‘ಹಿಂದಿನ ನಿಲ್ದಾಣ’ ಪುಸ್ತಕ ಪರಿಚಯ – ಉಮೇಶ ದೇಸಾಯಿ

ಶುಭಶ್ರೀ ಭಟ್ಟ ಅವರ ಚೊಚ್ಚಲ ಪುಸ್ತಕ ‘ಹಿಂದಿನ ನಿಲ್ದಾಣ’ ಕುರಿತು ಲೇಖಕ ಉಮೇಶ ದೇಸಾಯಿ ಅವರು ಬರೆದ ಒಂದು ಪುಸ್ತಕ ಪರಿಚಯ ಲೇಖನ, ತಪ್ಪದೆ ಓದಿ…

ಪುಸ್ತಕದ ಹೆಸರು : ಹಿಂದಿನ ನಿಲ್ದಾಣ
ಲೇಖಕಿ : ಶುಭಶ್ರೀ ಭಟ್ಟ
ಪ್ರಕಾಶಕರು : ವೀರಲೋಕ ಬುಕ್ಸ
ಪುಟಗಳು : ೮೬
ಬೆಲೆ : ೧೨೦/

ಈ ಹಿಂದೆಯೂ ನಾನು ಈ ಮಾತು ಹೇಳಿದ ನೆನಪು-ಹುಬ್ಬಳ್ಳಿಯ ಹತ್ತಿರದ ಮುಂಡಗೋಡದಿಂದ ಕಾಸರಗೋಡಿನವರೆಗಿನ ಸೀಮೆಯ ಜನರ ಲೇಖನಶಕ್ತಿ ಶ್ರೀಮಂತವಾಗಿರಲು ಅವರು ಕಳೆದ ಬಾಲ್ಯ, ಬೆಳೆದ ಹಸಿರಿನ ಪರಿಸರ ಮತ್ತು ಒಟ್ಟಾರೆ ಅಲ್ಲಿಯ ಜನ ಜೀವನ ಕ್ರಮ ಸರಳ ಮನುಷ್ಯರ ಸಂಗ ಹೀಗೆ ಏನೆಲ್ಲ. ಈ ಭಾಗದ ಲೇಖಕ/ಲೇಖಕಿಯರು ತಮ್ಮ ನೆನಪುಗಳ ದಾಖಲಿಸುತ್ತ ಅನೇಕ ಉತ್ತಮ ಪುಸ್ತಕ ತಂದಿದ್ದಾರೆ ಅದು ಪ್ರಭಂಧ, ಕತೆ ಅಥವಾ ಕವಿತೆ ಹೀಗೆ ಯಾವುದೇ ರೂಪದಲ್ಲಿರಲಿ ಅದು ಅಪ್ಯಾಯಮಾನ ಯಾಕೆಂದರೆ ನಾನು ಅಂತಹ ಬಾಲ್ಯ ಅನುಭವಿಸಲಿಲ್ಲವಲ್ಲ ಅನ್ನುವ ಹೊಟ್ಟೆಕಿಚ್ಚು ಸಹ ಇದೆ ಅನಬಹುದೇನೋ…ಈ ಮಾತಿಗೆ ಪುಷ್ಟಿ ನೀಡಲು ವಿನಾಯಕ ಅರಳಸುರಳಿ ಅವರ ಪುಸ್ತಕ, ನಮ್ಮ ಮೈತ್ರಿಪ್ರಕಾಶನದಿಂದ ಹೊರಬಂದ ಅಂಜನಾ ಹೆಗಡೆ ಅವರ ಬೊಗಸೆಯಲ್ಲಿ…ಕೃತಿ ಅಥವಾ ಶ್ರವಣಕುಮಾರಿ ಅವರ ಸಂಜೆಯ ಮಳೆ , ಸುಶ್ರುತ ದೊಡ್ಡೇರಿ ಬರೆಯುವ ಪ್ರಬಂಧಗಳುಇತ್ತೀಚೆಗಿನ ಉದಾಹರಣೆಗಳು. ಇನ್ನು ಹಿರಿಯರಾದ ಎಂಕೆ ಇಂದಿರಾ, ಅನಂತಮೂರ್ತಿ ಅವರು ಮಲೆನಾಡಿನ ಜೀವನ ಕಡದಿಟ್ಟ ರೀತಿ ಅದು ಅನುಕರಣೀಯ ಅಷ್ಟೇ ಅಲ್ಲ ರಸಮಯ ಕೂಡ ಅಹುದು. ಈ ಅನಂತಾನಂತ ಪಟ್ಟಿಯಲ್ಲಿ ಇದೀಗ ಶುಭಶ್ರೀ ಭಟ್ಟ ಅವರ ಹೊಸ ಪುಸ್ತಕ ಹಿಂದಿನ ನಿಲ್ದಾಣ ವೂ ಸೇರಿಕೊಂಡಿದೆ.

ಲೇಖಕಿ ಈ ಮೊದಲು ಬ್ಲಾಗ ಬರೆಯುತ್ತಿದ್ದರೆಂದು ನೆನಪು. ಅವಾಗೆಲ್ಲ ಬ್ಲಾಗ ಓದೋದು ಕಾಮೆಂಟ ಹಾಕೋದು ಒಂದು ಟ್ರೆಂಡ್ ಆದಕಾಲ. ಶುಭಶ್ರೀ ನಮ್ಮ ಪ್ರಕಾಶನದ ಅಪ್ಪರೂಪ ಕ್ಕೆ ತಮ್ಮ ತಂದೆಯ ನೆನಪಿನಲ್ಲಿ ಒಂದು ಲೇಖನ ಬರೆದಿದ್ದರು..

ಇರಲಿ ಈಗ ಹಿಂದಿನ ನಿಲ್ದಾಣಕ್ಕೆ ಹೋಗುವ. ಇಲ್ಲಿ ಅವರ ಅಜ್ಜಿ ಇದ್ದಾರೆ ಹೌದು ಎಲ್ಲರು ಬಯಸುವ ಅಜ್ಜಿ. ಅಜ್ಜಿ ಈ ಪುಸ್ತಕದ ಅನೇಕ ಲೇಖನಗಳಲ್ಲಿ ಮಿಂಚಿದ್ದಾರೆ. ಲೇಖಕಿಯ ತಾಯಿ ಹೊಡೆಯಲು ಬೈಯಲು ಮುಂದಾದಾಗ ಹಾಗೆಯೇ ಲೇಖಕಿ ಹೇಳದೆ ಕೇಳದೆ ಕೊಂಕಣರೈಲು ನೋಡಲು ಹೋದಾಗ ಪರಿತಪಿಸುವ ಅಂತಃಕರಣಿ ಅಜ್ಜಿ ಓದುಗರಿಗೂ ಇಷ್ಟವಾಗುವುದಷ್ಟೆ ಅಲ್ಲ ಅಂತಹ ಅಜ್ಜಿಯ ಪ್ರೀತಿ ಕಾಣದ ನನ್ನತರದ ಅನೇಕ ನತದೃಷ್ಟರಿಗೆ ಕರಬುವಂತೆ ಮಾಡುತ್ತಾರೆ. ಇನ್ನುಒಂದು ಪ್ರಮುಖ ಸಂಗತಿ ಅಂದರೆ ಲೇಖಕಿ ಉಲ್ಲೇಖಿಸುವ ಹೂವುಗಳು ಹಣ್ಣುಗಳು ಅಂದು ಎಂದೋ ಮೆದ್ದ ಆ ಹಣ್ಣುಗಳ ರುಚಿ ಇನ್ನೂ ಅವರ ನಾಲಿಗೆಮೇಲೆ ನಲಿದಾಡುತ್ತಿದೆಯೇ ಎಂಭ ಬಾಸ ಹುಟ್ಟಿಸುವ ಅವರ ವರ್ಣನೆ ಅದ ಓದಿಯೇ ಮುದ ತೆಗೆದುಕೋಬೇಕು. ದೇವರಾಣೆ ಇವರು ಉಲ್ಲೇಖಿಸಿರುವ ಹಣ್ಣು ತಿನ್ನುವುದು ದೂರ ಹೆಸರೂ ನಾ ಕೇಳಿಲ್ಲ.ಹಾಗೆಯೇ ಇವರ ಕೊಟ್ಟಿಗೆಯಲ್ಲಿನ ಹಸುಗಳು. ದನಗಳು ಪೊಕ್ಕಣ್ಣ ಬೆಕ್ಕುಗಳು . ಒಂದು ಅವಕಾಶ ಕೊಟ್ಟರೆ ಸಿನಿಮಾ ಗಳಲ್ಲಿ ಆಗುವ ಹಾಗೆ ಟೈಮ ಮಶೀನ ಒಳಗಡೆ ಹೋಗಿ ಹಿಂದಿನ ನಿಲ್ದಾಣ ಇಳಿದು ಊರು ಸುತ್ತಿ ಎಲ್ಲರ ಜತೆ ಮಾತಾಡಿ ಕಲೆಯಬೇಕೆಂಬ ಹಂಬಲ ಲೇಖಕಿಗಿದೆ.

‘ಹಿಂದಿನ ನಿಲ್ದಾಣ’ ಪುಸ್ತಕದ ಲೇಖಕಿ ಶುಭಶ್ರೀ ಭಟ್ಟ

ಸುಮಾರು ೨೩ ಲೇಳನಗಳುದ್ದಕ್ಕೂ ಶುಭಶ್ರೀ ರಸಗವಳ ಉಣಬಡಿಸುತ್ತಾರೆ.ನಾಗಿಮಳ್ಳಿ,ಬೊಂಬಾಯಿ ಮಿಠಾಯಿ ಮಾಮ,ಮಾಸ್ತಿ,ಬೊಮ್ಮಿಮಾಸ್ತಿ, ನೆಗೆಗೌಡ ಇಂತಹ ದೈವಾಂಶ ಸಂಭೂತರ ಅಮಾಯಕರ ಶುದ್ಧ ಅಂತಃಕರಣದ ಪ್ರೀತಿಯನ್ನು ತಾವು ಉಂಡಿದ್ದನ್ನು ಲೇಖಕಿ ನೆನೆಯುತ್ತಾರೆ.ಅಂತೆಯೇ ಪಠ್ಯಪುಸ್ತಕದಲ್ಲಿ ಅಡಗಿಸಿಟ್ಟುಕೊಂಡು ಓದಿದ ಕತೆಗಳು, ಓದಬೇಡ ಎಂಬ ತಾಕೀತಿನ ನಡುವೆಯೂ ಓದಿದ ಸುದಾ ಇತ್ಯಾದಿಗಳ ಕತೆಗಳು ಅಂತೆಯೇ ತೋಟಕ್ಕೆ ಹೋಗಿ ಪರೀಕ್ಷೆಗಾಗಿ ಓದಲು ತಯಾರಿ ಮಾಡಿದ ಪಡಿಪಾಟಲು ಹೀಗೆ ಅನೇಕ ಚಿತ್ರಗಳ ಬಿಡಿಸುವಲ್ಲಿ ಓದುಗನ ಕಣ್ಣಿಗೆ ಕಟ್ಟುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ.

ಇದು ಅವರ ಮೊದಲ ಪುಸ್ತಕ ಅಂತ ಅನಿಸದ ಪಳಗಿದ, ಮಾಗಿದ ಲೇಖನ ಶೈಲಿ ಮೆಚ್ಚುಗೆ ಆತು.ಮುನ್ನುಡಿಯಲ್ಲಿ ಹಿರಿಯರಾದ ಸುಬ್ರಾಯ ಚೊಕ್ಕಾಡಿಅವರು ಬರೆದ ಹಾಗೆ ಮುಂದೆ ಶುಭಶ್ರೀ ಬರೆಯಲಿರುವ ಕಾದಂಬರಿ ಸಾಲುಗಳ ಹಾಗೆ ಈ ಪ್ರಬಂಧ ಇವೆ.

ಶುಭಶ್ರೀ ಮತ್ತು ಪ್ರಕಾಶಕರಿಗೆ ಅಭಿನಂದನೆಗಳು.


  • ಉಮೇಶ ದೇಸಾಯಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW