ಪ್ರಾಣಿಗಳಲ್ಲಿ ಸಾವಿನ ಸಂವೇದನೆ – ಡಾ. ಎನ್.ಬಿ.ಶ್ರೀಧರ

ಪ್ರಾಣಿಗಳು ಸಾಯುವ ಬಗೆಯನ್ನು ಅಧ್ಯಯನ ಮಾಡುವ ವಿಧಾನವನ್ನು “ಥಾನಟಾಲಾಜಿ” ಎನ್ನುತ್ತಾರೆ. ಹಾಗಿದ್ದರೆ ಪ್ರಾಣಿಗಳು ಅವುಗಳ ಸಾವನ್ನು ಹೇಗೆ ಸ್ವೀಕರಿಸುತ್ತವೆ ಎಂಬ ಬಗ್ಗೆ ಒಂದಿಷ್ಟು ಕುತೂಹಲಗಳಿವೆ. ಅವುಗಳ ಬಗ್ಗೆ ಪಶುವೈದ್ಯಾಧಿಕಾರಿ ಡಾ. ಎನ್.ಬಿ.ಶ್ರೀಧರ ಅವರು ಬರೆದಿರುವ ಈ ಲೇಖನವನ್ನು ತಪ್ಪದೆ ಮುಂದೆ ಓದಿ….

ಪ್ರಾಣಿಗಳು ಸಾಯುವ ಬಗೆಯನ್ನು ಅಧ್ಯಯನ ಮಾಡುವ ವಿಧಾನವನ್ನು “ಥಾನಟಾಲಾಜಿ” ಎನ್ನುತ್ತಾರೆ. ಹುಟ್ಟಿದ ಪ್ರತಿ ಪ್ರಾಣಿಯೂ ಸಹ ಅಂತ್ಯವನ್ನು ಸವಿನಲ್ಲಿ ಕಾಣಬೇಕು. ಹಾಗಿದ್ದರೆ ಪ್ರಾಣಿಗಳು ಅವುಗಳ ಸಾವನ್ನು ಹೇಗೆ ಸ್ವೀಕರಿಸುತ್ತವೆ ಎಂಬ ಬಗ್ಗೆ ಒಂದಿಷ್ಟು ಕುತೂಹಲಗಳಿವೆ. ಅದರಲ್ಲಿಯೂ ಸಹ ಮಂಗಗಳ ಸಾವು ಬಹುಚರ್ಚಿತ. ಈಗ ಕೆಲದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಮಂಗಗಳ ಸಾವಿನ ಬಗ್ಗೆ ಸುದ್ಧಿಯೊಂದು ಮೂಡಿತ್ತು. ಮಂಗಗಳು ಸಾಯುವ ಸೂಚನೆ ಸಿಕ್ಕ ನಂತರ ಒಂದು ಶಾಂತ ಸ್ಥಳವನ್ನು ಆರಿಸಿ ಕುಳಿತುಕೊಂಡು ನೀರು ಮತ್ತು ಆಹಾರವನ್ನು ಬಿಟ್ಟು ಉಪವಾಸ ನಡೆಸಿ ಪ್ರಾಣ ತ್ಯಜಿಸುತ್ತವೆ ಮತ್ತು ಅವುಗಳ ದೇಹವನ್ನು ಗೆದ್ದಲು ಅಥವಾ ಇತರ ಜೀವಿಗಳಿಗೆ ಆಹಾರವಾಗುವ ನಿಟ್ಟಿನ ಪ್ರಜ್ಞೆ ಮೆರೆಯುತ್ತವೆ. ಅಲ್ಲದೇ ಸತ್ತ ಮಂಗನ ಶರೀರವನ್ನು ಎಲ್ಲಿದ್ದರೂ ಎಳೆದು ತಂದು ಗೆದ್ದಲು ಜಾಸ್ತಿ ಇರುವ ಹುತ್ತದ ಸಮೀಪ ಇಡುತ್ತವೆ… ಇತ್ಯಾದಿ. ಇವೆಲ್ಲಾ ಎಷ್ಟರ ಮಟ್ಟಿಗೆ ಸತ್ಯ? ವೈಜ್ಞಾನಿಕ ಅಧ್ಯಯನ ನಡೆದಿದೆಯೇ? ಸಾವಿನ ಬಗ್ಗೆ ಎಷ್ಟು ಪ್ರಾಣಿಗಳಿಗೆ ಕಲ್ಪನೆ ಇದೆ? ಇತ್ಯಾದಿ.

