ಸ್ಪೂರ್ತಿಯ ಬರಹಗಳಿಗೆ ಆಹ್ವಾನ. ಬರೆಯಿರಿ… ಇನ್ನೊಬ್ಬರಿಗೆ ಸ್ಪೂರ್ತಿಯಾಗಿ…
‘೨೦೨೦ ಕರೋನ ವರ್ಷ’ ಎಂದೇ ಗುರುತಿಸುವಂತಾಯಿತು. ಇದು ಎಲ್ಲರ ಬದುಕಿನಲ್ಲಿ ಎಂದು ಮರೆಯದ ಅಚ್ಚಳಿಯದ ವರ್ಷವಾಗಿ ಹೋಯಿತು. ಎಷ್ಟೋ ಕಾರ್ಮಿಕರು ಕೆಲಸ ಕಳೆದುಕೊಂಡು ತಮ್ಮ ಹುಟ್ಟೂರಿನಲ್ಲಿ ನೆಲೆ ಕಂಡುಕೊಂಡರೆ, ಇನ್ನು ಕೆಲವರು ಭರವಸೆಯನ್ನು ಕಳೆದುಕೊಳ್ಳದೆ ಈಸಬೇಕು ಇದ್ದು ಜಯಿಸಬೇಕು ಎಂದುಕೊಂಡು ಇದ್ದ ಊರಿನಲ್ಲಿ ಕಷ್ಟ ಪಟ್ಟು ಮುನ್ನುಗುತ್ತಿದ್ದಾರೆ.
ಕರೋನ ಮಹಾಮಾರಿಯನ್ನು ನೆನೆದಷ್ಟು ನೋವುಗಳ ಅಲೆಗಳೇಳುತ್ತವೆ. ಆದರೆ ಅವನ್ನೆಲ್ಲ ಮರೆತು ಕರೋನಾವನ್ನು ಇನ್ನೊಂದು ದೃಷ್ಟಿಕೋನದಲ್ಲಿ ನೋಡಿದಾಗ ಬದುಕಿಗೆ ಪಾಠವನ್ನು ಹೇಳಿಕೊಟ್ಟಂತಹ ವರ್ಷ. ಅಂತಹ ಸೂರ್ತಿಯ ಕತೆ ನಿಮ್ಮಲ್ಲಿದ್ದರೆ ಅಥವಾ ನಿಮ್ಮಲ್ಲಿಯೇ ಒಬ್ಬರಿದ್ದರೇ ಅವರ ಸೂರ್ತಿಯ ಕತೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೊಸ ಹುರುಪಿನಿಂದ ಮುನ್ನಡೆಯೋಣ.
೨೦೨೧ ವರ್ಷ ಶುಭ ಆರಂಭವಾಗಲಿ ಮತ್ತು ಉತ್ಸಾಹವನ್ನು ತುಂಬುವ ಪ್ರಯತ್ನವನ್ನು ಆಕೃತಿ ಕನ್ನಡ ಮಾಡುತ್ತಿದೆ.
ಸ್ಪೂರ್ತಿಯ ಕತೆಗಳು, ಲೇಖನಗಳನ್ನೂ, ಕವನಗಳನ್ನು ನಮಗೆ aakritikannada@gmail.com ಗೆ ಬರೆದು ಕಳುಹಿಸಬಹುದು ..