ಚೈತ್ರನು ಅಡಿಯಿಟ್ಟ ಸೂಚನೆ ಧರೆಯಲ್ಲಿ… ಕವಿ ಹೆಚ್. ಪಿ. ಕೃಷ್ಣಮೂರ್ತಿ ಅವರ ‘ಚೈತ್ರದ ಹನಿಗವಿತೆಗಳು’ ಕವನವನ್ನು ತಪ್ಪದೆ ಮುಂದೆ ಓದಿ….
ರಸ್ತೆಯುದ್ಧಕೂ ಹೊಂಗೆಯ
ಪಿಂಕು ಮೊಗ್ಗುಗಳ
ರಂಗೋಲಿ!
ಇದು ಚೈತ್ರನು
ಅಡಿಯಿಟ್ಟ ಸೂಚನೆ
ಧರೆಯಲ್ಲಿ!
ಹಸಿರ ಸಿರಿಯನೆಲ್ಲ ಕಳಕೊಂಡು
ದಿವಾಳಿಗೊಂಡಿದ್ದ
ಪರಿಸರದ ಚಿತ್ರ!
ಹಸಿರ ಸಾಲ ಕೊಟ್ಟು
ಮತ್ತೆ ಉಸಿರು ತುಂಬಲು ಬಂದ
ಚೈತ್ರ!
ಧಾರಿಣಿ ಮತ್ತು ವಸಂತನ ನಡುವೆ
ಕೋಟ್ಯಾನು ಕೋಟಿ ವರುಷಗಳ
ಒಪ್ಪಂದ:
ಯುಗಾದಿ ಹೊತ್ತಿಗೆ ಅವನು
ಪರಿಸರದಲ್ಲಿ ಹಸಿರು ಬಳಿದು
ತುಂಬ ಬೇಕು ಆನಂದ!
ಚೈತ್ರ ಮಾಸದಲಿ
ಅವನಿಯ ಎದೆಯ ಮೇಲೆ
ವಸಂತ ಬರೆದ
ಎಷ್ಟೊಂದು ಎವರ್ ಗ್ರೀನ್
ಸಾಂಗುಗಳು!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
