ಅವರೆ ಕಾಳಿನ ಮಹಿಮೆ…



ಅವರೇ ಕಾಯಿ ‘ವಾತ’ ಎಂದು ಹೇಳಿದರೂ ನಾಲಿಗೆಗೆ ಬೇಕು ಅದರ ರುಚಿ. ಅವರೇ ಮಹಿಮೆಯ ಬಗ್ಗೆ ಮೇಗರವಳ್ಳಿ ರಮೇಶ್ ಅವರ ಒಂದು ಬರಹ ನಿಮ್ಮ ಮುಂದಿದೆ…

ಡಿಸೆ೦ಬರ್ – ಜನವರಿ ತಿ೦ಗಳು ಬ೦ತೆ೦ದರೆ ಸಾಕು
ಅವರೆ ಕಾಳಿನ ರಾಶಿ ರಾಶಿ ಮಾರ್ಕೆಟ್ ನಲ್ಲಿ
ಕೆ ಜಿ ಗಟ್ಟಲೆ ತ೦ದು ಬಿಡಿಸುವ
ಅವರೆ ಕಾಳಿನ ಸೊಗಡಿನ ಅಡಿಗೆ ತಿ೦ಡಿಗಳು
ಓಹ್… ರ್ಗಕೆ ಕಿಚ್ಚು ಹಚ್ಚ ಬೇಕು !

ಅವರೆ ಕಾಳು ಬಿಡಿಸಲು
ನಾನೂ ಜತೆ ಗೂಡುತ್ತೇನೆ ಒಮ್ಮೊಮ್ಮೆ ನನ್ನವಳೊ೦ದಿಗೆ
ಕೆಲವು ಕೊಳೆತ ಸಿಪ್ಪೆಗಳು
ಆದರೂ ಒಳಗೆ ಗಟ್ಟಿ ಕಾಳು
ಮತ್ತೆ ಕೆಲವು ಜೊಳ್ಳುಗಳು
ಕೆಲವು ನೋಡಲು ಮೈದು೦ಬಿ ಕೊ೦ಡು ಚೆ೦ದ
ಬಿಡಿಸಿದರೆ ಒಳಗೆ ಹಸಿರು ಹುಳ ಮುಲು ಮುಲು
ಒಳಗಿನ ಕಾಳೆಲ್ಲ ಧ್ವ೦ಸ !

ಫೋಟೋ ಕೃಪೆ : The Indian Express



ನನ್ನವಳಿಗೋ ಆ ಹುಳು ನೋಡಿದರೇ ಅಸಹ್ಯ
ಸಿಪ್ಪೆ ಒಟ್ಟು ಮಾಡಿ ಮೊರಕ್ಕೆ ತು೦ಬುವಾಗ
ಆ ಹಸಿರು ಹುಳ ಕೈಗ೦ಟಿ ನನ್ನವಳ ಚೀತ್ಕಾರ
ಕಾ೦ಪೌ೦ಡಿನಾಚೆ ಎಸೆದ ಮರುಕ್ಷಣ
ಕಾದಿದ್ದ ಕಾಗೆಗಳ ಕೊಕ್ಕಿನ ಹಿಡಿತದಲ್ಲಿ ಆ ಹುಳುಗಳು
ಸಿಪ್ಪೆ ಸವಿಯುವ ಎಮ್ಮೆ, ಹಸುಗಳು !

ಹೇಳುತ್ತಾರೆ ಹಲವರು ಅವರೇ ಕಾಳು ‘ವಾಯು” ಎ೦ದು
ಆದರೂ ಬೇಕು ಬದುಕಿಗೆ ಅದರ ಜೀವ ಸತ್ವ
ಅವರೇ ಕಾಳು ರುಚಿಕರ ಆಹಾರ ನಮ್ಮೆಲ್ಲರಿಗೆ
ಅದೇ ಕಾಳು ಆಹಾರ ಅದರೊಳಗಿನ ಹುಳಕ್ಕೆ
ಆ ಹುಳ ಆಹಾರ ಕಾಗೆಗೆ
ಅದರ ಸಿಪ್ಪೆ ಆಹಾರ ಎಮ್ಮೆ- ಹಸುಗಳಿಗೆ!

ಜೀವ ಜಾಲದ ಚಕ್ರ
ಸುತ್ತುತ್ತಲೇ ಇದೆ ಹೀಗೇ
ಅನ೦ತ ಕಾಲದಿ೦ದ
ಅನ೦ತ ಪ್ರಕೃತಿಯೊಳಗೆ!




  • ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)

3 2 votes
Article Rating

Leave a Reply

1 Comment
Inline Feedbacks
View all comments
ರಘುರಾಂ

ಜೀವ ಜಾಲದ ಚಕ್ರ – ಚೆನ್ನಾಗಿದೆ ಸರ್

All Articles
Menu
About
Send Articles
Search
×
1
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW