‘ಸಿಹಿರಸ’ ಕವನ – ಸಂಧ್ಯಾ ಟಿ

ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಅತ್ಯಂತ ಪುಣ್ಯಪ್ರದವೆಂದು ಪರಿಗಣಿಸಲಾಗುತ್ತದೆ. ಎಲ್ಲರಿಗೂ ಹಬ್ಬದ ಶುಭಾಶಯಗಳು… ಸಂಕ್ರಾಂತಿ ಹಬ್ಬದ ಕುರಿತು ಹಿರಿಯ ಕವಿಯತ್ರಿ ಸಂಧ್ಯಾ ಟಿ ಅವರು ಬರೆದ ಈ ಕವನವನ್ನು ತಪ್ಪದೆ ಮುಂದೆ ಓದಿ…

ಒಳ್ಳೆಯ ಕ್ರಾಂತಿಯೇ ಸಂಕ್ರಾಂತಿ. ಪ್ರಕೃತಿಗೆ ಹಾಗೂ ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಸಂಕ್ರಾಂತಿ. ಪ್ರಕೃತಿಯ ಆವಾಂತರ ದೇವತೆಯಾದ ಭೂಮಿಯನ್ನು ಉಳುಮೆ ಬಿತ್ತನೆ ಮಾಡಿದ ಮೇಲೆ ಅನ್ನದಾತನಾದ ರೈತನಿಗೆ ಬೆಳೆಗಳನ್ನು ನೋಡಿ ಸಂತೋಷ ಪಡುವ ದಿನ.

ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಬರುವನು. ಚಳಿಗಾಲ ಕಳೆದು ಬೆಚ್ಚನೆಯ ಕಾಲ. ವಿಶೇಷವೇನೆಂದರೆ ಜನೆವರಿ ೧೩,೧೪,೧೫ ಈ ಮೂರು ದಿನಗಳಲ್ಲಿ ಬರುವುದು. ಬದುಕಿನಲ್ಲಿ ಬರುವ ದೈವಿಕ, ಭೌತಿಕ, ಅಧ್ಯಾತ್ಮಿಕ ಈ ಮೂರು ತಾಪತ್ರಯಗಳನ್ನು ಸೂರ್ಯನು ಪರಿಹರಿಸುವನು. ಕಾರಣ ಸೂರ್ಯನಿಗೆ ಭಕ್ತಿಯಿಂದ ಎಳ್ಳಿನ ಮೂಲಕ ಅರ್ಘ್ಯ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ.

ಎಳ್ಳು ಲಕ್ಷ್ಮೀ ಪ್ರತೀಕ, ಬೆಲ್ಲ ತೀಕ್ಷ್ಣ ಪರಮಾತ್ಮನ ರಹಸ್ಯದ ಅರಿವು.ಕಾರಣ ಪ್ರೀತಿ ವಾತ್ಸಲ್ಯದ ಪ್ರತೀಕವಾದ ಎಳ್ಳು ಬೆಲ್ಲವನ್ನು ಹಂಚುತ್ತಾ ತಿನ್ನುತ್ತಾ ಸಿಹಿ ಕ್ಷಣಗಳನ್ನು ಸಂಭ್ರಮಿಸುವುದು ಸಂಕ್ರಾಂತಿ.

ಕವನ:

ಬಂದಿದೆ ಬಂದಿದೆ ಸಂಕ್ರಾಂತಿ
ತಂದಿದೆ ತಂದಿದೆ ಸಿಹಿಕ್ರಾಂತಿ
ಚೆಂದದಿ ನಡೆಯಲಿ ಸಂಸ್ಕೃತಿ
ಅಂದಿದೆ ಸಂಕ್ರಾಂತಿ ಫಲಶೃತಿ

ಬರಲಿ ಸಂಕ್ರಾಂತಿ ಪುರುಷ
ತರಲಿ ಸಮೃದ್ಧಿ ಹರುಷ ನೀಡಲಿ
ಪ್ರೀತಿ ಪ್ರತಿ ವರುಷ ನಿಲ್ಲಲಿ ಪಂಥದ ಸಂಘರ್ಷ

ಹರಿಯಲಿ ವಿಶ್ವಾಸದ ನವರಸ
ಅರಿಯಲಿ ಹಬ್ಬದ ಸಮರಸ
ಕಳಿಯಲಿ ಭ್ರಾಂತಿಯ ಕ್ರೂರರಸ
ನಲಿಯಲಿ ಎಳ್ಳು ಬೆಲ್ಲದ ಸಿಹಿರಸ


  • ಸಂಧ್ಯಾ ಟಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading