‘ಅರಿವಿನ ನೀನಾದ’ ಕವನ – ಪ್ರೊ. ರೂಪೇಶ್ ಪುತ್ತೂರು



ಅರಿವಿನ ತುಣುಕನ್ನು ಶೇಖರಿಸುತ್ತಾ ನಾ ಹೃದಮೋದ ಬಿಂದುವಾದೇನೋ… ಪ್ರೊ. ರೂಪೇಶ್ ಅವರು ಕವನದಲ್ಲಿ ಬರುವಂತಹ ಸಾಲುಗಳು, ತಮ್ಮ ಬರವಣಿಗೆಯಿಂದ ಓದುಗರಿಗೆ ಸದಾ #ರಸದೌತಣ ನೀಡುವ ಪ್ರೊ ರೂಪೇಶ್ ಅವರ ಕವನ, ಲೇಖನ ಓದುವುದೇ ಒಂದು ರೀತಿಯ ಸಂತೋಷ. ಓದಿ ನಿಮ್ಮ ಅಭಿಪ್ರಾಯವನೊಮ್ಮೆ ಹಂಚಿಕೊಳ್ಳಿ…

ನವಿರೇಳಿಸುವ ಉಪಜೀವನದ ಸುಂದರ
ಹಾದಿಯಲಿ ಪಯಣಿಗರಾದವರಿಂದ…
ಅರಿವಿನ ತುಣುಕನ್ನು ಶೇಖರಿಸುತ್ತಾ ನಾ
ಹೃದಮೋದ ಬಿಂದುವಾದೇನೋ……

ಹಿಮಚ್ಛಾದಿತೆತ್ತರದ ಭೂಮಿಯಿಂದ ನೀ
ಪ್ರಣಯ ಪ್ರವಾಹದಂತೆ ಬಂದೆ.
ಅತಿ ಗೂಢ ಸುಸ್ಮಿತ ಅಂತರಂಗದೊಳಗುದುಗಿಸುವ
ಅತಿಲೋಲ ಸಾಂತ್ವನವಾದೆ

ನಿಮಿಷದೊಳ್ ಎನ್ ಅಂಗೈಯೊಳ್ ಲೇಪಿತ
ನೀಲಾಂಜನತೀರ್ಥವಾದೆ
ಕ್ಷಣಾಂತರದೊಳ್ ಪುರುಷಾಂತರಂಗವ ಶೀತಲಾವಾಗಿಸುವ
ಪೀಯೂಷವಾಹಿನಿಯಾದೆ.

ನಿನ್ನನಂದು ಪಡೆಯದವನಾದ ನಾ
ಯಾವುದೋ ದಿವ್ಯಸ್ವಪ್ನವಾದೆ.
ಭೋದ ಅಭೋದವಾಗಿ ಮಾರ್ಪಾಡುವ
ಲಹರಿಯೊಳ್ ನಾ ಶ್ವೇತ ಪರಾಗವಾದೆ.

ಕಾಲವು ಗಾಢಭೂತವನ್ನಲಂಕರಿಸಿದಾಚೆ
ಕಾಣದದೂರದ ತೀರದಿ
ಕಾಣದಾದೇ ನಾ ನನ್ನ ಸ್ವ-ಸ್ಮೃತಿಗಳಿಂದಾದರೂ
ಎಚ್ಚರಿಸಲಲ್ಲಿ ನೀನಿದ್ದೆ ಸನಿಹದಿ,

ನವಿರೇಳಿಸುವ ಉಪಜೀವನದ ಸುಂದರ
ಹಾದಿಯಲಿ ಪಯಣಿಗರಾದವರಿಂದ…
ಅರಿವಿನ ತುಣುಕನ್ನು ಶೇಖರಿಸುತ್ತಾ ನಾ
ಹೃದಮೋದ ಬಿಂದುವಾದೇನೋ……

ನಿಮ್ಮವ ನಲ್ಲ
ರೂಪು


  • ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು)ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading