‘ಬಂಡಾಯದ ಕವಿಗಳು’ ಕವನ – ಜಿ.ಎಸ್.ಶರಣು

‘ಬಂಡಾಯದ ಸಾಹಿತ್ಯ ಬರೆಯೋಣ…ಹೋರಾಟದ ಹಾಡುಗಳ ರಚಿಸೋಣ’…ಕವನದ ಮೊದಲ ಸಾಲುಗಳಿವು, ಯುವ ಕವಿ ಜಿ.ಎಸ್.ಶರಣು ಅವರು ರಚನೆಯ ‘ಬಂಡಾಯದ ಕವಿಗಳು’ ಕವನವನ್ನು ತಪ್ಪದೆ ಓದಿ..

ಬಂಡಾಯದ ಸಾಹಿತ್ಯ ಬರೆಯೋಣ
ಹೋರಾಟದ ಹಾಡುಗಳ ರಚಿಸೋಣ
ಕ್ರಾಂತಿಯ ಕಿಡಿ ಹೊತ್ತಿಸೋಣ
ನ್ಯಾಯದ ಚಳುವಳಿಗೆ ನಾಂದಿ ಹಾಡೋಣ

ಕವಿ ಬಳಗ ಪಣತೊಡಣ
ಪಟ್ಟು ಹಿಡಿದು ನಿಲ್ಲೋಣ
ಬಂದವರು ಬರಲಿ ಎನ್ನೋಣ
ಸತ್ಯಕ್ಕೆ ತಲೆಬಾಗಿ ನಡೆಯೋಣ

ನೀತಿವಂತರು ಹೇಳಿದರೆ ಕೇಳೋಣ
ನಿಯತ್ತಿಲ್ಲದವರು ಹೇಳಿದರೆ ಸಾಗೋಣ
ಬಂಡಾಯದ ಸಾಹಿತ್ಯ ಕಿಡಿಗಳ
ಶಕ್ತಿ ಮನವರಿಕೆ ಮಾಡೋಣ

ಬದುಕೆಂದರೆ ಬದುಕು
ಬಂಡಾಯದ ಕವಿಗಳ ಬದುಕೆಂದು
ಪ್ರಪಂಚವೇ ಕೂಗಿ ನ್ಯಾಯದ ಪರ ನಿಲ್ಲುವವರೆಗೂ
ಸಾಹಿತ್ಯದ ಹೋರಾಟದಲ್ಲಿ ಬಿಳೋಣ


  • ಜಿ.ಎಸ್.ಶರಣು – ಯುವ ಕವಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading