ದೀರ್ಘಾಯುಷಿ ಹುಂಝಾ ಬುಡಕಟ್ಟು ಜನಾಂಗ

ಹುಂಝಾ ಬುಡಕಟ್ಟಿನ ಕುರಿತು ಡಾ. ಪ್ರಕಾಶ ಬಾರ್ಕಿ ಅವರು ಬೆರೆದ ಲೇಖನ ಒಂದು ಕುತೂಹಲ ಮೂಡಿಸುತ್ತದೆ, ಆ ಜನಾಂಗದ ಜನರ ಸರಾಸರಿ ಆಯಸ್ಸು 120 ವರ್ಷ,ಇನ್ನೂ ಕೆಲವರು 160 ವರ್ಷಗಳ ಕಾಲ ಬದುಕುತ್ತಾರಂತೆ. ಈ ಜನಾಂಗದವರಿಗೆ ವಯಸ್ಸಾದರೂ ಹರೆಯದವರಂತೆ ಕಾಣುತ್ತಾರೆ, ಇವರಿಗೆ ಕಾಯಿಲೆಗಳು ಕಡಿಮೆಯೇ, ಕ್ಯಾನ್ಸರ್’ನಂತ ಮಾರಕ ಕಾಯಿಲೆಗಳಂತೂ ತೀರಾ ವಿರಳ. ತಪ್ಪದೆ ಮುಂದೆ ಓದಿ…

ಇಂದಿನ ಜೀವನಶೈಲಿ, ಆಹಾರಕ್ರಮ ಮತ್ತು ಪರಿಸರದ ಮೇಲಿನ ತೀವ್ರ ದಬ್ಬಾಳಿಕೆಯಿಂದ ನಲುಗಿ ನಮ್ಮ ಆಯಸ್ಸು 60 ರಿಂದ 70 ವಯಸ್ಸಿಗೆ ಬಂದು ತಳವುರುತ್ತಿದೆ ಅಥವಾ ಅದಕ್ಕಿಂತ ಕಡಿಮೆಯೇ…..

ಆದರೆ

ಹುಂಝ ಕಣಿವೆ ಪ್ರದೇಶದಲ್ಲಿನ ಹುಂಝಾ (Hunza) ಅಥವಾ ಬುರುಷೋ (Burusho) ಜನಾಂಗ ಇದಕ್ಕೆ ತದ್ವಿರುದ್ಧ. ಇವರು ದೀರ್ಘ ಆಯುಷಿಗಳು ಮತ್ತು ಸಂತೋಷಕರ ಬದುಕಿನ ಬುಡಕಟ್ಟು ಜನಾಂಗ. ಇವರ ಜೀವನ ಶೈಲಿ, ಆಹಾರ ಕ್ರಮ ತೀರಾ ವಿಭಿನ್ನ. ಇತರರಿಗೆ ಹೋಲಿಸಿದರೆ ಇವರು ಆರೋಗ್ಯಕರ ಜೀವಿಗಳು.

ಫೋಟೋ ಕೃಪೆ : google

ಹುಂಝಾ ಬುಡಕಟ್ಟು ಜನರ ಸರಾಸರಿ ಆಯಸ್ಸು 120 ವರ್ಷವಾಗಿದೆ ಎಂದು ಅಂದಾಜಿಸಲಾಗಿದೆ, ಕೆಲವರು 160 ವರ್ಷಗಳ ಕಾಲ ಬದುಕುತ್ತಾರಂತೆ. ಈ ಜನಾಂಗದವರಿಗೆ ವಯಸ್ಸಾದರೂ ಹರೆಯದವರಂತೆ ಕಾಣುತ್ತಾರೆ, ಇವರಿಗೆ ಕಾಯಿಲೆಗಳು ಕಡಿಮೆಯೇ, ಕ್ಯಾನ್ಸರ್’ನಂತ ಮಾರಕ ಕಾಯಿಲೆಗಳಂತೂ ತೀರಾ ವಿರಳ. ಇವರ ದೀರ್ಘಾಯುಷ್ಯ ಮತ್ತು ಕಟ್ಟುಮಸ್ತಾದ ಆರೋಗ್ಯದ ಗುಟ್ಟು ಆಹಾರಕ್ರಮ ಮತ್ತು ಜೀವನಶೈಲಿ.

ಇವರು…

ಸಮುದ್ರ ಮಟ್ಟಕ್ಕಿಂತ ಅತೀ ಹೆಚ್ಚು ಎತ್ತರ ಪ್ರದೇಶದಲ್ಲಿ ವಾಸಿಸುತ್ತಾರೆ. ಇವರದೇ ಪ್ರತ್ಯೇಕ ಸಂಪ್ರದಾಯ ಹೊಂದಿದ್ದು, ಸಂಗೀತ, ನೃತ್ಯ ಪ್ರೀಯರೂ ಹೌದು. ಸುನ್ನಿ ಇಸ್ಲಾಂ ಧರ್ಮದವರೆಂದು ಗುರುತಿಸಿಕೊಳ್ಳುವ ಇವರ ಮಾತೃಭಾಷೆ “ಬುರುಶಾಸ್ಕಿ” (Burushaski), ಇದನ್ನು “ಪ್ರತ್ಯೇಕ ಭಾಷೆ” ಎಂದು ಪರಿಗಣಿಸಲಾಗಿದೆ.

ಫೋಟೋ ಕೃಪೆ : google

ಇವರ ಮೂಲ ಕಸುಬು ಕೃಷಿಯಾಗಿದ್ದು, ಹೆಚ್ಚಾಗಿ ಸೇವಿಸುವುದು ತಾವೇ ಕೃಷಿ ಮಾಡಿ ಬೆಳೆದ ಗೋದಿ, ಬಾರ್ಲಿ, ಜೋಳ, ರಾಗಿ,ಸಜ್ಜೆ. ಪಾಲಕ್, ಗಜ್ಜರಿ ಇತರೆ ತರಕಾರಿಗಳು ಮತ್ತು ಸೇಬು, ಏಪ್ರಿಕಾಟ್, ಚೆರ್ರಿ, ಮಲ್ಬೇರಿ ಹಣ್ಣುಗಳು. ವಾಲ್ನಟ್, ಬದಾಮ್ ನಟ್ಸ್. ಪ್ರತಿದಿನ ದೂರ ದೂರದವರೆಗೂ ಕಣಿವೆಯ ಏರು ದಿಬ್ಬ, ಇಳಿಜಾರಿನ ಹಾದಿಯಲ್ಲಿ ನಡೆದಾಡುವವರು. ಆಹಾರದಲ್ಲಿ ತಾಜಾ ತರಕಾರಿ, ತಾಜಾ ಹಣ್ಣು, ಒಣ ಹಣ್ಣುಗಳು, ನಟ್ಸ್, ಹೈನು ಪದಾರ್ಥಗಳನ್ನು ಸೇವಿಸುವರು.

ಜಲ್ದರ್ ಹಣ್ಣು (Apricot)ಗಳಿಂದ ಸಮೃದ್ಧವಾಗಿರುವ ಆಹಾರವನ್ನು ಇವರು ಪ್ರಧಾನ ಆಹಾರವಾಗಿ ಬಳಸುತ್ತಾರೆ, ವರ್ಷಕ್ಕೆ ಕೆಲವು ತಿಂಗಳುಗಳ ಕಾಲ ಘನ ಪದಾರ್ಥ ಸೇವಿಸದೆ ಕೇವಲ ಏಪ್ರಿಕಾಟ್‌ ರಸದಿಂದ ತಯಾರಿಸಿದ ಆಹಾರಗಳನ್ನೇ ಬಳಸುತ್ತಾರೆ. ಚಳಿಗಾಲದಲ್ಲಿ ಕೆಲವು ತರಕಾರಿ, ಆಲೊಗಡ್ಡೆ ಮತ್ತು ಒಣಗಿಸಿದ ಮಾಂಸವೆ ಪ್ರಧಾನ ಆಹಾರ.

ಫೋಟೋ ಕೃಪೆ : google

ವಿಶ್ವದ ಕೆಲವು ಪ್ರದೇಶಗಳನ್ನು “ಹಸಿರು ವಲಯ” (Blue zone) ಎಂದು ಗುರುತಿಸಲಾಗುತ್ತೆ, ಏಕೆಂದರೆ ಅಲ್ಲಿ ಹೆಚ್ಚು ಜನರು ಶತಾಯುಷಿಗಳು ಅಥವಾ ಹೆಚ್ಚು. ಆದರೆ ಹುಂಝ ಕಣಿವೆ ಪ್ರದೇಶವನ್ನು “ಹಸಿರು ವಲಯಕ್ಕೆ” ಸೇರಿಸಿಲ್ಲವಾದರೂ ಅವರಂತೆಯೇ ಇಲ್ಲಿನ ಬುಡಕಟ್ಟು ಜನಾಂಗದ ಬದುಕು ಇರುವುದು.

ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ಥಾನನ ಗುಡ್ಡಗಾಡು ಪ್ರದೇಶಗಳ ಮಧ್ಯೆ ಇರುವ ಒಂದು ಪ್ರದೇಶದಲ್ಲಿ ಹುಂಝಾ ಸಮುದಾಯದ ಈ ಜನರು ವಾಸಿಸುತ್ತಾರೆ. ಪಾಕಿಸ್ತಾನದ ಉತ್ತರಕ್ಕೆ ಇರುವ ಚಿತ್ರಾಲ್‌ ಜಿಲ್ಲೆಯ ಹುಂಝ ಕಣಿವೆ ಪ್ರದೇಶದಲ್ಲಿ. ಅವರ ಮೂಲವು ತಿಳಿದಿಲ್ಲವಾದರೂ, ಇವರು “ವಾಯುವ್ಯ ಭಾರತಕ್ಕೆ ಸ್ಥಳೀಯರಾಗಿದ್ದರು ಮತ್ತು ಬದುಕು ಬದಲಾದಂತೆ ಪರ್ವತಗಳ ಎತ್ತರಕ್ಕೆ ಹೋಗಿ ಪ್ರತ್ಯೇಕ ಜೀವನ ಕಟ್ಟಿಕೊಂಡರು” ಎಂದು ಊಹಿಸಲಾಗಿದೆ.

ಫೋಟೋ ಕೃಪೆ : google

ಲೇಖಕ ಮತ್ತು ವಕೀಲ ಜೆ.ಐ ರೋಡೆಲ್ (J.I Rodel) ಅವರು 1948ರಲ್ಲಿ “ದಿ ಹೆಲ್ತಿ ಹುಂಜಾಸ್” (The healthy hunzas)ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ಅವರ ಆಹಾರ ಕ್ರಮ, ಜೀವನಶೈಲಿ ಬಗ್ಗೆ ಬರೆದಿದ್ದು. ದೀರ್ಘಾಯುಷ್ಯ ಜನಾಂಗ ಎಂದು ಉಲ್ಲೇಖಿಸಿದ್ದಾರೆ.

ದುರದೃಷ್ಟವಶಾತ್….

ಜಾಗತೀಕರಣದ ತಾಪ ಈ ಬುಡಕಟ್ಟು ಜನರ ಬದುಕಿಗೂ ತಾಗಿದೆ. ಸುತ್ತಮುತ್ತಲ ಪರಿಸರ ಮೆಲ್ಲಗೆ ನಲುಗುತ್ತಿದೆ. ವಾಣಿಜ್ಯೋದ್ಯಮ, ಪ್ರವಾಸೋದ್ಯಮ ತನ್ನ ಕಬಂಧ ಬಾಹು ಚಾಚಿ, ಇಲ್ಲಿನವರ ಆಹಾರಕ್ರಮ, ಜೀವನಶೈಲಿಗೆ ಅಡ್ಡಗಾಲು ಹಾಕಿದೆ. ಮೆಲ್ಲಗೆ ಸಂಸ್ಕರಿಸಿದ ಆಹಾರ, ಆಧುನಿಕ (?) ಬದುಕು, ಆಧುನಿಕ ಕಾಯಿಲೆಗಳು ಬರಸೆಳೆದು ಅಪ್ಪುತ್ತಿವೆ. ಮೂಲ ಬದುಕು ಕೊನೆಯುಸಿರೆಳೆಯುತ್ತಿದೆ ಎಂಬುದು ಈಗಿನವರ ಕಳವಳ ಮತ್ತು ಅಭಿಪ್ರಾಯ.

ಮುಂದುವರೆಯುವುದು…..


  • ಡಾ. ಪ್ರಕಾಶ ಬಾರ್ಕಿ – ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು, ಕಾಗಿನೆಲೆ

One thought on “ದೀರ್ಘಾಯುಷಿ ಹುಂಝಾ ಬುಡಕಟ್ಟು ಜನಾಂಗ

  1. ಅಲ್ಲಿ 120-160 ವರ್ಷ ಬದುಕಲು ಅಲ್ಲಿರುವುದು Life Science, ಅಲ್ಲಿ ಇನ್ನೂ Evidence Based Medicine ಕಾಲ ಇಟ್ಟಿಲ್ಲ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading