ಹೆಸರಿಗೆ ರೈತ ಬೆನ್ನಲುಬು ಆಗಬಾರದು. ರೈತರಿಗೆ ಸನ್ಮಾನ ಮಾಡಿ ಬಿರುದು ಕೊಡೋದು ಬೇಕಿಲ್ಲ…ಬೆಳೆದ ಬೆಳೆಗೆ ಒಂದು ಒಳ್ಳೇ ರೇಟ್ ನ ಕೊಡಿ ಸಾಕು …ಶ್ರೀಧರ್ ಚೆನ್ನಪ್ಪ ಅವರ ರೈತರ ನೋವಿನ ಕುರಿತು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಎಲ್ಲರಿಗೂ ನಮಸ್ಕಾರ ನನ್ನ ಹೆಸರು ಶಾಂತಪ್ಪ. ನಾನೊಬ್ಬ ಬಡ ರೈತ… ಆದ್ರೆ ಎಲ್ಲರ ಕಣ್ಣಿಗೂ ಸಧ್ಯಕ್ಕೆ ನಾನೊಬ್ಬ ಶ್ರೀಮಂತ ರೈತ. ನಂಗೆ ನನ್ನದೇ ಆದ ಪುಟ್ಟ ಪ್ರಪಂಚ ಇದೆ ಒಂದು ಪುಟ್ಟ ಮಗಳು. ನನ್ನ ಧರ್ಮಪತ್ನಿ ನೀಲಾ ಇದ್ದಾಳೆ. ಮದುವೆಯಾಗಿ 20 ವರ್ಷ ಆದ್ರೂ ಅವಳಿಗೆ ಒಂದು ಸರಿಯಾದ ಸೀರೆ ಕೊಡಿಸೋ ಭಾಗ್ಯ ಕೂಡ ಆ ದೇವ್ರು ಇನ್ನು ನಂಗ್ ಕೊಟ್ಟಿಲ್ಲ ಯಾರ್ದಾದ್ರು ಮನೇಲಿ ಕೆಲಸ ಮಾಡ್ತಾಳೆ ಅವ್ರು ಕೊಡೊ ಬೇಡದೆ ಇರೋ ಬಟ್ಟೆನೆ ಹಾಕ್ತಾಳೆ.
ಅದು ಬಿಡ್ರಿ.. ಮೊನ್ನೆ ನಮ್ಮ ತಾಲೂಕಿಗೆ ಒಬ್ಬ ಮಂತ್ರಿ ಬಂದಿದ್ದ ನಾನು ನನ್ನ ಹೊಲಕ್ಕೆ ಹಾಕೋಕೆ ಗೊಬ್ಬರ ತರೋಕೆ ಹೋಗಿದ್ದೆ ಅಲ್ಲಿ ಭಾಷಣ ಮಾಡುತ್ತಿದ್ದ ಅವನು ರೈತ ನಮ್ಮ ದೇಶದ ಬೆನ್ನೆಲಬು ನಾನು ಒಬ್ಬ ರೈತನ ಮಗ ಅಂತ ಅಲ್ಲಿ ಇರೋ ಕೆಲ ರೈತರಿಗೆ ಸನ್ಮಾನ ಮಾಡ್ತಾ ಇದ್ದ. ನಂಗು ಈ ಮಾತನ್ನ ಕೇಳಿ ಕುಸಿ ಆಯ್ತು.. ರೈತರಿಗೆ ಅಂದ್ರೆ ನಂಗು ಮಾಡಿದತರ ಅಂತ ಎದೆ ಉಬ್ಬಿಸಿ ನೋಡಲು ಹೋದೆ. ಆದ್ರೆ ಅಲ್ಲಿ ಸನ್ಮಾನ ಮಾಡಿಸ್ಕೊಳ್ತಾ ಇರೋದು ಯಾರು ನೇಗಿಲು ಹಿಡಿದು ಹೊಲ ಉಳುವವರಲ್ಲ.
ಇವರಿಗೆ ಸನ್ಮಾನ ಹಾಗೂ ಇವರ ಆಯಿಷಾರಾಮಿ ನಮ್ಮಂತವರ ಮೇಲಿನ ಗೌರವ ಮರ್ಯಾದೆನೇ ಕಡಿಮೆ ಆಗ್ತಿದೆ. ನೀವೆಲ್ಲ ಅನ್ಕೊಂಡ್ರಿ ಮೊನ್ನೆ ಟೊಮೇಟೊ ಹಾಕಿದ ರೈತ ಅಷ್ಟು ಸಂಪಾದ್ನೇ ಮಾಡಿದ ಇಸ್ಟ್ ಮಾಡಿದ ಅಂತ. ಅಣ್ಣಗೂಳಿರ ಕೇಳ್ರಿ ನೀವ್ ಅನ್ಕೊಂಡ್ ಹಾಗೆ ಮಾರುಕಟ್ಟೆ ಬೆಲೆ ನಮಗೆ ಸಿಗಲ್ರೋ.

(ಕಣ್ಣಲ್ಲಿ ನೀರು ತುಂಬಿಕೊಂಡು)
ಮಾರುಕಟ್ಟೆಯಲಿ ಒಂದು ಕೆಜಿ ಟೊಮೇಟೊ ಗೆ 100 ರೂಪಾಯಿ ಕೊಟ್ರಿ…ಆದ್ರೆ ಅದೇ ದಲ್ಲಾಳಿ ನಮ್ಮ ಹತ್ರ ಕೊಟ್ಟಿದ್ದು ಕೇವಲ 20-30 ರೂಪಾಯಿ…ಹಾಕಿರೋ ಎಕರೆಗೆ ಬಂದಿರೋ ಫಲದಲ್ಲಿ ಬಂದಿರೋ ತೂಕದಲ್ಲಿ ಮತ್ತೆ ಅವ್ರು ಕಮ್ಮಿ ಮಾಡ್ತಾರೆ. ಅದ್ರಲ್ಲಿ ಬರೋ 20-30 ಲಿ… ಗೊಬ್ಬರ… ಎಣ್ಣೆ…. ಬೀಜ ಮುಂತಾದ ಖರ್ಚಿಗೆನೇ ಸಾಕಾಗಿ ಹೋಗತ್ತೆ.
ಸರಕಾರಿ ಕಚೇರಿಯಲ್ಲಿ 24*7 ಕರೆಂಟ್ ಇದೆ. ಪ್ರವೇಟ್ ಶಾಲೆಯಲ್ಲಿ 24*7 ಕರೆಂಟ್ ಇದೆ. ದೊಡ್ಡ ದೊಡ್ಡ ಮಾಲ್ ಗಳಲ್ಲಿ 24*7 ಕರೆಂಟ್ ಇದೆ. ಅಷ್ಟೇ ಯಾಕೆ ಸಾರಾಯಿ ಅಂಗಡಿಯಲ್ಲಿ ಕೂಡ 24*7 ಕರೆಂಟ್ ಇದೆ ಆದ್ರೆ. ನಾವ್ ಮಾತ್ರ ಮಧ್ಯ ರಾತ್ರಿ 2 ಅಂದ್ರು ಆವಾಗ್ಲೇ ಹೋಗ್ಬೇಕು 4 ಅಂದ್ರು ಆವಾಗ್ಲೇ ಹೋಗಬೇಕು ದೇಶದ ಬೆನ್ನೆಲುಬು ಶಕ್ತಿ ಹಾಗೆ ಹೇಗೆ ಅನ್ನೋ ಜನ ರೈತನಿಗೆ ಸರಿಯಾದ ವಿದ್ಯುತ್ ಕೊಡ್ತಾ ಇಲ್ಲ… ಇದರ ಬಗ್ಗೆ ದ್ವನಿಕೂಡ ಎತ್ತತ ಇಲ್ಲ.
ದೊಡ್ಡ ದೊಡ್ಡ ಮಾಲ್ ನಲ್ಲಿ ಕೇಳಿದಷ್ಟು ಕೊಟ್ಟು ಮೇಲೆ ಟಿಪ್ಸ್ ಕೊಡೊ ಮನುಷ್ಯ ನನ್ನ ಹತ್ರ ಬಂದು ಕಮ್ಮಿ ಮಾಡ್ಕೋರಿ ಅಂತ ಮಾಡ್ಲಿಲ ಅಂದ್ರ ಸೊಕ್ಕ್ ನೋಡು ಅಂತ ಅಂತಾನೆ…
10 ರೂಪಾಯಿ ಕುಡಿಯೋ ನೀರು ತಯಾರಿಸೋನು ಅದರ ಮೇಲೆ ಅವನ ರೇಟ್ ಹಾಕಿರ್ತಾನೆ. ಆದ್ರೆ ಹಗಲು ರಾತ್ರಿ ಜೀವನಾನೇ ಪಣಕ್ಕಿತ್ತು ದುಡಿಯೋ ರೈತ 10 ರು ಹೆಚ್ಚಿಗೆ ಮಾಡಿಕೋಪ 20 ರೂಪಾಯಿ ಹೆಚ್ಚಿಗೆ ಮಾಡಿಕೋಪ ಅಂತ ಕೈ ಚಾಚಿ ಕೇಳ್ಬೇಕು.
ದೇಶದ ಬೆನ್ನಲುಬಿಗೆ ಎಲ್ಲರ ತರ ಸಾಮಾನ್ಯ ಜೀವನ ನಡೆಸಲು ಕೂಡ ಒಮ್ಮೊಮ್ಮೆ ಅವಕಾಶ ಇರುವುದಿಲ್ಲ. ಮೆಟ್ರೋದಲ್ಲಿ ನಮ್ಮನ್ನ ನೋಡಿದ್ರೆ ಬಟ್ಟೆ ಸರಿ ಇಲ್ಲ ಅದು ಸರಿ ಇಲ್ಲ ಅಂತ ಕಳಿಸ್ತಾರೆ. ಲೋ ತಮ್ಮಂದಿರ…ನೀನು ಇವತ್ತು ಹೊಟ್ಟೆ ತುಂಬಾ ಊಟ ಮಾಡಿ ನಿನ್ನ ಕೆಲಸ ಮಾಡ್ತಿದಿಯಾ ಅಂದ್ರೆ ಅದ್ಕೆ ಈ ಹೊಲಸು ಬಟ್ಟೆನೆ ಕಾರಣ ಕಂಡ್ರೋ.
ಒಂದ್ ನೆನಪಿಟ್ಕೊಳ್ಳಿ…(ರೋಷದಿಂದ ) ಯಾವತ್ತು ಒಂದ್ ದಿನ ನಾವು ನೇಗಿಲು ಹಿಡಿಯಲ್ಲ ಹೊಲ ಓಳಲ್ಲ ಅಂದ್ರೆ ಹೊಟ್ಟೆಗೆ ಮಣ್ಣು ತಿನ್ಬೇಕಾಗತ್ತೆ… ನಾನು ಮನುಷ್ಯನೇ ನಂಗು ಗೌರವ ಕೊಡಿ..
ಎಲ್ಲರ ಹಸುವನ್ನು ನಾನು ನೀಗಿಸುತ್ತೆನಿ ಅಂದ್ರೆ ನಂಗು ಕೇಳೋ ಹಕ್ಕಿದೆ ಅಂತ…
ಹೆಸರಿಗೆ ರೈತ ಬೆನ್ನಲುಬು ಆಗ್ಬಾರ್ದು. ನನಗೇನು ನೀವು ಸನ್ಮಾನ ಮಾಡಿ ಬಿರುದು ಕೊಡೋದು ಬೇಕಿಲ್ಲ ಬೆಳೆದ ಬೆಳೆಗೆ ಒಂದು ಒಳ್ಳೇ ರೇಟ್ ನ ಕೊಡಿ.. ಇಸ್ಟ್ ಮಾತ್ರ ನಿಮ್ಮಲ್ಲಿ ನಾನ್ ಕೇಳ್ಕೊಳ್ಳೋದು.
- ಶ್ರೀಧರ್ ಚೆನ್ನಪ್ಪ ಬಿಂಡ್ಲಿ
