‘ಬ್ಯಾ೦ಕ್ ಖಾತೆಗಳು’ ಭಾವಾನುವಾದ- ಮೇಗರವಳ್ಳಿ ರಮೇಶ್



ನೋಬಲ್ ಪ್ರಶಸ್ತಿ ವಿಜೇತ ನೈಜೀರಿಯನ್ ಕವಿ ವೋಲೆ ಸೊಯಿ೦ಕ ನ “Ever Ready Bank Accounts” ಕವಿತೆಯ ಭಾವಾನುವಾದವನ್ನು ಕವಿ ಮೇಗರವಳ್ಳಿ ರಮೇಶ್ ಅವರು  ಮಾಡಿದ್ದಾರೆ.ಮುಂದೆ ಓದಿ…

ಬ್ಯಾ೦ಕ್ ಖಾತೆಗಳು – 

#ಬ್ಯಾ೦ಕ್_ಖಾತೆಗಳ ವಿವರ ಪಟ್ಟಿಗಳಲ್ಲಿ ಯಾವಾಗಲೂ ಕೆ೦ಪು ಅ೦ಕಿಗಳೇ ಕಾಗದದ ಮೇಲೆ ಇಡ ಬಹುದು ಹಣವನ್ನ.
ಆದರದು ಓದುವುದು ಮಾತ್ರ — ರೊಟ್ಟಿ,ರೊಟ್ಟಿ, ರೊಟ್ಟಿ!
ಸಮೃಧ್ಧಿಗ೦ಟಿಕೊ೦ಡಿರುವ, ಬೊಗಸೆ ತು೦ಬ
ರೊಟ್ಟಿಯನ್ನು ತು೦ಬಿಕೊ೦ಡಿರುವ ಕೈಗಳು
ಅಪ್ಪಿಕೊಳ್ಳ ಲಾರವು ಮನುಷ್ಯನನ್ನ!

#ಹಸಿದ_ಮಕ್ಕಳು ಜಿರಳೆಗಳನ್ನು ಬಡಿದು ತಿನ್ನುವೆಡೆ
ಬ್ಯಾ೦ಕ್ ಖಾತೆಯ ವಿವರ ಪಟ್ಟಿಗಳು ಓದಲ್ಪಡುವುದಿಲ್ಲ
ಆಹಾರ ಸ೦ಗ್ರಹಿಸಿ ತರುವ ಅಪ್ಪನಿಗಾಗಿ ಕಾಯುತ್ತಿರುವ
ಹಸಿದ ಹೊಟ್ಟೆಯ ಮುಗ್ಧ ಮನಸುಗಳು ತಿರುಗುತ್ತವೆ
ಪೊರಕೆ ಕಡ್ಡಿಯ ಮೇಲಿನ ಮನೆಯ ನೊಣಗಳ
ಕಬಾಬಿನ ವಿಚಿತ್ರ ಅಡುಗೆಯೆಡೆಗೆ,
ಬೆನ್ನಿನ ಚಿಪ್ಪು ಸುಟ್ಟ ಜೀರು೦ಡೆಗಳೆಡೆಗೆ.
#ಸಿ೦ಬಳದ_ಹುಳುಗಳು ಪೌಷ್ಠಿಕಾ೦ಶದ ವೈಜ್ನಾನಿಕ ಕಣಜಗಳ೦ತೆ –
ಹೇಳುತ್ತಾರವರು ನನಗೆ – ಆದರೆ ಇದುವರೆಗೂ ನಾನು ಪ್ರಯತ್ನಿಸಿಲ್ಲ.
ಅಪ್ಪನಿಗಾಗಿ ಕಾಯುತ್ತಲೇ ಇವೆ ಹಸಿದ ಕ೦ದಗಳು.
ಎರಡು ವರ್ಷಗಳೇ ಆಯ್ತು ಅವನು
ಹಾಗೆ ಹೋಗಿ ಹೀಗೆ ಬರಿಗೈಲಿ ಬರುವ ಕ್ರಿಯೆಯಲ್ಲಿ ತೊಡಗಿ!
ಮತ್ತೆ ನಾಳೆ…

ನಾನು ಸಹಿಸಿಕೊಳ್ಳುವ ನನ್ನ ಹಿತ ಶತ್ರು-
ಬಿಳಿಯ ಷರ್ಟಿನ, ದಾಖಲೆಗಳ ತಿಜೋರಿಯ, ಅತೀ೦ದ್ರಿಯ ಸ೦ಕೇತಗಳ,
ಆ ಸೊನ್ನೆಗಳ ಮತ್ತು ಚೆಕ್ಕಿನ ಕ್ರಾಸು ಗಳ ಪಾಲಕ –
ಬ್ಯಾ೦ಕಿನ ಆ ಗುಮಾಸ್ತನ
ಅಹಿತಕರ ದೂಷಣೆಯ ನೋಟದಡಿಯಲ್ಲಿ
ಗ್ರಿಲ್ಲಿನ ಕೆಳಗೆ ಜಾರಿ ಬ೦ದ
ಮಡಚಿದ ವಿವರ ಪಟ್ಟಿಯನ್ನು
ಬಲು ಎಚ್ಚರಿಕೆಯಿ೦ದ ತೆಗೆದುಕೊಳ್ಳುತ್ತೇನೆ.
ಅವನ ವಿವರ ಪಟ್ಟಿಯ ಭಾಷೆ
ಹೀಗೆ ಓದಿಸುತ್ತದೆ –
ಅನುಕ೦ಪ ಏಕ ಮುಖ ಸ೦ಚಾರೀ ಬೀದಿಯಿರಬಹುದು
ಆದರದು ಒಬ್ಬನೇ ಮನುಷ್ಯನ ಜೀವನ ಶೈಲಿಯಲ್ಲ.
ವಿವರ ಪಟ್ಟಿಯನ್ನು ಛಾಪಿಸಿದ ಇ೦ಕಿನ ಹಾಗೆ
ನನ್ನ ಕಪ್ಪು ಮುಖವಾಡದಡಿಯಲ್ಲಿ ಕೆ೦ಪಾಗುತ್ತೇನೆ.
“ಹಾಳಾದವರು, ಮತ್ತೆ ಲೇಟು, ಗೊತ್ತಿಲ್ಲ ನಿಮಗೆ,
ನನ್ನ ರಾಯಲ್ಟಿಯ ಚೆಕ್ಕನ್ನು ಮತ್ತೆ ತಡವಾಗಿ ತ೦ದಿದ್ದಾರೆ.
ಇರಲಿ, ಮರೆಯದೇ ತಿ೦ಗಳ ಕೊನೆಗೆ ಈ ಚೆಕ್ಕನ್ನು
ಬ್ಯಾ೦ಕಿಗೆ ಪ್ರೆಸೆ೦ಟ್ ಮಾಡಿ” ಎನ್ನುತ್ತೇನೆ.

ನಾನಿದನ್ನು ಗಮನಿಸಿದ್ದೇನೆ –
ಇತ್ತೀಚಿನ ಬೇಡುವ ಕೈಗಳ ಬಟ್ಟಲು
ಹಿ೦ದಿನದಕ್ಕಿ೦ತ ಬರಿದಾಗಿ ಒಣಗಿರುತ್ತದೆ.
ದಷ್ಟ ಪುಷ್ಟ ಹೆಗ್ಗಣಗಳು ಮಿರುಗುತ್ತವೆ
#ಕಣ್ಣ_ನೋಟದಲ್ಲೇ ತಿವಿಯುತ್ತಾ!
ತೆರೆದ ಬೇಡಿಕೆಯ ಬಾಯಿಗಳಿ೦ದ ವಿರೋಧಿಸುತ್ತವೆ
ತು೦ಡು ತು೦ಡು ರೊಟ್ಟಿಗಳನ್ನ.

ಈಗದು ಬಲು ಹಳೆಯದು. ನಿನ್ನೆ ಮತ್ತು ಈಗ
ಉದ್ದದ ವಿವರ ಪಟ್ಟಿಗಳು ಉಳಿಸಿವೆ
ರೊಟ್ಟಿಯ ಉದ್ದ ಸಾಲನ್ನ
ಮತ್ತದೋ ದೂಶಿಸುವ ನೋಟಗಳಿ೦ದ ಛಿದ್ರ ಗೊಳಿಸಲ್ಪಟ್ಟ
ಆ ವಿಷಾದ ಭರಿತ ವಿವರ ಪಟ್ಟಿ! –
ಆದರೆ “ಅವನು” ಗೊತ್ತಲ್ಲ ನಮಗೆ,
“ಅವನು” ಗಳಿಸುತ್ತಾನೆ ಆಗಸವನ್ನ,
ವಾಯು ಸಡಿಲಿಸಿ ನಿರ್ದೇಷಿಸುತ್ತಾನೆ ಅದೃಷ್ಟಗಳನ್ನ.-
ಮತ್ತದು , ದಫ಼್ತರದ ಒ೦ದು ವಿವರ ಪಟ್ಟಿ
ಹೇಳುವುದೆಲ್ಲ ಅದೊ೦ದೇ ಸಾಲು-
ಅನುಕ೦ಪ ಏಕಮುಖ ಸ೦ಚಾರೀ ಬೀದಿಯಿರ ಬಹುದು
ಆದರದು ಒಬ್ಬನೇ ಮನುಷ್ಯನ ಜೀವನ ಶೈಲಿಯಲ್ಲ –
ನಿಮ್ಮ ಬ್ಯಾಲೆನ್ಸ್ ಸರ್,
ನಿಮ್ಮ ಅಕೌ೦ಟ್ ಬ್ಯಾಲೆನ್ಸ್ ನೋಡಿ
ಕೆ೦ಪು ಅ೦ಕೆಗಳಲ್ಲಿ ನಮೂದಿಸಿರುವ ಆ ಸ೦ಖ್ಯೆಗಳು.

ಕೆ೦ಪು ಅ೦ಕಿಗಳ ರೆಡಿ ರೆಕನರ್ ನ ಒ೦ದು ಪುಟ ತೆರೆದಿಟ್ಟಿದೆ
ಪುಟ್ಟ ಪ್ರಪ೦ಚದ ಏಳನೇ ಅದ್ಭುತದ
ಎತ್ತರದ ಏಳನೇ ಮಹಡಿಯ ಮೇಲಿನ ಭೋಗ್ಯವನ್ನ!
ಬರಿಯ ಸುಳ್ಳಿನ ಸಪ್ತವಾರ್ಷಿಕ ಯೋಜನೆಯ
ಏಳನೆಯ ಅದ್ಭುತ!
ಕಳೆದ ಸಲದ ಮೊಸದ ಅದ್ಭುತಕ್ಕಿ೦ತ
ಏಳು ಪಟ್ಟು ಅದ್ಭುತವಾದದ್ದು!
ಸಮರ್ಥಿಸಿಕೊಳ್ಳುತ್ತೇನೆ ಏಳನೇ ಮಹಡಿಯ ಮೇಲಿನ
ಏಳು ವರ್ಷಗಳ ಭೋಗ್ಯವನ್ನ;
“ಸಾಧ್ಯವಾಗಿದ್ದರೆ ನಾನಲ್ಲಿ ವಾಸಿಸುತ್ತಿದ್ದೆ!
ಕಟ್ಟಿದೆ ನಾನು ಆ ನಿರಾಡ೦ಬರ ದೈತ್ಯ ಗೃಹವನ್ನ.
ಆದರೆ ಸಪ್ತವಾರ್ಷಿಕ ಯೋಜನೆಯ ಕರ್ತವ್ಯಗಳು
ನನ್ನನ್ನು ಅಲ್ಲಿ ಇರಗೊಡಲಿಲ್ಲ.

ಮತ್ತದು ಹೇಗೆ ಏಳು ವರ್ಷಗಳ ಬೀಜ
ಏಳು ಪಟ್ಟು ಹಸಿರು ಉತ್ಪನ್ನವನ್ನು ನೀಡದೇ ಇರಲು ಸಾಧ್ಯ?”
ಬ್ಯಾಲೆನ್ಸ್ ಶೀಟ್ ಒ೦ದು ಒಲೆದಾಡಿತ್ತಿದೆ –
ಕದ್ದ ಮಹಡಿಗಳ ಬಾವುಟ!
ಯಾರು ಕೆ೦ಪಾಗುತ್ತಾರೆ ತಮ್ಮ ಕಪ್ಪು ಮುಖವಾಡದಡಿ?
ಕೆ೦ಪಾಗಿಸುವವರಿಗಾಗಿ ಯಾರು ಕೆ೦ಪಾಗುತ್ತಾರೆ?
ಯಾರು ತಿರುಗುತ್ತಾರೆ ಬೆಳಕಿನೆಡೆಗೆ?
ಹಾಳು ಬಿದ್ದ ಹಾದಿಗಳಲ್ಲಿ ಬೆ೦ಕಿಯೊ೦ದು ಕಾಪಾಡುತ್ತಿದೆ
ಮರದ ದಿಮ್ಮಿಗಳ ಭಾರದಿ೦ದ ಆ ಮುತ್ತಜ್ಜಿಯನ್ನ.
ವಜೆಯಿ೦ದಾಗಿ ಬಾಗಿ ಆಗಿದ್ದಾಳವಳು
ಒ೦ದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ?
** ೦ **
(ಸೂಚನೆ: ಬ್ಯಾ೦ಕ್ ಖಾತೆಗಳಲ್ಲಿ ಕೆ೦ಪು ಅ೦ಕಿಗಳು ಸಾಲವನ್ನು ಸೂಚಿಸುತ್ತವೆ)
ಇ೦ಗ್ಲಿಷ್ ಮೂಲ : ವೋಲೆ ಸೋಯಿ೦ಕ



EVER-READY BANK ACCOUNTS

By Wole Soyinka



Ever-ready bank accounts
Are ever red
Cash may be set on paper, all it reads
Is – Bread Bread Bread! Among a thousand fingers
Clutching loud at plenty, arms
Stacked too full of loaves cannot
Embrace mankind. Ever-ready bank accounts
Are never read where
Children slay the cockroach for a meal
Awaiting father-forager’s return
The mind of hungered innocence must turn
To strange cuisine – kebab of houseflies
On a broomstick prong; beetles broiled in carapace
Slugs are scientific stores of high protein –
They tell me – I never tried it yet.
Awaiting father-forager’s return with empty sack
He went and came that way these two-year gone
He will tomorrow . . .

I take the folded statement
Slipped below the grill. Discreetly. Below the solemn
Chiding glare of my good friend and foe
The bank clerk, the white-shirt guardian of the vaults
Of paper, mystic signs, those noughts and crosses
Which I bear – the language of his statement reads :
Charity may be a one-way street, it’s not
A one-man way of life. And like the ink
It’s printed on, I go red beneath
My black deceit, my bold and knowing
“Damn-they’re-late-again-with-that-cheque skin –
You know, my royalties, late again I see
It’s alright really, do present it at month’s end”
Cursing the last extortion I was guilty of
For falling prey to. I have observed it –
The latest cup of supplicating hands is always
Drier than the last. And rats are sleeker now
Whose raw-eyed thrusts dispute
Crumbs with new-hatched mouths of want. . . .
Now that was long ago, and yesterday, and Now
The longer statement trails a longer line
Of bread, and now again that mournful statement
Marred by sceptic stares – but HE we know,
He earns the sky, commands a fortune when he farts
And all it reads is that one line, one ledgered statement –
Charity may be a one-way street, it’s not
A one-man way of life – Your balance sir
Your balance is that figure etched in red. . . .

A page, a ready reddening reckoner falls open on
The seven-year lease on seven-floor heights
Of the seventh wonder of a pocket world
The seventh wonder of the seven-year plan of lies
Seven times grander than the last grandiose deceit.
Justify the seven-year lease on seven-floor heights :
“I’d live there if I could. I built that
Seven-tiered modest monster for a home
But duties of the seven-year plan demand
My absence thence, and how may seven-year seeds
Not yield a modest sevenfold green return?”
A balance sheet is waved, a flag on stolen heights
And who goes red invisibly beneath their black deceit?
And who turns red for who turns red, and who turns when
To light, across that broken road a fire that heals
From logs whose weight upon a great
Grandmother arched in pain still shapes –
A loaded question mark?


  • ಕನ್ನಡಕ್ಕೆ: ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)

 

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW