The old man and sea ಕಾದಂಬರಿ ಪರಿಚಯ

ಅರ್ನೆಸ್ಟ್ ಹೆಮಿಂಗ್ವೇ ಅವರ The old man and sea ಇಂಗ್ಲೀಷ್ ಕಾದಂಬರಿ ಕುರಿತು ಅರವಿಂದ ಕುಲಕರ್ಣಿ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ….

ಪುಸ್ತಕ : The old man and sea
ಲೇಖಕರು : ಅರ್ನೆಸ್ಟ್ ಹೆಮಿಂಗ್ವೇ
ಬೆಲೆ : ೪೧೩.೦೦

The old man and sea ನಾನು ಓದಿದ ಕಾದಂಬರಿ ಅರ್ನೆಸ್ಟ್ ಹೆಮಿಂಗ್ವೇ ಅಮೆರಿಕದ ಒಬ್ಬ  ಪ್ರತಿಭಾವಂತ ಲೇಖಕ. ಅವರು ಬರೆದ  The old man and sea ಒಂದು ಪ್ರಖ್ಯಾತ ಕಾದಂಬರಿ. ಈ ಕಾದಂಬರಿ  1951 ರಲ್ಲಿ ಬರೆದದ್ದು ಮತ್ತು ಪ್ರಕಟವಾದದ್ದು 1952ರಲ್ಲಿ .

ಹೆಮಿಂಗ್ವೇಗೆ ಅವರ ಸಾಹಿತ್ಯ ಕೃತಿಗೆ 1954 ರಲ್ಲಿ ನೊಬೆಲ್ ಪ್ರಶಸ್ತಿ ಬಂತು.  ಇದು ಈ ಪುಸ್ತಕದ ಬಗ್ಗೆ ಸಂಕ್ಷಿಪ್ತ ಮಾಹಿತಿ. ಇದರಲ್ಲಿ ನನಗೆ ಕುತೂಹಲ ಏನೆಂದರೆ ಒಬ್ಬ ವೃದ್ಧ ಮೀನುಗಾರ ತನ್ನ ವಯಸ್ಸನ್ನು ಗಣನೆಗೆ ತೆಗೆದುಕೊಳ್ಳದೆ ಪ್ರಾರಂಭಿಕ ಪ್ರಯತ್ನದಲ್ಲಿ ಸೋತರೂ ಅತ್ಯಂತ ಛಲದಿಂದ ದೊಡ್ಡ ಸಾಧನೆ ಮಾಡುತ್ತಾನೆ. ಅವನ ವಯಸ್ಸು, ಮತ್ತು ದೇಹದ ದುರ್ಬಲತೆ ಅವನ ಸಾಧನೆಗೆ ಅಡ್ಡಬರುವಾದಿಲ್ಲ. “ನನಗೆ ವಯಸ್ಸಾಗಿದೆ ನನ್ನಿಂದ ಏನಾದೀತು” ಅನ್ನುವ ಭಾವನೆ ಇದ್ದವರಿಗೆ ಈ ಕಾದಂಬರಿ ಸ್ಫೂರ್ತಿ ಕೊಡುತ್ತದೆ.

ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಬರೀ ಮೂರು ವೃದ್ಧ  ಸೆಂಟಿಯಾಗೊ, ಬಾಲಕ  ಮನೋಲಿನ್ ಮರ್ಲಿನ್  (ಒಂದು ಜಾತಿಯ ದೊಡ್ಡ ಮೀನು) ವೃದ್ಧ ಸೆಂಟಿಯಾಗೊ ಕ್ಯೂಬಾ ದೇಶದ ಮೀನುಗಾರ.

ಬಾಲಕ ಮನೊಲಿನ್ , ಸೆಂಟಿಯಾಗೊ  ಹತ್ತಿರ ಮೀನುಗಾರಿಕೆ ಕಲಿಯಲು ಬರುತ್ತಾನೆ. ಅವನ ಬಲೆ ಸ್ವಚ್ಛ ಮಾಡಿಕೊಡುವುದು ,ಗಾಳವನ್ನು ಸರಿ ಮಾಡಿಕೊಡುವುದು  ಅವನಿಗೆ ಕಾಫೀ ಮಾಡಿಕೊಡುವುದು ಇಂಥಹ ಅನೇಕ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿರುತ್ತಾನೆ. ಸೆಂಟಿಯಾಗೊ  ಮತ್ತು ಮನೊಲಿನ್ ನಡುವೆ ಒಂದು ಅವಿನಾಭಾವ ಸಂಬಂಧ ಬೆಳೆದಿರುತ್ತದೆ.

ವೃದ್ಧ ಸೆಂಟಿಯಾಗೊ ಮತ್ತು ಮನೋಲಿನ್ ದಿನಾಲೂ ತನ್ನ ಚಿಕ್ಕ ದೋಣಿಯಲ್ಲಿ  ಸಮುದ್ರ ತೀರಕ್ಕೆ ಹೋಗಿ  ಸಂಜೆ ವರೆಗೆ ಮೀನು ಹಿಡಿಯುವ ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ದುರದೃಷ್ಟ ವಶಾತ ಒಂದೂ ಮೀನು ಸಿಕ್ಕುವುದಿಲ್ಲ. ಇದು ಸತತ 84  ದಿನದ ವರೆಗೆ ಹೀಗೆ ನಡೆಯುತ್ತದೆ. ಸಹ ಮೀನುಗಾರರು. ಸೆಂಟಿಯಾಗೊಗೆ ಅಪಹಾಸ್ಯ ಮಾಡುತ್ತಾರೆ. ಆದರೆ ಸೆಂಟಿಯಾಗೋಗೆ ಸಿಟ್ಟು ಬರುವದಿಲ್ಲ ,ನೋಡುತ್ತೀರಿ ನಾನು ಒಂದು ದಿನ ದೊಡ್ಡ ಮೀನು ಹಿಡಿಯುತ್ತೇನೆ ಎಂದು ತನ್ನಲ್ಲಿ ತಾನು ಹೇಳಿಕೊಳ್ಳುತ್ತಾ ಇರುತ್ತಾನೆ. ದಿನಾಲು  ಮೀನು ದೊರೆಯದೆ ನಿರಾಶೆ , ಹತಾಶೆಯಿಂದ ಮನೆಗೆ ಬರುತ್ತಾ ಇರುತ್ತಾನೆ. ಈ ಮಧ್ಯೆ ಬಾಲಕ ಮನೋಲಿನನ ತಂದೆ ತಾಯಿ ಮನೊಲಿನಗೆ

“ನೀನು ಬೇರೆ ಯಾರಾದರೂ ಯವಕ ಮೀನುಗಾರರ ಬಳಿ ಹೋಗಿ ಕಲಿ. ಈ ಸೆಂಟಿಯಾಗೊ ದುರ್ದೈವಿ ಮತ್ತು ವೃದ್ಧ ಇದ್ದಾನೆ. ಇವನಿಂದ ಏನೂ ಆಗುವುದಿಲ್ಲ.”
ಎಂದು ಹೇಳಿ ಬೇರೆ ಕಡೆ ಕಳಿಸುತ್ತಾರೆ.

ಮನೋಲಿನ್ ಒಲ್ಲದ  ಮನಿಸ್ಸಿನಿಂದ ಹೋಗಿರುತ್ತಾನೆ. ಸೆಂಟಿಯಾಗೊ 85 ನೆಯು ದಿನ ಈ ದಿನ ನನಗೆ ದೊಡ್ಡ ಮೀನು ಸಿಕ್ಕೆ ಸಿಗುತ್ತದೆ ಎಂದು ಆತ್ಮ ವಿಶ್ವಾಸದಿಂದ ತುಂಬಾ ಬೆಳಿಗ್ಗೆ  ತನ್ನ ಚಿಕ್ಕ ದೋಣಿಯಲ್ಲಿ ಮೀನುಗಾರಿಕೆಯ ಎಲ್ಲ ಪರಿಕರದೊಂದಿಗೆ ಗಲ್ಫ್ ಸ್ಟ್ರೀಮನ  ಆಳವಾದ ಮತ್ತೂ ಬಹು ದೂರದ ಕಡಲಿನ ಆಳಕ್ಕೆ ಹೋಗುತ್ತಾನೆ. ಗಾಳಕ್ಕೆ ಸಣ್ಣ ಮೀನು ಸಿಕ್ಕಿಸಿ  (ಬೇಟ್ )ಸಾಗರದ ವಿವಿಧ ಆಳದಲ್ಲಿ ಮೂರು ಗಾಳಗಳನ್ನು ಬಿಡುತ್ತಾನೆ.ಆ ಸಮಯದಲ್ಲಿ ಅನೇಕ ಕಪ್ಪು ಹಕ್ಕಿಗಳು ಹಾರುತ್ತಿರುತ್ತವೆ. ಸಮುದ್ರ ಶಾಂತವಾಗಿದೆ.

ಸೆಂಟಿಯಾಗೊ ಆತ್ಮವಿಶ್ವಾಸದಿಂದ  ಕಾಯುತ್ತಿದ್ದಾನೆ. ದೂರಕ್ಕೆ ಹಾಕಿದ ಒಂದು ಗಾಳ ಚಲನೆ ಮಾಡುತ್ತಿದೆ.ಜಗ್ಗಿ ನೋಡುತ್ತಾನೆ ,”ಹೌದು ಒಂದು ಮೀನು ಗಾಳಕ್ಕೆ ಸಿಕ್ಕಿದೆ.”ಅತ್ಯಂತ ಆನಂದದಿಂದ ಜಗ್ಗುತ್ತಾನೆ.ಗಾಳ ಭಾರವಾಗಿದೆ ದೊಡ್ಡ ಮೀನು ಸಿಕ್ಕಿದೆ. ನಿಜ ಮರ್ಲಿನ್ ಮೀನು ಗಾಳಕ್ಕೆ ಸಿಕ್ಕಿದೆ. ಅದು ತುಂಬಾ ಭಾರವಾಗಿದೆ. ತನ್ನ ಮೀನುಗಾರಿಕೆ ಕೌಶಲ್ಯ ದಿಂದ ಜಗ್ಗಿ ಮತ್ತೆ ಬಿಟ್ಟು ನೋಡುತ್ತಾನೆ. ಮೀನು ಇವನನ್ನೇ ಜಗ್ಗುತ್ತಿದೆ. ಅದೇ ಇವನಿಗೆ ಸವಾಲು ಹಾಕುತ್ತಿದೆ. ಸೆಂಟಿಯಾಗೊ ಸೋಲದೆ ಜಗ್ಗುವದು ಬಿಡುವದು ನಡೆಸಿಯೇ ಇದ್ದಾನೆ. ಇವನು ಮುದುಕ ಶಕ್ತಿ ಕಡಿಮೆ ಆದರೆ ಛಲ ಕಡಿಮೆ ಇಲ್ಲ. ಸೆಂಟಿಯಾಗೊ ಎಡಕೈ ಜಗ್ಗಿ ಜಗ್ಗಿ ಘಾಯ್ ಆಗಿದೆ ರಕ್ತ ಬರ್ತಿದೆ ,ಬಲಗೈ ವರಟೆ ಬರುತ್ತಿದೆ. ರಾತ್ರಿ ಆಯಿತು ಪ್ರಯತ್ನ ಮುಂದುವರಿಸಿದ್ದಾನೆ. ಬೆಳಗಾಯಿತು ಮತ್ತೆ ಸಂಜೆ ವರೆಗೆ ಪ್ರಯತ್ನ ಮುಂದುವರೆದಿದೆ. ಕೊನೆಗೆ ಮೂರನೆಯ ದಿನ ರಾತ್ರಿ ಮರ್ಲಿನ್ ಇವನ ಚಿಕ್ಕ ದೋಣಿಗೆ ಮುತ್ತಿಗೆ ಹಾಕಿದೆ.

ಸೆಂಟಿಯಾಗೊ.

ದೋಣಿಗಿಂತ ಒಂದೂವರೆ ಪಟ್ಟು ಉದ್ದ ಮರ್ಲಿನ್ ಇದೆ .ಓಹ್ ದೊಡ್ಡ ಮೀನು ಇದನ್ನು ದಡಕ್ಕೆ ತೆಗೆದುಕೊಂಡು ಹೋಗಿಯೇ ಹೋಗುತ್ತೇನೆ.ಅನ್ನುವ ವಿಶ್ವಾಸ.ಆದರೆ ಅಷ್ಟು ಭಾರವಾದದ್ದು ಹೊರುವದು ಸೆಂಟಿಯಾಗೊ  ಶಕ್ತಿ ಸಾಲದು. ಇದನ್ನು ಅನಿವಾರ್ಯವಾಗಿ ಸಾಯಿಸಲೆಬೇಕು ಎಂದು ತನ್ನ ಬರ್ಚಿ ಕಟ್ಟಿದ ಕೋಲಿನಿಂದ ಮರ್ಲಿನ್ ಗೆ ಚುಚ್ಚು  ತ್ತಾನೆ. ರಕ್ತ ಚಿಮ್ಮುತ್ತದೆ ಸಮುದ್ರದ ಆ ಭಾಗ ಕೆಂಪಾಗುತ್ತದೆ. ಮರ್ಲಿನ್ ನ್ನು ದೋಣಿಗೆ ಕಟ್ಟಿ ದಡದ ಕಡೆ ಹುಟ್ಟು ಹಾಕುತ್ತಾನೆ ಲೇಖಕ ಹೆಮಿಂಗ್ವೇ ಹೇಳುತ್ತಾನೆ . “The  man can be destroyed but can not be defeated.” ಶಾರ್ಕ್ ಮೀನುಗಳು ಈ ರಕ್ತದ ವಾಸನೆಗೆ ಮರ್ಲಿನ್ ಬೆನ್ನು ಹತ್ತುತ್ತವೆ. ಇವನ ಹೋರಾಟದ ಮದ್ಯೆ ಮರ್ಲಿನ್ ಮೀನನ್ನ ಶಾರ್ಕ್ ಮೀನುಗಳು ತಿನ್ನುತ್ತವೆ. ಬರ್ಚಿಯಿಂದ ತಿವಿಯಲು ಹೋಗಿ ಇವನ ಬರ್ಚಿ ಸಮುದ್ರದಲ್ಲಿ ಬೀಳುತ್ತದೆ. ಆದರೂ ದೃತಿಗೆಡದೆ ಹುಟ್ಟು ಹಾಕುವ ಕೊಲಿಗೆ ಚಾಕು ಕಟ್ಟಿ ಕೆಲವೊಂದು ಶಾರ್ಕ್ ಗಳನ್ನ ತಪ್ಪಿಸುತ್ತಾನೆ. . ಆದರೆ ಶಾರ್ಕ್ ಮೀನುಗಳಿಗೆ ಮರ್ಲಿನ್ ಮಾಂಸದ ರುಚಿ ಹತ್ತಿರುತ್ತದೆ .

ಸೆಂಟಿಯಾಗೊ ಬೆಳಿಗ್ಗೆ 3 ಗಂಟೆಗೆ ದಡ ಸೆರುತ್ತಾನೆ. ಯಾರೂ ಇರುವುದಿಲ್ಲ. ಇವನೇ ಪ್ರಯತ್ನ ಮಾಡಿ ದೋಣಿಯನ್ನು ದಡಕ್ಕೆ ಕಟ್ಟಿ ತನ್ನ ಮನೆಗೆ ಹೋಗಿ ಮಲಗಿಕೊಳ್ಳುತ್ತಾನೆ. ಅವನಿಗೆ ವಿಪರೀತ ಆಯಾಸ ಆಗಿರುತ್ತದೆ. ಉಳಿದ ಮೀನುಗಾರರು ಬೆಳಿಗ್ಗೆ ಬಂದು ನೋಡುತ್ತಾರೆ. ಸೆಂಟಿಯಾಗೊ ದೋಣಿಗೆ ದೊಡ್ಡ ಮರ್ಲಿನ್ ಮೀನಿನ ಕಳೆವರ ಕಟ್ಟಿರುತ್ತದೆ. ಅದು
ಸೆಂಟಿಯಾಗೊನ ದೋಣಿಯ ಒಂದೂವರೆ ಪಟ್ಟು ಉದ್ದ ಇರ್ತ್ತದೆ. ಅದನ್ನು ನೋಡಿ ಮೀನುಗಾರರು ಇದನ್ನು ಹೇಗೆ ಈ ವೃದ್ಧ ಮನುಷ್ಯ ತಂದಿದ್ದಾನು.ಎಂದು ಆಶ್ಚರ್ಯ ಪಡುತ್ತಾರೆ. ಬಾಲಕ ಮನೊಲಿನ್ ಬರುತ್ತಾನೆ ಅವನಿಗೂ ಕೂಡ ನೋಡಿ ಆನಂದ, ಆಶ್ಚರ್ಯ .

ಮೀನುಗಾರರು ಮನೊಲಿನ್ ಉದ್ದೇಶಿಸಿ “ಸೆಂಟಿಯಾಗೊಗೆ ನಮ್ಮೆಲ್ಲರ ಕ್ಷಮೆಯನ್ನ ತಿಳಿಸು . ಅವನ ಸಾಹಸ ಅದ್ವಿತೀಯ ಆಗಿದೆ. ”
ಇನ್ನೂ ಅನೇಕ ವಿಷಯಗಳು ಕಾದಂಬರಿಯಲ್ಲಿ ಇವೆ.


  • ಅರವಿಂದ ಕುಲಕರ್ಣಿ – ಮಲಪ್ರಭಾ ಗ್ರಾಮೀಣ ಬ್ಯಾಂಕ್ ನಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ ನೆಲೆಸಿದ್ದು, ಓದುವ ಮತ್ತು ಬರವಣಿಗೆಯಲ್ಲಿ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW