರಕೃತಿ ಸೃಷ್ಟಿಯ ಸ್ಪರ್ಶ ಶೃಂಗಾರ ಶಯ್ಯೆಯ ಕೃತಿ
ಅನುಬಂಧನ ಕಂಪಿಸಿ ಲವಲವಿಕೆಯ ಮೈದುಂಬಿ
ರೂಪ ಲಾವಣ್ಯ ಮತ್ತೆ ಮತ್ತೆ ಚಿಗುರೊಡೆದು
ಮುರಳಿ ಮರಳಿ ಚೇತರಿಸಿ ನಮ್ಮೊಳಗೆ
ಜೀವರಸ ತುಂಬಿಕೊಂಡು ಮೈಮನ ಚಿಗುರು

ನವ ಉಲ್ಲಾಸದ ಸಂತಸದ ಸಂಭ್ರಮದ ಉತ್ಸಾಹ
ಎಲ್ಲೆಡೆ ತುಂಬಲಿ ಬದುಕು ಕಟ್ಟುವ ಸಮಯ
ನಿಸರ್ಗದ ಒಡಲು ತುಂಬಿ ಬರಲಿ ಜೀವನದಲಿ
ಉಸಿರು ಹಸಿರಿನೊಡನೆ ವನಸಂಪತ್ತು ಸಮೃದ್ಧಿ ತರಲಿ
ನಿನ್ನ ಆಗಮನ ಪ್ರಕೃತಿ ಸಂಪತ್ತು ಬದುಕಿನೊಂದಿಗೆ
ಜೊತೆಯಾಗಿ ಒಂದಾಗಿರಲಿ ಪ್ರತಿ ವರುಷ ಹರುಷ ತರಲಿ


  • ಸಿದ್ದರಾಜು ಸೊನ್ನದ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW