‘ಕಪ್ ನಮ್ದೇ’ – ಶಿವಕುಮಾರ್ ಬಾಣಾವರ 

ಕ್ರಿಕೆಟ್ ರಂಗದಲ್ಲಿ ಇದೊಂದು “ನುಡಿಗಟ್ಟು”. ಆದರೆ ಭಾರತದ “ಚದುರಂಗದಾಟ” ದಲ್ಲಿ ನಮ್ಮ ಯುವ ಚೆಸ್ ಪ್ರವೀಣರು ಸಾಕಾರಗೊಳಿಸಿದ್ದಾರೆ. ೧೭ ವರ್ಷದ “ಗುಕೇಶ್” ಚೆಸ್ ಆಟಗಾರ ೨೦೨೪ರ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಯಲ್ಲಿ ಕ್ಯಾಂಡಿಡೆಟ್ಸ್ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿ ವಿಶ್ವ ಚೆಸ್ ನಕ್ಷತ್ರವಾಗಿ ಮಿನುಗುತ್ತಿದ್ದಾನೆ. ಶಿವಕುಮಾರ್ ಬಾಣಾವರ  ಅವರ ಲೇಖನಿಯಲ್ಲಿ ಅರಳಿದ ಪ್ರತಿಭೆಗಳು, ತಪ್ಪದೆ ಮುಂದೆ ಓದಿ…

ಹಿಂದೆ ಅತಿರಥ ಮಹಾರಥ ಚೆಸ್ ಆಟಗಾರರು ಸಾಧಿಸಲಾಗದ್ದನ್ನು ಸಾಧಿಸಿ ತೋರಿಸಿರುವ ಈ ೧೭ ವರ್ಷದ ಯುವಕ ವಿಶ್ವ ಚಾಂಪಿಯನ್ ಮುಕುಟ ಧರಿಸಲು ಸಜ್ಜಾಗುತ್ತಿದ್ದಾನೆ. ಗುಕೇಶ್ ” Fide Raniking ” ನಲ್ಲಿ 8ನೇ ಸ್ಥಾನಗಳಿಸಿ ವಿಶ್ವಮಾನ್ಯ ಆಟಗಾರ ಆನಂದರನ್ನು ಹಿಂದಿಕ್ಕಿದ್ದಾರೆ.

ಕ್ಯಾಂಡಿಡೆಟ್ಸ್ ಟೂರ್ನಿಯಲ್ಲಿ ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ ಎರಡನೇ ಸ್ಥಾನ ಪಡೆದ ಮತ್ತೊಬ್ಬ ಆಟಗಾರ್ತಿ ಭಾರತದ ಆಶಾಕಿರಣ. ಮತ್ತೊಂದೆಡೆ ಛಲಗಾತಿ ಆರ್ ವೈಶಾಲಿ ಕ್ಯಾಂಡಿಡೆಟ್ಸ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ನಾಲ್ಕನೇಯ ಸುತ್ತಿಗೆ ಬಂದು ನಿಂತು ಭರವಸೆಯನ್ನೂ ಹುಟ್ಟು ಹಾಕಿದ್ದಾರೆ.

ಕಳೆದ ವರ್ಷ ವಿಶ್ವ ಕಪ್ ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದ ಪ್ರಜ್ಞಾನಂದ ಎಂಟು ಆಟಗಾರರಲ್ಲಿ ಐದನೆಯವರಾಗಿ ಮುಂದಿನ ದಿನಗಳಲ್ಲಿ ಭಾರತ ವಿಶ್ವಚೆಸ್ ರಂಗದಲ್ಲಿ ವಿಜೃಂಭಿಸಲಿದ್ದಾನೆ. ಹಾಗೆಯೇ ಗುಜರಾತಿನ ವಿದಿತ್ ಗುಜರಾತಿ ಕ್ಯಾಂಡಿಡೆಟ್ಸ್ ಪಂದ್ಯಾವಳಿ ಯಲ್ಲಿ ವಿಶ್ವದ ಎರಡು ಮತ್ತು ಮೂರನೇ ಕ್ರಮಾಂಕದ ಆಟ ಗಾರರಾದ ಪ್ಯಾಭಿಯಾನೊ ಕರುವಾನಾ ಮತ್ತು ಹಿಕಾರು ನಕಾಮುರಾ ಅವರಿಗೆ ಸೋಲುಣಿಸಿ ಅವರ ವಿಶ್ವ ಚಾಂಪಿಯನ್ ಕನಸನ್ನು ಭಗ್ನ ಗೊಳಿಸಿದ್ದು ಸಣ್ಣ ಸಾಧನೆಯಲ್ಲ.


ಇಂಥಹ ಪ್ರತಿಭಾವಂತ ಯುವ ಆಟಗಾರರು ವಿಶ್ವ ಚದುರಂಗ ಕ್ಷೇತ್ರದಲ್ಲಿ ಮಿಂಚುವ ಭಾರತ ನಕ್ಷತ್ರಗಳು. ಭರವಸೆಯ ಆಟಗಾರರು. ಭವಿಷ್ಯದ ಚೆಸ್ ಚಾಂಪಿಯನ್ ಗಳು .
ಇನ್ನು ಮುಂದೆ “ಕಪ್ ನಮ್ದೇ” ಎಂದು ಹೇಳುವ ಸರದಿ “ಭಾರತದ್ದು” ಅಲ್ಲವೇ?.


  • ಶಿವಕುಮಾರ್ ಬಾಣಾವರ – ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಶಿವಮೊಗ್ಗ .

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW