‘ಕನ್ನಡದ ತೇರ ನೆಳೆಯೋಣ ಬನ್ನಿ’ ಕವನಗಳು – ಮೇಗರವಳ್ಳಿ ರಮೇಶ್

‘ಕನ್ನಡದ ಕವಿಗಳಿಗೆ ನಮಿಸೋಣ ಬನ್ನಿ, ಕನ್ನಡದ ಗೀತೆಗಳ ಹಾಡೋಣ ಬನ್ನಿ’ …ಕವಿ ಮೇಗರವಳ್ಳಿ ರಮೇಶ್ ಅವರ ಲೇಖನಿಯಲ್ಲಿ ಅರಳಿದ ಕವನ, ತಪ್ಪದೆ ಓದಿ …

ಕನ್ನಡದ ತೇರ ನೆಳೆಯೋಣ ಬನ್ನಿ
ಕನ್ನಡಾ೦ಬೆಯ ನಾವು ಮೆರೆಸೋಣ ಬನ್ನಿ
ಕನ್ನಡದ ಜಯ ಘೋಷ ಮುಗಿಲು ಮುಟ್ಟುತಲಿರಲು
ಕನ್ನಡಾ೦ಬೆಯ ತೇರನೆಳೆಯೋಣ ಬನ್ನಿ.

ಕೃಷ್ಣೆ ಕಾವೇರಿಯಲಿ ಮಿ೦ದು ಬನ್ನಿ
ಜಾತಿಮತ ಭೇದಗಳ ಕೊಳೆ ತೊಳೆದು ಬನ್ನಿ.
ಕನ್ನಡದ ಶ್ರೀಗ೦ಧ ಪೂಸಿ ಬನ್ನಿ
ಕನ್ನಡದ ನಾಡಾಗಿ ಮುನ್ನಡೆದು ಬನ್ನಿ.

ಸಾಹಿತ್ಯ ಸ೦ಸ್ಕೃತಿಯ ಹಸಿರು ತೋರಣವಿರಲಿ
ಕನ್ನಡದ ಹೂಮಾಲೆ ತೂಗುತಿರಲಿ
ಕನ್ನಡದ ಹೂಗ೦ಧ ತ೦ಗಾಳಿಯಲಿ ಬೆರೆತು
ಗ೦ಧ ಮಾದನದ೦ತೆ ಘಮ ಘಮಿಸುತಿರಲಿ.

ಕನ್ನಡವೇ ನಮ್ಮ ನುಡಿ, ಕನ್ನಡವೇ ನಮ್ಮುಸಿರು
ಕನ್ನಡಾ೦ಬೆಯೆ ನಮ್ಮ ಹೆತ್ತ ತಾಯಿ
ಕನ್ನಡವನುಳಿಸೋಣ ಕನ್ನಡವ ಬೆಳೆಸೋಣ
ಮುಚ್ಚಿಸಿ ಕನ್ನಡವ ಹಳಿವವರ ಬಾಯಿ.

ಕನ್ನಡದ ಕವಿಗಳಿಗೆ ನಮಿಸೋಣ ಬನ್ನಿ
ಕನ್ನಡದ ಗೀತೆಗಳ ಹಾಡೋಣ ಬನ್ನಿ
ಕನ್ನಡಕೆ ಹೋರಾಡಿ ಕನ್ನಡವ ಕಟ್ಟಿರುವ
ಮಹನೀಯರೆಲ್ಲರನು ನೆನೆಯೋಣ ಬನ್ನಿ.

ಕತ್ತಲೆಯ ಬಾಗಿಲನು ಒಡೆಯೋಣ ಬನ್ನಿ
ಕನ್ನಡದ ಹಣತೆಗಳ ಹಚ್ಚೋಣ ಬನ್ನಿ
ಜ್ನಾನದಾರತಿಯನ್ನು ಬೆಳಗೋಣ ಬನ್ನಿ
ಕನ್ನಡದ ತೇರನೆಳೆಯೋಣ ಬನ್ನಿ.


  • ಮೇಗರವಳ್ಳಿ ರಮೇಶ್ – ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಕವಿಗಳು, ಬೆಂಗಳೂರು

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading