ತರ್ಕ vs ತರ್ಕ ಆಲೋಚನೆ

 ವಿಚಾರವಂತಿಕೆಯ ಜಗತ್ತಿನ ಅಡಿಯಲ್ಲಿ ತರ್ಕಗಳು ತಲೆ ಕೆಳಗಾಗಿಸಬಹುದು ಅಥವಾ ಬುಡವನ್ನೇ ಮೇಲಕ್ಕೆ ಎತ್ತಬಹುದು. ಇತ್ತೀಚಿಗೆ ಗಮನಿಸಿದ ಜೀ 5 ಮಾಧ್ಯಮದಲ್ಲಿಯ ಸ್ಟೇಟ್ vs ಮಾಲತಿ ಮಾನಸ್ತೇ ಒಂದು ವಿಚಾರ ಬೆಳಕಿನ ಪ್ರಭುದ್ದತೆಯೊಳು ಒಂದೂವರೇ ತಾಸಿನ ನ್ಯಾಯಲಯದ ತರ್ಕದ ವಾದ ವಿವಾದಕ್ಕೆ ಒಬ್ಬ ಹಿಂದುಳಿದ ಅದರಲ್ಲೂ ದಲಿತ ದಲಿತ ಮಹಿಳೆಗೆ ನ್ಯಾಯ ಒದಗಿಸಿದ ಚಿತ್ರ.ತಪ್ಪದೆ ಮುಂದೆ ಓದಿ… 

“ಸ್ಟೇಟ್ vs ಮಾಲತಿ ಮಾನಸ್ತೇ ” ಇಂದಿನ ವಾಟ್ಸಪ್ ಸ್ಟೇಟಸ್ ಜಾಲದೊಳು ಅಂತಸ್ತು ಇಂದಿಗೂ ಹೇಗೆ ಮೆರೆಯಿಯುತ್ತಿದೆ ಎನ್ನುವುದು ನಾನು ಗಮನಿಸಿದ ಸೂಕ್ಷ್ಮ ಅಂಶ. ಇಂದಿನ ದೇಶದ ರಾಜ್ಯಗಳ ಸಮಾಜದಲ್ಲಿ ಮಡಿವಂತಿಕೆ ಇನ್ನೂ ಮಾಸದ ಆರದ ಗಾಯವಾಗಿದೆ ಎಂದರೂ ತಪ್ಪಿಲ್ಲ. ಅದರಲ್ಲೂ ದಲಿತ ಹೆಣ್ಣು ಮಕ್ಕಳ ವಿಚಾರದಲ್ಲಿ ನಡೆದ ಸಂಗತಿಗಳು ಅತ್ಯಂತ ಕ್ರೂರ ಮತ್ತು ಕ್ರೂರ್ಯ ದಿನದ ಜಗತ್ತಿನಲ್ಲಿ ಸುಳಿದಾಡುತ್ತಿರುವ ವಿಷಯ. ಹಾಗೇನೇ ಇಲ್ಲಿ ಕೂಡಾ ನೈಜ ಘಟನೆ ಯ ಆಧಾರದಡಿ ಸಲಿಂಗತೆ ಸಿಲುಕಿದ ಚೂರಿ ಯಾವ ಅಪರಾಧ ಮಾಡದ ದಲಿತ ಅಮಾಯಕ ಮುಗ್ದೆ ಅಪರಾಧಿಯಾಗಿ ಜೈಲು ಕಂಬಿಯಲಿ ತನ್ನ ನಿಲುವನ್ನು ವ್ಯಕ್ತ ಪಡಿಸುವ ಪ್ರಸಂಗ,ಮತ್ತು ಅಷ್ಟೇ ಭಾವುಕತೆಗೆ ಸೆಳೆದೊಯ್ಯುವ ಒಡಲು.

ಈ ಬರಹಕ್ಕೆ ಕೂಡಲು ಇಷ್ಟವಾಯಿತು. .ಶ್ರೀಮಂತರ ದರ್ಪದ ಮನೆಯಲ್ಲಿ ಎಲ್ಲಾ ಕನಸುಗಳು ಮುಗುಚಿ ತಾಯಿಯನ್ನು ಕಳೆದುಕೊಂಡು ತಂದೆಯ ಹಿಂಸೆಗೆ ಅರ್ಧಕ್ಕೆ ಓದನ್ನ ನಿಲ್ಲಿಸಿ ಕೆಲಸಕ್ಕೆoದು ಅಪಾರ್ಟ್ಮೆಂಟ್ ನ ಒಂದು ಮನೆಗೆ ಅಡುಗೆಯಿಂದ ಹಿಡಿದು ಎಲ್ಲಾ ಕೆಲಸವನ್ನು ಅಚ್ಚು ಕಟ್ಟಾಗಿ ನಿಭಾಯಿಸಿಕೊಂಡು ಹೋಗುವ ಮಾಲತಿ ಎನ್ನುವಳು ಸ್ವತಃ ತನ್ನ ಮನೆಯೊಡತಿ ಯನ್ನೇ ಕೊಲೆ ಮಾಡಿದಲೆನ್ನುವ ಆರೋಪದ ಸಲಾಕೆ ಅವಳ ಭವಿಷ್ಯದ ನಿಲುವನ್ನೇ ಕುಗ್ಗಿಸುವ ಸಂದರ್ಭದಲ್ಲಿ ತಾರಾ ಎಂಬ ಜಿದ್ದಿನ ವಕೀಲೆಯ ಅವಳ ವೇದನೆ ಮತ್ತು ಮನೋವೈಜ್ನ್ಯಾನಿಕತೆ ಗೋಡೆಗೆ ನ್ಯಾಯಾಲಯದ ಕಟ್ಟೆಯಲಿ ಸಮ್ಮತವಾದ ಉಜ್ವಲ ನ್ಯಾಯ ದೊರಕಿಸಿ ಸಮಾಜದ ಪ್ರೇರಣೆಗೆ ಒಂದು ಯೋಗ್ಯ ಉದಾಹರಣೆ ಎನ್ನಬಹುದು.

ಇದು ನನಗೆ ಸಂತೋಷದ ಉಸಿರನ್ನುoಟು ಮಾಡಿತು. ಇದು ಕೇವಲ ಚಿತ್ರಣದ ಮೂಲಕ ಹೊರಬಂದರೂ ಇಂತಹ ಎಷ್ಟೋ ನೈಜ ಘಟನೆಗಳ ಆರೋಪಗಳ ನೆಲದಲ್ಲಿ ಹಿಂಸೆಗೆ ಒಳಪಟ್ಟು ಹಿಂದುಳಿದ ಅದರಲ್ಲಿ ದಲಿತ ಆಶಿಕ್ಷಿತ ಮಹಿಳೆಯರ ಬಗ್ಗೆ ಜಾಗತಿಕ ಜಗತ್ತಿನ ವಿಭಾಗದಲ್ಲೂ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಶ್ರಮವಹಿಸಿ ಕೆಲಸ ಮಾಡುತ್ತಿವೆಯೇನೋ? ಅದಕ್ಕೆ ಈ ತರಹ ಮಾದರಿಯುಕ್ತ ಘಟನೆಗಳನ್ನು ವೆಬ್ ಸೀರೀಸ್ಗಳು ಎಚ್ಚರಿಸುತ್ತಿವೆಯೇನೋ ಗಮನಕ್ಕೆ ಬಂದ ಆಲೋಚನೆ ಅಷ್ಟೇ.

ಅಲ್ಲದೆ ಇಂದು ಸಾವಿತ್ರಿಬಾಯಿಪುಲೆ ಜನ್ಮದಿನದ ಕುರಿತಾಗಿ ಪ್ರತಿಯೊಂದು ಸ್ಟೇಟಸ್ ಗಳಲ್ಲೂ ನೋಡಿದಾಗ ಅಂದಿನ ಕಾಲದಲ್ಲಿಯೇ ಒಬ್ಬ ದಲಿತ ಮಹಿಳೆ ಎಲ್ಲಾ ಹಿಂಸೆಯನ್ನು ಅನುಭವಿಸಿ ಶ್ರಮ ಹಾಕಿ ಹೋರಾಡಿ ಹಿಂದುಳಿದ ಮಹಿಳೆಯರನ್ನು ಶಿಕ್ಷಣದ ಮೂಲಕ ನ್ಯಾಯಯುತವಾಗಿ ಮೇಲೇತ್ತಿದ ಭರತ ಖಂಡದ ಮಹಾತಾಯಿಗೆ ನಮ್ಮೆಲ್ಲರ ನಮನ.  ಇಂತಹ ವಿಚಾರಗಳು ಈವತ್ತಿನ ವಾಟ್ಸಪ್ ಸ್ಟೇಟಸ್ ಮೂಲಕ ಬರುವ ಬರವಣಿಗೆಗಳಾದರೂ ತಪಿಲ್ಲ. ತರ್ಕಕ್ಕೆ ಮತ್ತೊಂದು ತರ್ಕ ಗೆದ್ದು ಅನ್ಯಾಯ ಹೊಸಕಿ ಹಾಕಿ ಜಯ ದೊರಕಿಸಿ ಹಿಂದುಳಿದ ಸಮಾಜಕ್ಕೆ ಅದರಲ್ಲೂ ಒಂದು ಮುಗ್ದ ಅಮಾಯಕ ಹೆಣ್ಣಿಗೆ ಮುಂಬರುವ ಹೊಸ ಜಗಕ್ಕೆ ಪ್ರಸ್ತುತ ಪಡಿಸಿರುವ ಈ ಚಿತ್ರಕ್ಕೆ ಅಭಿನಂದನೆ. ಇದನ್ನು ಸರ್ಕಾರ ವೆಂಬ ಸಮಾಜದ ಚಪ್ಪಾಳೆ ಗೆ ಸೂಚಿಸಿದರೂ ತಪ್ಪಿಲ್ಲ.


  • ಡಾ. ಕೃಷ್ಣವೇಣಿ ಆರ್ ಗೌಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading