ಕುದುರೆ ಲಾಳಾಕಾರದ ಮೆಟ್ಟಿಲು ಬಾವಿ

ಮೂರು ನೂರು ವರ್ಷಗಳ ಹಿಂದೆ “ಗಂಡಿ ಸಹೋದರರು” ನಿರ್ಮಿಸಿದರು ಎನ್ನಲಾಗುವ ಕುದುರೆ ಲಾಳಾಕಾರದ ಈ ಮೆಟ್ಟಿಲು ಬಾವಿ ಇರುವುದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಚಂದ್ರಶೇಖರಪುರಂ ಮಂಡಲ ಪಂಚಾಯ್ತಿ. ವಸಂತ ಗಣೇಶ್ ಅವರು ಕುದುರೆ ಲಾಳಾಕಾರದ ಮೆಟ್ಟಿಲು ಬಾವಿಯ ವಿಶೇಷತೆಯ ಬಗ್ಗೆ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಮೈಲ್ಲೂಚರ್ಲ್ಲ ಎನ್ನುವ ಹಳ್ಳಿಯಲ್ಲಿ. ಫ್ಲೋರೈಡ್ ಪೀಡಿತ ಪ್ರದೇಶವಾಗಿರುವ ಈ ಹಳ್ಳಿಯಲ್ಲಿ ಇಂದಿಗೂ ಕುಡಿಯುವ ನೀರಿನ ಏಕೈಕ ಮೂಲವಾಗಿದೆ. ಹಿಂದೆ ನೀರು ತುಂಬಿರುತ್ತಿದ್ದ ಈ ಬಾವಿಯಲ್ಲಿ ಈಗ ನೀರು ಆಳಕ್ಕೆ ಇಳಿದಿದೆಯಾದರೂ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಈ ಬಾವಿಯನ್ನೇ ಆಶ್ರಯಿಸಿದ್ದಾರೆ.

ನೋಡಲು ಕುದುರೆ ಲಾಳಾಕಾರವಾಗಿರುವ ಈ ಬಾವಿಗೆ ಒಂದು ಕಡೆಯಿಂದ ಇಳಿಯಲು ಮೆಟ್ಟಿಲುಗಳು ಇವೆ. ಉಳಿದಂತೆ ವೃತ್ತಾಕಾರವಾಗಿರುವ ಬಾವಿಯ ಸುತ್ತಲೂ ಕುಳಿತು ಕೊಳ್ಳಲು ಓಡಾಡಲು ಅನುಕೂಲವಾಗುವಂತೆ ಜಗುಲಿಯ ರೀತಿಯಲ್ಲಿ ನಿರ್ಮಿಸಲಾಗಿದೆ. ನೋಡಲು ಮನ ಮೋಹಕವಾಗಿ ಕಾಣುವ ಈ ಬಾವಿ ಇಂದಿಗೂ ಅಲ್ಲಿನ ಜನರಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ.


  • ವಸಂತ ಗಣೇಶ್

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW