ನಿಸರ್ಗದಲ್ಲಿ ವಿಸ್ಮಯ ‘ಮರಕುಟಿಕ’ – ಲೇಖನ್‌ ನಾಗರಾಜ್‌

ಮರಕುಟಿಕ ಪ್ರಪಂಚದಾದ್ಯಂತ ಸುಮಾರು 200 ಜಾತಿಯ ಪ್ರಭೇದಗಳಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದು.ಅವುಗಳು ತಮ್ಮ ಕೊಕ್ಕಿನಿಂದ ನಿಮಿಷಕ್ಕೆ 120ಕ್ಕೂ ಹೆಚ್ಚು ಬಾರಿ ಮರವನ್ನು ಕುಟ್ಟುತ್ತವೆಯಂತೆ ಮತ್ತು ಅವುಗಳು ಸಾಮಾನ್ಯವಾಗಿ ಜೋಡಿಯಾಗಿ ಅಥವಾ ಸಣ್ಣ ತಂಡಗಳಾಗಿ ಒಟ್ಟೊಟ್ಟಿಗೆ ತಿರುಗುತ್ತವೆ. ಮರಕುಟಿಕದ ಕುರಿತು ಇನ್ನಷ್ಟು ಕುತೂಹಲಕಾರಿ ವಿಷಯಗಳನ್ನು ಲೇಖನ್‌ ನಾಗರಾಜ್‌ ಹರಡಸೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ನಮ್ಮ ನಿಸರ್ಗದಲ್ಲಿ ಅನೇಕ ಜೀವರಾಶಿಗಳಿವೆ, ವೈವಿಧ್ಯತೆಯಲ್ಲಿ ವಿವಿಧತೆಯ ಜೀವಸಂಕುಲಗಳಿದೆ. ಅದರಲ್ಲಿ ವಿಶಿಷ್ಟವಾದ ವಿಶೇಷವಾದ ಪಕ್ಷಿ ಪ್ರಭೇದ ಮರಕುಟಿಕ [wood pecker.] ಈ ಹೆಸರನ್ನು ಬಹಳಷ್ಟು ಜನ ಕೇಳಿರ್ತಿರಾ ಆದ್ರೆ ಅದರ ವಿಶೇಷತೆಯೇನೆಂಬುದು ತುಂಬಾ ಅಪರೂಪ. ಇದು ಕುಟುಕು ಜಾತಿಗೆ ಸೇರಿದ ಪಕ್ಷಿ ವರ್ಗ.

ಫೋಟೋ ಕೃಪೆ : youtube

ಪ್ರಪಂಚದ ಎಲ್ಲಾ ಕಡೆ ಕಂಡು ಬರುವ ವಿಶೇಷ ಪ್ರಭೇದಗಳಿವು. ಮರಗಳ ಕಾಂಡ ರೆಂಬೆಗಳನ್ನು ಕುಟ್ಟಿ ತೊಗಟೆಗಳಲ್ಲಿರುವ ಕ್ರಿಮಿಕೀಟಗಳನ್ನು ತಿನ್ನುತ್ತವೆ. ಇವುಗಳ ಅಂಗ ರಚನೆಯು ಇದಕ್ಕೆ ಅನುಗುಣವಾಗಿದೆ. ಉದ್ದನೆಯ ಗಟ್ಟಿಮುಟ್ಟಾದ ಕೊಕ್ಕು, ಹರಿತವಾದ ಉಗುರುಗಳು, ನೀಳವಾದ ಕಾಲುಗಳು. ಇವುಗಳು ತಮ್ಮ ಕೊಕ್ಕಿನಿಂದ ನಿಮಿಷಕ್ಕೆ 120ಕ್ಕೂ ಹೆಚ್ಚು ಬಾರಿ ಮರವನ್ನು ಕುಟ್ಟುವಂತೆ ಹೊಂದಿರುವ ತಲೆಬುರುಡೆ ಇವುಗಳ ವೈಶಿಷ್ಟ್ಯ. ಅರಣ್ಯವಾಸಿಗಳಿಗೆ ಮರಕುಟಿಕದ ಶಬ್ದ ಹೊಸದೇನಲ್ಲ. ಸುಮಾರು ಒಂದು ಕಿ.ಮೀ ಗಿಂತಲೂ ದೂರ ಇವುಗಳು ಮರ ಕುಟ್ಟುವ ಶಬ್ಧ ಗಟ್ಟಿಯಾಗಿ ಕೇಳಿಸುತ್ತದೆ. ಮುಖ್ಯವಾಗಿ ಮರಕುಟಿಕಗಳು ʻಪಿಸಿಡೆʼ ಎಂಬ ಕುಟುಂಬ ವರ್ಗಕ್ಕೆ ಸೇರಿದವು ಎನ್ನಲಾಗುತ್ತದೆ. ಕೆಲವು ಭಾಗಗಳಾದ ಆಸ್ಟ್ರೇಲಿಯಾ ನ್ಯೂಗಿನಿಯಾ, ನ್ಯೂಜಿಲ್ಯಾಂಡ್‌, ಮಡಗಾಸ್ಕರ್‌, ಮತ್ತು ತೀವ್ರ ಧ್ರುವ ಪ್ರದೇಶಗಳಲ್ಲಿ ಇವು ಕಂಡು ಬರುವುದಿಲ್ಲಾ. ಕರ್ನಾಟಕದಲ್ಲಿ ಉತ್ತರಕನ್ನಡ, ಕಾರವಾರ,ಹೊನ್ನಾವರ,ಕುಮಟಾ, ಶಿರಸಿ, ಶಿವಮೊಗ್ಗ, ಚಿಕ್ಕಮಗಳೂರು, ಆಗುಂಬೆ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರಪಂಚದಾದ್ಯಂತ ಸುಮಾರು 200 ಜಾತಿಯ ಪ್ರಭೇದಗಳಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆಯಾ ವಾಯುಗುಣಕ್ಕೆ ತಕ್ಕಂತೆ ಬಣ್ಣಗಳನ್ನು ಹೊಂದಿರುತ್ತವೆ.

ಫೋಟೋ ಕೃಪೆ : youtube

 

ಮರಕುಟಿಕಗಳು ಸಾಮಾನ್ಯವಾಗಿ ಜೋಡಿಯಾಗಿ ಅಥವಾ ಸಣ್ಣ ತಂಡಗಳಾಗಿ ಒಟ್ಟೊಟ್ಟಿಗೆ ತಿರುಗುತ್ತವೆ. ಇವು ಕೆಲಸಮಯ ಜೀವಿಗಳು. ಮಿಶ್ರ ಹಿಂಡುಗಳಾಗಿ ಮೇವಿಗೆ ಹುಡುಕಾಡುತ್ತವೆ. ಆಹಾರವನ್ನು ಹುಡುಕುವಾಗ ಯಾವುದಾದರೂ ಒಂದು ಮರವನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಆ ಮರದ ಘಾತ್ರ ಆಕಾರವನ್ನು ನೋಡಿ ಕುಟುಕಲು ಶುರು ಮಾಡುತ್ತವೆ. ಮರದ ಒಳಗಿನ ಕೀಟಗಳು, ಗೆದ್ದಲು, ತೊಗಟೆಯಲ್ಲಿ ಚಾಚಿಕೊಂಡಿರುವ ಲಾರ್ವಾಗಳನ್ನು ತಿನ್ನುತ್ತವೆ. ಕೆಲವೊಮ್ಮೆ ಸಸ್ಯಗಳಲ್ಲಿನ ಮಕರಂದವನ್ನು ಹೀರುತ್ತವೆ. ಶಕ್ತಿಯುತ ಪರಭಕ್ಷಕ ಪ್ರಾಣಿಯಿಂದ ರಕ್ಷಿಸಿಕೊಳ್ಳಲು ವಿವಿಧ ಸ್ಥಳಗಳಲ್ಲಿ ರಹಸ್ಯವಾಗಿ ಅಡಗಿಕೊಳ್ಳುತ್ತವೆ. ಇವುಗಳು ಮುನುಷ್ಯ ನಿರ್ಮಿಸಿದ ಕೃತಕ ಗೂಡುಗಳನ್ನು ತಮ್ಮ ವಾಸಕ್ಕೆ ಸ್ಥಾನವನ್ನಾಗಿ ಬಳಸಿಕೊಳ್ಳುವುದು ಉಂಟು. ಕಾಡಿನಲ್ಲಿ ಸಿಗುವ ಹಣ್ಣುಗಳ ಸಿಪ್ಪೆಯನ್ನು, ಆಹಾರಗಳ ತುಂಡುಗಳನ್ನು ತಮ್ಮ ಗೂಡು ನಿರ್ಮಿಸಲು ಬಳಸಿಕೊಳ್ಳುತ್ತವೆ. ತಮ್ಮ ಮೊಟ್ಟೆ ಇಡುವಿಕೆಯನ್ನು ಹವಾಮಾನಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ವರವು ಇವುಗಳ ಇನ್ನೊಂದು ವಿಶೇಷತೆಯಾಗಿದೆ. ಹೆಚ್ಚಾಗಿ ಫೆಬ್ರವರಿ ಯಿಂದ ಜುಲೈ ನಡುವೆ ಇವುಗಳು ಮೊಟ್ಟೆಯನ್ನಿಟ್ಟು ಮರಿ ಮಾಡುತ್ತವೆ. ಮರಗಳಲ್ಲಿ ಇವುಗಳ ಗೂಡಿನ ಕುಳಿಯನ್ನು ಇವುಗಳೆ ತೆಗೆಯಲ್ಪಟ್ಟಿದ್ದಾಗಿರುತ್ತದೆ. ತಮ್ಮ ಮರಿಗಳಿಗೆ ಅನುಕೂಲವಾಗಲೆಂದು ಸಾಮಾನ್ಯವಾಗಿ ನೇರದ್ವಾರವನ್ನು ನಿರ್ಮಿಸಿಕೊಳ್ಳುತ್ತವೆ. ಒಳಗಡೆ ಹೊಂಡದಂತೆ ನಿರ್ಮಾಣ ಮಾಡಿರುತ್ತವೆ. ಕೆಲವೊಮ್ಮೆ ಮಣ್ಣಿನ ಕಟ್ಟೆಗಳಿಂದಲೂ ತಮ್ಮ ಗೂಡನ್ನು ನಿರ್ಮಿಸಿಕೊಳ್ಳುವುದು ಇದೆ. ಇವುಗಳು ಮೊಟ್ಟೆಯನ್ನು ಮರದ ಪೊಟರೆಯ ಒಳಗಡೆ ಇಡುತ್ತವೆ. ಮೊಟ್ಟೆಗಳು ಮೊದಲು ಹಳದಿ ಮಿಶ್ರಿತ ಬಣ್ಣದಲ್ಲಿರುತ್ತದೆ. ಮೂರು ಕಾವಿನ ನಂತರ ನೀಳವಾಗಿ ಬಿಳಿಯಾಗಿ ಹೊಳಪಿನ ಬಣ್ಣಕ್ಕೆ ಬರುತ್ತವೆ. 11 ದಿನಗಳವರೆಗೆ ಕಾವು ಕೊಟ್ಟ ನಂತರ ಮರಿಗಳು ಹೊರಗೆ ಬರುತ್ತವೆ. ಹೊರಗೆ ಬಂದ ಮರಿಗಳು ಗೂಡಿನಲ್ಲಿ 20 ದಿನಗಳವರೆಗೆ ವಾಸವಾಗಿರುತ್ತದೆ. ನಂತರ ತಮ್ಮ ತಂದೆ ತಾಯಿಗಳೊಂದಿಗೆ ಆಹಾರಕ್ಕಾಗಿ ಹುಡುಕಾಡಲು ಶುರು ಮಾಡುತ್ತವೆ.

ಫೋಟೋ ಕೃಪೆ : Freepik

ಮರಕುಟಿಕ ಪಕ್ಷಿಯ ಇನ್ನೊಂದು ವಿಶೇಷತೆಯನ್ನೆಂದರೆ ಮನುಷ್ಯರಂತೆ ಇವುಗಳು ತಮ್ಮ ಪ್ರೇಮ ನಿವೇದನೆಯನ್ನು ಸಂಗಾತಿಗೆ ಹೇಳಿಕೊಳ್ಳುತ್ತವೆಯಂತೆ. ತಮ್ಮ ಸಂಗಾತಿಯೊಡನೆ ಪ್ರೇಮವನ್ನು ವ್ಯಕ್ತ ಪಡಿಸಲು

ಪದೇ ಪದೇ ಮರವನ್ನು ಕುಟುಕುತ್ತ ಇರುತ್ತವೆ. ಆಗ ಸಂಗಾತಿಯು ಬಂದು ಜೊತೆ ಸೇರುತ್ತದೆ ಎಂದು ಹೇಳುತ್ತಾರೆ. ಮರಕುಟ್ಟುವುದು ಬಹುಶಃ ಅವುಗಳ ಭಾಷೆಯು ಆಗಿರಬಹುದು. ಅದರಲ್ಲಿ ಮನುಷ್ಯರಿಗೆ ಅರ್ಥವಾಗದಂತಹ ಒಂದು ಅರ್ಥವಿರಬಹುದು. ಶ್ರೀಲಂಕಾದಲ್ಲಿ ಮರಕುಟಿಕಗಳನ್ನು ಸಾರ್ವತ್ರಿಕ ಹೆಸರಿನಿಂದ ಗುರುತಿಸುತ್ತಾರೆ. ಅಲ್ಲಿ ಇವುಗಳನ್ನು ʻಕೇರಳಾʼ ಎಂದು ಕರೆಯಲಾಗುತ್ತದೆ. ದ್ವೀಪ ಪ್ರದೇಶಗಳಲ್ಲಿ ʻಕೊಟ್ಟೋರುವಾʼ ಎಂದು ಕರೆಯುತ್ತಾರೆ. ಕೆಲವು ದೇಶಗಳಲ್ಲಿ ʻಬಾರ್ಬೆಟ್‌ʼ ಎಂದು ಗುರುತಿಸುತ್ತಾರೆ. ಈ ಹಕ್ಕಿಯ ಚಿತ್ರವನ್ನು ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ಅಂಚೆ ಇಲಾಖೆಯು ಸ್ಟಾಂಪ್‌ ಮೇಲೆ ಕೂಡ ರೂಪಿಸಿದೆ.

ಧನ್ಯವಾದಗಳೊಂದಿಗೆ


  • ಲೇಖನ್‌ ನಾಗರಾಜ್‌, ಹರಡಸೆ ಹೊನ್ನಾವರ.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW