ಭಾವನಾ ದ್ರವ್ಯ

ಮನುಷ್ಯನಿಗೆ ಭಗವಂತ ಬದುಕಲ್ಲಿ ಕೊಟ್ಟ ಅಮೂಲ್ಯ ದ್ರವ್ಯವೆಂದರೆ ಈ ಭಾವನೆಗಳು. ಇನ್ನೊಬ್ಬರ ಭಾವನೆಗಳಿಗೆ ಸ್ಪಂದಿಸುವ ರತನ ಟಾಟಾ ಅವರು ಶ್ರೇಷ್ಠ ವ್ಯಕ್ತಿಗಳಲ್ಲಿ ಅವರು ಕೂಡಾ ಒಬ್ಬರು. ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೊಂದು ಸ್ಫೂರ್ತಿ ನೀಡುವ ‘ಸ್ಫೂರ್ತಿ ಸಿಂಚನ’ ಅಂಕಣವನ್ನು ತಪ್ಪದೆ ಓದಿ…

ಭಾರತದ ಹೆಮ್ಮೆಯ ಬೃಹತ್ ಉದ್ಯಮಿ ಶ್ರೀ ರತನ್ ಟಾಟಾ ರವರ ತಂದೆ ಮತ್ತು ತಾಯಿ ಇಬ್ಬರೂ ಕ್ಯಾನ್ಸರ್ ನಿಂದ ಬಳಲಿ ತೀರಿ ಹೋಗುತ್ತಾರೆ. ಆ ನೋವನ್ನು ಅರಿತ ರತನ್ ಟಾಟಾ ರವರು ಅನೇಕ ರಾಜ್ಯಗಳಲ್ಲಿ ರಾಜ್ಯ ಸರ್ಕಾರಗಳ ಜೊತೆ ಜಂಟಿಯಾಗಿ ಕ್ಯಾನ್ಸರ್ ಹಾಸ್ಪಿಟಲ್ ಗಳನ್ನು ತೆಗೆಯಲು ಕೈ ಜೋಡಿಸಿದ್ದಾರೆ.

“I dedicate my last years to health” (ನನ್ನ ಕೊನೆಯ ದಿನಗಳನ್ನು ಆರೋಗ್ಯಕ್ಕೆ ಸಮರ್ಪಸಿಕೊಳ್ಳುತ್ತೇನೆ) ಎನ್ನುವ ರತನ್ ಭಾರತ ಕಂಡ ರತ್ನವಲ್ಲದೆ ಮತ್ತೇನು! ಅದೇ ರತನ್ ಟಾಟಾ ರವರು ಒಮ್ಮೆ ಬೆಂಗಳೂರು ರಸ್ತೆಯಲ್ಲಿ ಕಾರಿನಲ್ಲಿ ಚಲಿಸುವಾಗ ಇವರ ವಾಹನದ ಮುಂದೆ ಒಂದು ಮಧ್ಯಮ ವರ್ಗದ ಕುಟುಂಬ ಅಂದರೆ ಗಂಡ, ಹೆಂಡತಿ ಮತ್ತು ಒಂದು ಮಗು ಬೈಕಿನಲ್ಲಿ ಚಲಿಸುತ್ತಾ ರಸ್ತೆಯಲ್ಲಿ ಅಪಘಾತವಾಗಿ ಕೆಳಗೆ ಉರಳುತ್ತಾರೆ. ಭಯಂಕರ ರಕ್ತ ಸ್ರಾವವಾಗುತ್ತದೆ.

 

ಇದನ್ನು ಕಣ್ಣಾರೆ ಕಂಡ ರತನ್ ಟಾಟಾ ರವರು ಈ ಮಧ್ಯಮ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಕಾರೊಂದನ್ನು ಕೊಡುವ ಮಹತ್ವಾಕಾಂಕ್ಷೆಯನ್ನು ಹೊಂದಿ ‘ಟಾಟಾ ನ್ಯಾನೊ ಕಾರ್’ ನ್ನು ಹೊರ ತರುತ್ತಾರೆ. ಇದೆಲ್ಲ ನಮಗೆ ಗೊತ್ತಿರುವ ಇತಿಹಾಸ. ಬದುಕಲ್ಲಿ ನಾನು ನೋವನ್ನೇ ಉಂಡಿದ್ದೇನೆ ಎಂದು ಇತರರಿಗೆ ನೋವನ್ನು ಉಂಟು ಮಾಡುವ ಅನೇಕ ನಕಾರಾತ್ಮಕರಿಗೆ ರತನ್ ಟಾಟಾ ರವರು ಒಂದು ಸಕಾರಾತ್ಮಕ ಉತ್ತರವಾಗಿ ನಿಲ್ಲುತ್ತಾರೆ.

ಇನ್ನೊಬ್ಬರ ನೋವನ್ನು ಕಣ್ಣಾರೆ ಕಂಡ ಮೇಲೆ ಅದಕ್ಕೆ ಕಣ್ಣಿರೊರೆಸುವ ಸಕಾರಾತ್ಮಕ ಪರಿಹಾರವಾಗಿ ನಿಲ್ಲುವ ಯೋಚನೆ ಟಾಟಾ ರಂತಹ ಶ್ರೇಷ್ಠ ಆತ್ಮಗಳಿಗೆ ಮಾತ್ರ ಸಾಧ್ಯವಾಗುತ್ತದೆ.

ಒಲವಿನ ಮಾತು:

******

ಮನುಷ್ಯನಿಗೆ ಭಗವಂತ ಬದುಕಲ್ಲಿ ಕೊಟ್ಟ ಅಮೂರ್ತ, ಅಮೂಲ್ಯ ದ್ರವ್ಯವೆಂದರೆ ಈ ಭಾವನೆಗಳು. ಹೀಗಾಗಿ ಈ ಬದುಕಲ್ಲಿ ಇನ್ನೊಬ್ಬರ ನೋವನ್ನು ನೀಗಿಸುವ ಚಿಂತನಾರ್ಹ ಭಾವದೊಲವನ್ನು ಹೊಂದಿ ಮನುಷ್ಯರಾಗೋಣ. ಅಲ್ವಾ!

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW