ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2024 ಗೆ ಕೃತಿ ಆಹ್ವಾನ

ಪ್ರತಿವರ್ಷದಂತೆ ಈ ವರ್ಷವೂ ನೀಡಲ್ಪಡುವ ‘ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-೨೦೨೪’ ಗೆ  ಕೃತಿ ಆಹ್ವಾನ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಈ ಕೆಳಗಿನಂತೆ ಇದೆ, ತಪ್ಪದೆ ಮುಂದೆ ಓದಿ… 

ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ. ಜಿ.ಬಾಗಲಕೋಟೆ, ಇವರಿಂದ ರಾಜ್ಯಮಟ್ಟದ “ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2024” ಕ್ಕೆ ಕೃತಿಗಳನ್ನು ಆಹ್ವಾನಿಸಿದೆ.

ಆಸಕ್ತ ಲೇಖಕರು, ಪ್ರಕಾಶಕರು ಕಥೆ, ಕವನ, ಕಾದಂಬರಿ ಈ ಮೂರು ಪ್ರಕಾರಗಳ ಕೃತಿಗಳನ್ನು ಕಳುಹಿಸಬಹುದು. 2024 ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡಿರುವ ಕೃತಿಗಳ ಮೂರು ಪ್ರತಿಗಳನ್ನು ಕಳುಹಿಸಬೇಕು. ಕೃತಿಗಳ ಲಕೋಟೆಯ ಮೇಲೆ ರಾಜ್ಯಮಟ್ಟದ “ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ- 2024” ಎಂಬುದನ್ನು ನಮೂದಿಸಬೇಕು.

ಕೃತಿಗಳು ಜನೆವರಿ 10, 2025 ರೊಳಗೆ ತಲುಪಬೇಕು. ನಂತರ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. ಫೆಬ್ರವರಿ ತಿಂಗಳು ಬಾಗಲಕೋಟೆಯಲ್ಲಿ ಆಯೋಜಿಸುವ ಸಮಾರಂಭದಲ್ಲಿ ಆಯ್ಕೆಯಾದ ಕೃತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಶಸ್ತಿಯು ಮೂರು ಪ್ರಕಾರಗಳಿಗೆ ತಲಾ ರೂ, 10,000/- ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಸನ್ಮಾನ ಒಳಗೊಂಡಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷರು ತಿಳಿಸಿರುತ್ತಾರೆ.

ಕೃತಿಗಳನ್ನು ಕಳುಹಿಸಬೇಕಾದ ವಿಳಾಸ :

ಮಲ್ಲಿಕಾರ್ಜುನ ಶೆಲ್ಲಿಕೇರಿ,
#19/1/1, ಸಿರಿ, ಈಶ್ವರ ದೇವಸ್ಥಾನ ಹತ್ತಿರ,
22 ನೇಕ್ರಾಸ್, ವಿದ್ಯಾಗಿರಿ,
ಬಾಗಲಕೋಟೆ-587102

ಹೆಚ್ಚಿನ ಮಾಹಿತಿಗಾಗಿ ಮೊ.ಸಂ.8310518841, ಸಂಪರ್ಕಿಸಲು ಕೋರಿದೆ.


  • ಆಕೃತಿಕನ್ನಡ ನ್ಯೂಸ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW