ಆ ಪ್ರೀತಿಯ ಸಾಲುಗಳಿಗೆ ಒಂದು ಸುಂದರವಾದ ಶೀಷಿ೯ಕೆಯನ್ನ ಕೊಟ್ಟವಳು ನೀನು….ಕವಿ ನಿಜಗುಣಿ ಎಸ್ ಕೆಂಗನಾಳ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ತಪ್ಪದೆ ಮುಂದೆ ಓದಿ….
ಬೆಳಗುವ ಜ್ಯೋತಿಯಂತೆ ನೀನು.
ನಿನ್ನೆದುರಿನ ಹಣತೆಯಂತೆ ನಾನು.
ಅರಳುವ ಹೂವಿನಂತೆ ನೀನು.
ನಿನ್ನೊಳಗಿನ ದುಂಬಿಯಂತೆ ನಾನು.
ನನ್ನೊಳಗೆ ಪ್ರತಿನಿತ್ಯವೂ ಅರಳುವ
ಸುಂದರವಾದ ಕನಸುಗಳೇ ನೀನು.
ಆ ಸುಂದರವಾದ ಬಣ್ಣದ ಕನಸುಗಳಿಗೆ
ಕವಿತೆಯಾಗಿ ಬಂದಿರುವವನು ನಾನು.
ಈ ಮನಸೆಂಬ ಹಾಳೆಯಲ್ಲಿ ಪ್ರೀತಿಯ
ಸಾಲುಗಳನ್ನ ಬರೆದವಳು ನೀನು.
ಆ ಪ್ರೀತಿಯ ಸಾಲುಗಳಿಗೆ ಒಂದು
ಸುಂದರವಾದ ಶೀಷಿ೯ಕೆಯನ್ನ
ಕೊಟ್ಟವಳು ನೀನು.
ಆಕಾಶದಲ್ಲಿ ಹೊಳೆಯುವ ತಾರೆಗಳನ್ನ
ಈ ಧರೆಯಲ್ಲಿ ಕಾಣುವ ಜೀವಗಳನ್ನ
ಎಲ್ಲವೂ ಬದಲಾಯಿಸಿದ ದೇವತೆ ನೀನು.
ಈ ದೇವತೆಯ ಅಮರ ಪ್ರೇಮಿಯಾಗಿರುವೆ
ನಾನು.
- ನಿಜಗುಣಿ ಎಸ್ ಕೆಂಗನಾಳ, ಸಾಹಿತಿಗಳು ರಂಗಭೂಮಿ , ಕಲಾವಿದರು ಕಲಬುರಗಿ