ಫೋಟೋ ಕೃಪೆ : google

ಇಲ್ಲಿದೆ ಒಂದಿಷ್ಟು ವಿಷಯಗಳು. ನಿಜ, ಇತರ ಪ್ರಾಣಿಗಳಿಗಿಂತ ಮಂಗಗಳಿಗೆ ಮನುಷ್ಯನಂತೆ ಭಾವನೆಗಳು ಜಾಸ್ತಿ. ಮಾನವನ ನಿಕಟ ಸಂಬಂಧಿಗಳಾಗಿರುವ ಕೋತಿಗಳು ಮತ್ತು ಚಿಂಪಾ0ಜಿಗಳು ಸಹವರ್ತಿಗಳು ಸಾವನ್ನಪ್ಪಿದಾಗ ಕೆಲವೊಮ್ಮೆ ಮನುಷ್ಯರಂತೆ ನಡುವಳಿಕೆ ತೋರಿಸುತ್ತವೆ. ಕೋತಿಗಳಿಗೆ ಒಂದಲ್ಲ ಒಂದು ದಿನ ಸಾವು ಬರುತ್ತದೆ ಎಂಬ ಬಗ್ಗೆ ಎಷ್ಟು ಅರಿವು ಇರುತ್ತದೆ ಎಂಬ ಬಗ್ಗೆ ತಿಳಿದ ಬಗ್ಗೆ ಮಾಹಿತಿ ಇಲ್ಲ. ಈ ಮಾಹಿತಿ ಅನೇಕ ಪ್ರಾಣಿಗಳಿಗೂ ಇಲ್ಲ. ಆದರೆ ಅವುಗಳಿಗೆ ಸಾಯುವ ಭಯ ಇದ್ದೇ ಇದೆ.

ಸತ್ತ ಶರೀರವನ್ನು ವಿಲೇವಾರಿ ಮಾಡುವ ಬಗ್ಗೆ ಜೇನುಹುಳು, ಇರುವೆ, ಗೆದ್ದಲುಗಳಂತ ಕೀಟಗಳು ಸಹ ಅರಿವು ಹೊಂದಿದ್ದು ಗೂಡಿನಿಂದ ಸತ್ತ ಕೀಟಗಳನ್ನು ಹೊರಹಾಕುತ್ತವೆ ಮತ್ತು ಸ್ವಚ್ಚಗೊಳಿಸುತ್ತವೆ. ಅದರಲ್ಲಿಯೂ ಜೇನುಹುಳಗಳು ಅವುಗಳಷ್ಟೇ ಭಾರವಾಗಿರುವ ಸತ್ತ ಹುಳವನ್ನು 100 ಮೀಟರ್ ದೂರದಷ್ಟು ಒಯ್ದು ವಿಲೇವಾರಿ ಮಾಡುತ್ತದೆ. ಇದಕ್ಕೆ ಸತ್ತ ಕೀಟಗಳಿಂದ ಹೊರಹೊಮ್ಮುವ ಒಲಿಯಿಕ್ ಆಮ್ಲವೂ ಸಹ ಕಾರಣ. ಜೀವಂತ ಜೇನುಹುಳಗಳಿಗೆ ಈ ಆಮ್ಲವನ್ನು ಬಳಿದರೂ ಸಹ ಅವುಗಳನ್ನು ಆಚೆ ಅಟ್ಟುವ ವರ್ತನೆ ತೋರುತ್ತವೆ. ಈ ವರ್ತನೆಯನ್ನು ನೆಕ್ರೊಫೊರೆಸಿಸ್ ಎನ್ನುತ್ತಾರೆ.

ಸಾವು ಸಹಜವಾಗಿ ಪ್ರಾಣಿಗಳಲ್ಲಿ ದು:ಖವನ್ನು ತರುತ್ತದೆ ಎನ್ನುವುದಕ್ಕೆ ಆಧಾರಗಳಿವೆ. ಸಂಗಾತಿ ಅಥವಾ ಮಾಲಕ ತೀರಿಕೊಂಡಾಗ ಅನೇಕ ಶ್ವಾನಗಳು ಮೂಲೆ ಹಿಡಿದು ಕುಳಿತುಬಿಡುವ ಅಥವಾ ಆಹಾರ ಸೇವಿಸದಿರುವ ಅನೇಕ ನಿದರ್ಶನಗಳಿವೆ. ಕೆಲವೊಮ್ಮೆ ಚಿಂಪಾ೦ಜಿಗಳು ಸಂಗಾತಿ ಹೆಣ್ಣು ಚಿಂಪಾ0ಜಿಯ ಸಾವಾದಾಗ ಅತ್ಯಂತ ವ್ಯಗ್ರವಾಗಿ ವರ್ತಿಸುವುದು ಸಹ ಇದೆ. ಕಳೆಬರವನ್ನು ಎಳೆದಾಡುವುದು, ಹೊತ್ತೊಯ್ಯುವುದು, ವಿಚಿತ್ರ ಸ್ವರದಲ್ಲಿ ಕೂಗುವುದು ಇತ್ಯಾದಿಗಳನ್ನು ಸಹ ಅವು ತೋರಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಗಂಡು ಚಿಂಪಾAಜಿ ಸತ್ತಾಗ ಅದರ ಶವವನ್ನು ಪರಿಶೀಲಿಸಿದರೂ ಸಹ ಅದನ್ನು ಮುಟ್ಟುವ ಸಾಹಸಕ್ಕೆ ಹೋಗುವುದಿಲ್ಲ. ಕೆಲವೊಮ್ಮೆ ಶವವನ್ನು ಗಿಡಗಳ ಎಲೆಯಿಂದ ಮುಚ್ಚಿ ಯಾರಿಗೂ ಕಾಣದ ಹಾಗೆಯೂ ಸಹ ಮಾಡುತ್ತವೆ. ಆದರೆ ಅವುಗಳ ಮರಿಗಳು ಸತ್ತಾಗ ಮಾತ್ರ ಅವು ಭಾರಿ ಮಟ್ಟಕ್ಕೆ ಮಾನಸಿಕ ಆಘಾತಕ್ಕೆ, ಖಿನ್ನತೆಗೆ ಒಳಗಾದವು ಮತ್ತು ಅವುಗಳ ಶರೀರದಲ್ಲಿ ವಿವಿಧ ಹಾರ್ಮೋನುಗಳು ಮತ್ತು ಸ್ಟಿರಾಯ್ಡುಗಳ ಮಟ್ಟ ಏರುಪೇರಾಯಿತು.

ಫೋಟೋ ಕೃಪೆ : google

ಡಾಲ್ಫಿನ್ನುಗಳು ಸಹ ಅವುಗಳ ಮರಿ ಸತ್ತಾಗ ಅದನ್ನು ತೇಲಿಸುತ್ತಾ ಒಯ್ಯುತ್ತವೆ ಮತ್ತು ಸತ್ತ ಸ್ಥಳದಲ್ಲಿಯೇ ಸುತ್ತುತ್ತಾ ಇರುತ್ತವೆ ಎನ್ನಲಾಗಿದೆ. ಆದರೆ ಪ್ರಾಣಿಗಳಲ್ಲಿ “ದು:ಖ” ಎಂಬ ‘ಭಾವನೆ’ ಇದೆ ಎಂಬ ಬಗ್ಗೆ ಪುರಾವೆಯಿಲ್ಲ ಎನ್ನಲಾಗಿದೆ.

ಮೆದುಳಿನ ತೂಕ ಜಾಸ್ತಿ ಇರುವ ಆ , ಕುದುರೆ, ಒಂಟೆೆಯ೦ತ ಪ್ರಾಣಿಗಳು ಸಹ ಸಂಗಾತಿ ಅಥವಾ ಒಡನಾಡಿ ಸತ್ತಾಗ ತೀವ್ರವಾದ ಗಲಿಬಿಲಿಯನ್ನು ವ್ಯಕ್ತಪಡಿಸುತ್ತವೆ. ಆಕಳುಗಳು ಮತ್ತು ಎಮ್ಮೆಗಳು ಕರು ಇದ್ದಕ್ಕಿದ್ದ ಹಾಗೆ ತೀರಿಕೊಂಡಾಗ ಸ್ವಲ್ಪ ಆತಂಕವನ್ನು ತೋರಿಸಿದರೂ ಸಹ ಬೇಗ ಚೇತರಿಸಿಕೊಂದು ದೈನಂದಿನ ಚಟುವಟಿಕೆಯನ್ನು ಮುಂದುವರೆಸುತ್ತವೆ.

ಮನುಷ್ಯರಿಗೆ ಅರಿವಿರುವಂತೆ ಒಂದಲ್ಲಾ ಒಂದು ದಿನ ಸಾಯಲೇಬೇಕು ಎಂಬ ಬಗ್ಗೆ ಅಥವಾ ಅವುಗಳ ಜೀವಿತ ಕಾಲದ ಬಗ್ಗೆ ಪ್ರಾಣಿಗೆಳಿಗೆ ಅರಿವೇ ಇರುವುದಿಲ್ಲ ಎನ್ನಲಾಗಿದೆ. ಕಾರನ ಅವು ಬದುಕಿದ್ದಷ್ಟು ದಿನ ಖುಷಿಯಿಂದ ಇರಬಹುದೇನೋ?

ಕಾರಣ ಮನುಷ್ಯರಿಗೆ ಹೋಲಿಸಿದರೆ ಪ್ರಾಣಿಗಳಿಗೆ ಸಾವಿನ ಸಂವೇದನೆ ಕಡಿಮೆ ಎಂದರೂ ಸಹ ಅದರ ಮಟ್ಟ ಎಷ್ಟು ಎಂಬ ಬಗ್ಗೆ ಅಧ್ಯಯನದ ಅವಶ್ಯಕತೆ ಇದೆ.


  • ಡಾ. ಎನ್.ಬಿ.ಶ್ರೀಧರ , ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW