ಬಜೆ ಮಹತ್ವ – ಸುಮನಾ ಮಳಲಗದ್ದೆ

ಮಕ್ಕಳಿಗೆ ಹಲ್ಲು ಹುಟ್ಟುವಾಗ ಜ್ವರ ಕಾಣಿಸಿದರೆ ಚೂರು ಬಜೆ ತೇಯ್ದು ನೆಕ್ಕಿಸಿದರೆ ಜ್ವರ ಕಡಿಮೆಯಾಗುವುದು. ಬಜೆ ಬೇರು ಬಹಳ ಹಿಂದಿನಿಂದಲೂ ಔಷಧಿಯಾಗಿ ಬಳಕೆಯಾಗುತ್ತಿದೆ. ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಬಜೆ ಮಹತ್ವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

  • ಚಿಕ್ಕಮಕ್ಕಳಿಗೆ 1 ಗುಂಜಿ ಪ್ರಮಾಣದ ಬೇರನ್ನು ಎದೆಹಾಲಲ್ಲಿ ತೇಯ್ದು ನೆಕ್ಕಿಸಿದರೆ ಮಾತು ಸ್ಪಷ್ಟವಾಗಿ ಬರುವುದು.
  • ಬಜೆಯನ್ನು ತೆಯ್ದು ಕಾಲು ಚಮಚದಷ್ಟು ಗಂಧ ಮಾಡಿ ಜೇನಿನೊಡನೆ ಸೇವಿಸಿದರೆ ಶೀತ ಕಫ ಕರಗುವುದು.
  • ಬಜೆಯ ಬೇರನ್ನು ತೇಯ್ದು ತಲೆಗೆ ಲೇಪಿಸಿದರೆ ತಲೆನೋವು ಕಡಿಮೆಯಾಗುವುದು.ಸಂಧಿವಾತದ ನೋವುಗಳಿಗೆ ಲೇಪಿಸುವುದರಿಂದ ನೋವು ಕಡಿಮೆಯಾಗುವುದು.
  • ಚಿಕ್ಕಮಕ್ಕಳಿಗೆ ಹೊಟ್ಟೆಯುಬ್ಬರ ಬೇದಿ ಕಾಣಿಸಿದಾಗ ಬಜೆ ತೇಯ್ದು ಹರಳೆಣ್ಣೆ ಬೆರೆಸಿ ಹೊಟ್ಟೆಯ ಮೇಲೆ ಹೊಕ್ಕಳಿನ ಸುತ್ತ ಲೇಪಿಸಬೇಕು.
  • ಬಜೆ ತೇಯ್ದು ಬೆಣ್ಣೆ / ತುಪ್ಪದಲ್ಲಿ ಬೆರೆಸಿ ಮಕ್ಕಳಿಗೆ ನೆಕ್ಕಿಸಿದರೆ ಬುದ್ಧಿಶಕ್ತಿ,ಜ್ಞಾಪಕಶಕ್ತಿ ಹೆಚ್ಚುವುದು ರೋಗನಿರೋಧಕ ಶಕ್ತಿ ಹೆಚ್ಚುವುದು(ಅಲ್ಪಪ್ರಮಾಣದಲ್ಲಿ)
  • ಬಜೆಯ ಸೇವನೆಯಿಂದ ಜಂತುಹುಳು ನಿವಾರಣೆಯಾಗುವುದು.
  • ಮಕ್ಕಳಿಗೆ ಹಲ್ಲು ಹುಟ್ಟುವಾಗ ಜ್ವರ ಕಾಣಿಸಿದರೆ ಚೂರು ಬಜೆ ತೇಯ್ದು ನೆಕ್ಕಿಸಿದರೆ ಜ್ವರ ಕಡಿಮೆಯಾಗುವುದು.
  • ಬಜೆಯ ಕಷಾಯ ಸೇವಿಸಿದರೆ ಮೂತ್ರಕೋಶದ ಕಲ್ಲು ಕರಗುವುದು.ಮೂತ್ರಬಂಧ ಸರಿಯಾಗುವುದು.
  • ಬಜೆಯ ಗಂಧ ಸೇವಿಸಿದರೆ ಕಂಠಶುದ್ಧಿಯಾಗುವುದು, ಉಗ್ಗು ನಿವಾರಣೆಯಾಗುವುದು,ಮೂಲವ್ಯಾಧಿ ಗುಣವಾಗುವುದು.(ಹಸುವಿನ ಹಾಲಲ್ಲಿ ತೇಯ್ದು ಜೇನಿನೊಡನೆ ಬೆರೆಸಿ ಸೇವಿಸಬೇಕು)
  • ಬಟ್ಟೆಯಲ್ಲಿ ಶೋಧಿಸಿದ ಬಜೆಯ ಚೂರ್ಣವನ್ನು ಪ್ರತಿದಿನ 10 ಗ್ರಾಂನಷ್ಟು ಬೆಳಗ್ಗೆ ಜೇನಿನೊಡನೆ ಸೇವಿಸುವುದರಿಂದ ಮೂರ್ಛೆರೋಗ ಗುಣವಾಗುವುದು.(೧ತಿಂಗಳು)
  • ಪಾರ್ಶ್ವವಾಯು ಪೀಡಿತರಿಗೆ ಬಜೆ ಅರೆದು ಲೇಪಿಸಿದರೆ ಗುಣವಾಗುವುದು.
  • ಬಾಯಿಯ ದುರ್ಗಂಧ ಹೋಗಲು ಚೂರು ಬಜೆಬೇರನ್ನು ಅಗಿಯಬೇಕು.
  • ಇದು ವಾಂತಿ ನಿವಾರಕ, ಜಠರಸಮಸ್ಯೆ, ಹೊಟ್ಟೆನೋವು, ನರದೌರ್ಬಲ್ಯ , ಶ್ವಾಸನಾಳದ ಸೋಂಕು, ಆಮಶಂಕೆ, ಹಾವು ವಿಷಜಂತುಗಳ ಕಡಿತ ಮುಂತಾದವುಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ.
  • ಮಹಿಳೆ ಪ್ರೆಗ್ನೆಂಟ್ ಆಗಿದ್ದು ತಿಳಿದ ಕೂಡಲೆ ಬಜೆಯ ಗಿಡ ವಿರುವ ಬೇರಿನಲ್ಲಿ ಬಂಗಾರದ ಸರಿಗೆ ತೂರಿಸಿ ಗುರುತು ಮಾಡಿಕೊಂಡು ಬೆಳೆಯಲು ಬಿಡಬೇಕು ಮಗುವಿನ ಜನನದ ನಂತರ ಗುರುತು ಮಾಡಿದ ಬೇರನ್ನು ಕಿತ್ತರೆ ಬಂಗಾರದ ಸರಿಗೆ ಬಜೇಯಲ್ಲಿ ಲೀನವಾಗಿ ಕರಗಿರುತ್ತದೆ.ಇದನ್ನು ಮಗುವಿಗೆ ಉಪಯೋಗ ಮಾಡಿದರೆ ಸ್ವರ್ಣ ಪ್ರಾಶನ ಪ್ರತ್ಯೇಕ ವಾಗಿ ಮಾಡುವ ಅಗತ್ಯ ಇರುವುದಿಲ್ಲ.ಇದು ತುಂಬಾ ಉಪಯುಕ್ತ ವಾದ ಔಷಧಿ .ಇದರ ಜೊತೆಗೆ ರುದ್ರಾಕ್ಷಿ,ದೇವದಾರಿ…..ಗಳಂತಹ ವಿಶೇಷ ಔಷಧಿ ಸೇರಿಸಿ ತಯಾರಿಸಿದ ಸುತ್ತುಖಾರಾ (ಸ್ವರ್ಣ ಸಂಮೃಧ್ದಿ) ನನ್ನಲ್ಲಿ ಲಭ್ಯ ಇದೆ . ಹದಿನಾರು ದಿನಗಳ ಶಿಶುವಿನಿಂದ ಎಪ್ಪತ್ತರ ಹರೆಯದ ವಯಸ್ಸಿನವರು ವಾರಕ್ಕೆ ಎರಡು ಬಾರಿ ಉಪಯೋಗಿಸಿ ಆರೋಗ್ಯ ದಿಂದ ಇರಲು ಒಳ್ಳೆಯದು.
  • ವಿಶೇಷ ಸೂಚನೆ ಬಜೆ ಅತಿಯಾದರೆ ಪಿತ್ತ ಹೆಚ್ಚಾಗುತ್ತದೆ.ಲೈಂಗಿಕ ಸಾಮರ್ಥ್ಯ ಕುಗ್ಗುತ್ತದೆ.

  • ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW