ಅಪ್ಪನ ದಿನಾಚರಣೆಗೆ ಈ ವಿಶೇಷ ಕೇಕ್

ಈ ಕೇಕ್ ನನ್ನ ಪ್ರೀತಿಯ ಅಪ್ಪನಿಗಾಗಿ ಮಾಡಿರುವೆ. ಅಪ್ಪನ ದಿನಾಚರಣೆಗೆ ಈ ವಿಶೇಷ ಕೇಕ್. ನೀವು ಮಾಡಿ ಇದು ಆರೋಗ್ಯಕ್ಕೆ ಯಾವುದೇ ಹಾನಿಕಾರಕವಲ್ಲ. ಏಕೆಂದರೆ ಈ ಕೇಕ್ ನಲ್ಲಿಮೈದಾ ಅಥವಾ ಸಕ್ಕರೆಯನ್ನು ಬಳಸಿಲ್ಲ. ಬದಲಾಗಿ ಗೋಧಿ ಹಿಟ್ಟು ಮತ್ತು ಬೆಲ್ಲವನ್ನು ಉಪಯೋಗಿಸಲಾಗಿದೆ. ಇದನ್ನು ಸಕ್ಕರೆ ಖಾಯಿಲೆ ಇರುವವರು ಯಾವುದೇ ಭಯವಿಲ್ಲದೆ ತಿನ್ನಬಹುದು.

COOK

ಬೇಕಾಗುವ ಸಾಮಗ್ರಿಗಳು :

🥮 2 ಕಪ್ ಗೋಧಿ ಹಿಟ್ಟು

🥮 1 ಕಪ್ ಬೆಲ್ಲ

🥮1/2 ಕಪ್ ಎಣ್ಣೆ

🥮1/2 ಕಪ್ ಮೊಸರು

🥮1 ಚಮಚ ಬೇಕಿಂಗ್ ಪೌಡರ್

🥮1/2 ಚಮಚ ಬೇಕಿಂಗ್ ಸೋಡಾ

🥮1/2 ಚಮಚ ದಾಲ್ಚಿನಿ ಪೌಡರ್.

🥮ಡ್ರೈ ಫ್ರುಟ್ಸ್

COOK2

COOK3

ಮಾಡುವ ವಿಧಾನ : 

🥮 ಒಂದು ಪಾತ್ರೆಯಲ್ಲಿ ಬೆಲ್ಲ ಮತ್ತು ಎಣ್ಣೆ ಹಾಕಿ, ಬೆಲ್ಲ ಕರುಗುವ ತನಕ ಕಲಕುವುದು.

🥮 ಮೊಸರು ಹಾಕಿ, ಒಂದು ಜರಡಿಯಲ್ಲಿ  ಗೋಧಿ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ದಾಲ್ಚಿನಿ ಪೌಡರ್ ಈ ಮೂರನ್ನು ಹಾಕಿ ಜರಡಿ ಮಾಡಿ. ಚೆನ್ನಾಗಿ ಕಲಸಿ, 1/4 ಕಪ್ ನೀರು ಹಂತ ಹಂತವಾಗಿ ಹಾಕಿ ಕೇಕ್ ಹದಕ್ಕೆ ಬರುವ ತನಕ ಕಲಸಿ.

🥮 ಖರ್ಜುರ, ಬಾದಾಮ್, ಒಣದ್ರಾಕ್ಷಿ ಸೇರಿಸಿ. ಅನಂತರ ಕೇಕ್ ಪಾತ್ರೆಯಲ್ಲಿ ಹಾಕಿ. ಅದರ ಮೇಲೆ   ಒಣದ್ರಾಕ್ಷಿ,ಬಾದಾಮಿ ಹಾಕಿ. ಪ್ರಿ ಹೀಟ್ ಮಾಡಿರುವ ಓವೆನ್ ನಲ್ಲಿ 35 ನಿಮಿಷ 180 c ನಲ್ಲಿ ಇಟ್ಟು ಕಾಯಿರಿ. ಕಾಯದ ನಂತರ ಫಲಿತಾಂಶವು ಸಿಹಿ ಸಿಹಿಯಾಗಿಯೇ ಇರುತ್ತದೆ.

🥮 ರುಚಿಕರವಾದ, ಅರೋಗ್ಯಕರವಾದ ಗೋಧಿ ಕೇಕ್ ನಿಮ್ಮ ಮುಂದೆ ಹಾಜರಾಗಿ ಬಿಡುತ್ತದೆ.

(ನಿಮಗೆ ಮಾಡುವಾಗ ಸಮಸ್ಯೆಗಳಿದ್ದರೆ ಕಾಂಮೆಟ್ ಬಾಕ್ಸ್ ನಲ್ಲಿ ಕಳುಹಿಸಿ, ನಾನು ನಿಮಗೆ ಉತ್ತರಿಸುತ್ತೇನೆ)

ಅಡುಗೆ ಕೈ ಚಳಕ : ಭವಾನಿ ದಿವಾಕರ್

bf2fb3_d4f208c74d1b447aa6daced2595d03ef~mv2.jpg

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW