‘ಯುವಕರ ಬದುಕು’ – ರಾಘವೇಂದ್ರ.ಕೆಸಮಾಜ ಕಾರ್ಯಕರ್ತ ರಾಘವೇಂದ್ರಾ.ಕೆ ಅವರು ಬರೆದ ಒಂದು ಸುಂದರ ಬರಹ ನನ್ನ ವಾಟ್ಸ್ ಆಫ್ ಗೆ ಕಳುಹಿಸಿದ್ದರು, ಇದು ಕವಿತೆ ಅಂತ ಅನಿಸದಿದ್ದರೂ ಪ್ರತಿಯೊಬ್ಬರಿಗೂ ಮನಮುಟ್ಟುತ್ತದೆ… ತಪ್ಪದೆ ಓದಿ ಯುವಕರೇ…

ಹೋದ ಜೀವಕ್ಕೆ ನ್ಯಾಯ ಒದಗಿಸುವುದು ಎಂದರೆ ಹೇಗೆ…..!!?
ನ್ಯಾಯ ಸಿಗುವುದು ಯಾರಿಗೆ?
ಅನ್ಯಾಯ ಆಗಿರುವುದು ಯಾರಿಗೆ?
ನ್ಯಾಯ ಕೊಡಿಸುವವರು ಯಾರು?

ನ್ಯಾಯಕ್ಕಾಗಿ ಹೋರಾಟ ನೆಡೆಸುವವರು ಯಾರು?
ಕೊಲೆಯಾದವರನ್ನ ಬದುಕಿಸುವರೇ ಯಾರಾದರೂ?
ಕೊಲೆಯಾದವರ ಕೊನೆಯ ಕ್ಷಣಗಳು ಹೇಗಿದ್ದವು ಎಂಬುದನ್ನ ಅರಿಯಬಲ್ಲರೇ ಯಾರಾದರೂ?
ಕೊಲೆಯಾದವರಿಗೆ ಯಾವ ರೀತಿಯ ನ್ಯಾಯ ಬೇಕೆಂಬುದನ್ನ ಕೇಳಿ ತಿಳಿಯಬಲ್ಲರೆ ಯಾರಾದರೂ?

ಸತ್ತವನ ಹೆತ್ತವರ ಕಣ್ಣೆರು ವರಿಸುವರೆ ಯಾರಾದರೂ?
ಹಡೆದಾಕೆಯ ಆಕ್ರಂದನಕ್ಕೆ ಧ್ವನಿ ಯಾಗುವರೇ ಯಾರಾದರೂ?
ಮುಪ್ಪಿನಲ್ಲಿ ಆರೈಕೆ ಮಾಡಬೇಕಿದ್ದ ಮಗನ ಸ್ಥಾನ ತುಂಬುವರೆ ಯಾರಾದರೂ?
ಮಗನೇ ಎಂಬ ವಾತ್ಸಲ್ಯದ ಕರೆಗೆ ‘ಅಮ್ಮಾ’ ಎಂದು ಓಗೊಡುವ ಕರುಳಬಳ್ಳಿಯಾಗುವರೆ ಯಾರಾದರೂ….??

ಹಿಂದಿನ ಮಾರಣಾಂತಿಕ ಹಲ್ಲೆಗಳ ಕಂಡರಿದು ಮುಂದಾಗುವ ಹಲ್ಲೆಗಳ ತಡೆಯ ಬಲ್ಲರೆ ಯಾರಾದರೂ..?
ಒಂದು ಹೋರಾಟ ಇನ್ನೊಂದು ಜೀವ ಹೋಗುವ ತನಕ

ಗೆದ್ದವರು ಬಿಟ್ಟಿ ಭಾಷಣ ಬಿಗಿದು ಆಳುತ್ತಿದ್ದಾರೆ
ಅವರ ಗೆಲುವಿಗಾಗಿ ಶ್ರಮಿಸಿದವರು ಬೀದಿಯ ಹೆಣವಾಗುತ್ತಿದ್ದಾರೆ
ಪ್ರತ್ಯಕ್ಷ ದರ್ಶಿಗಳು ಭಯದಿಂದ ನಡಗುತ್ತಿದ್ದಾರೆ
ಪ್ರತಿಕಾರಕ್ಕೆ ಕರೆ ಕೊಡುವವರು ಅಂಗರಕ್ಷಕರೊಂದಿದೆ ಓಡಾಡುತ್ತಾರೆ

ಸಾಮಾನ್ಯ ತಾಯಿಯ ಕರುಳಕುಡಿ
ರಕ್ತದ ಮಡುವಿನಲ್ಲಿ ಬೀಳುತ್ತಿದ್ದಾರೆ
ಯಾರದೋ ಲಾಭಕ್ಕೆ ಇನ್ಯಾರನ್ನೋ ಬಲಿಕೊಡುವ ನೀಚ ರಾಜಕೀಯ
ಧರ್ಮರಕ್ಷಣೆಯ ಹೆಸರಲ್ಲಿ ರಾಜಕೀಯ ಪಿತೂರಿ

ಹುಟ್ಟುವಾಗ ಇಂತಹದೇ ಧರ್ಮದಲ್ಲಿ ಹುಟ್ಟಬೇಕು ಎಂದು ಯಾರಾದರೂ ನಿರ್ಧರಿಸಿ ಜನ್ಮಪಡೆಯಲು ಸಾಧ್ಯವಾದೀತೆ….!? ಅಸಾಧ್ಯವೆಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ಹುಟ್ಟಿದ ಧರ್ಮಕ್ಕೆ ಗೌರವಿಸುತ್ತ ಎಲ್ಲರನ್ನು ಪ್ರೀತಿಸುತ್ತ ಬದುಕುವುದನ್ನ ಎಲ್ಲರೂ ಮೈಗೂಡಿಸಿಕೊಂಡು ಬಾಳಿದರೆ ಇಂತಹ ಅಮಾಯಕ ಜೀವಗಳ ಬಲಿಯಾಗುವ ಅವಶ್ಯಕತೆ ಬಂದೀತೆ…

ಯಾವ ಧರ್ಮದ ದೇವರು ಬಂದು ನನಗಾಗಿ ಹೋರಾಡು ಎಂದು ಹೇಳುವುದಿಲ್ಲ, ಇಲ್ಲ ಸಲ್ಲದ ವಿಚಾರಗಳಿಗಾಗಿ ತನ್ನ ಮಕ್ಕಳನ್ನು ಕಳೆದುಕೊಳ್ಳುವ ಹೆತ್ತವರ ಕೂಗು ಮಾತ್ರ ಯಾವ ದೇವರಿಗು ಕೇಳುವುದಿಲ್ಲ.

ಒಗ್ಗಟ್ಟಿರಲಿ ಯಶಸ್ಸಿನೆಡೆಗೆ
ಒಗ್ಗಟ್ಟಿರಲಿ ಗೆಲುವಿನೆಡೆಗೆ
ಹೊರಾಟವಿರಲಿ ಬದುಕಿನೆಡೆಗೆ
ಹೋರಾಟದಿಂದ ಜಯಿಸೇವು ಏನನ್ನಾದರು
ಹೊಡೆದಾಟದಿಂದ ಸೇರುತ್ತೇವೆ ಶವಪೆಟ್ಟಿಗೆಯನ್ನೇ ಎಲ್ಲರೂ……


  • ರಾಘವೇಂದ್ರ.ಕೆ (ಸಮಾಜ ಸೇವಕರು, Kannadigana Creations ಸಂಸ್ಥಾಪಕರು, ಹವ್ಯಾಸಿ ಬರಹಗಾರರು) ನೊಣಬೂರು. 

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW