‘ಟೂರ್ ಡಿ 100’ ಸೈಕಲ್ ಸ್ಪರ್ಧೆ

ಟೂರ್ ಡಿ 100, ಸೈಕಲ್ ಸ್ಪರ್ಧೆಯಲ್ಲಿ ಆರ್. ಪಿ. ರಘೋತ್ತಮ ಅವರು Platinum Finisher ಆಗಿದ್ದಾರೆ. ದೇಶಾದ್ಯಂತ ಒಟ್ಟು 2,981 ಸ್ಪರ್ಧಿಗಳು ಭಾಗವಹಿಸಿದ್ದು, ಈ ಆವೃತ್ತಿಯಲ್ಲಿ ರಘೋತ್ತಮ ಅವರು ಪಡೆದ ಸ್ಥಾನ 433. ಆಕೃತಿಕನ್ನಡದ ಕಡೆಯಿಂದ ಆರ್. ಪಿ. ರಘೋತ್ತಮ ಅವರಿಗೆ ಅಭಿನಂದನೆಗಳು, ಮುಂದೆ ಓದಿ…

ಟೂರ್ ಡಿ 100, ನೂರು ದಿನಗಳ ಅವಧಿಯಲ್ಲಿ ನಡೆಯುವ ಸೈಕಲ್ ಸ್ಪರ್ಧೆ. ಈ ಸ್ಪರ್ಧೆಗೆ ಸಮಯ ಮತ್ತು ಸ್ಥಳಗಳ ನಿರ್ಬಂಧಗಳಿಲ್ಲದೆ, ಸ್ಪರ್ಧಿಗಳು ತಾವು ಇರುವ ಊರುಗಳಲ್ಲೇ, ತಮಗೆ ಅನುಕೂಲವಾಗುವ ಸಮಯದಲ್ಲೇ ತುಳಿಯಬಹುದು (Virtual event). ಈ ಸ್ಪರ್ಧೆ 5 ಹಂತಗಳಲ್ಲಿ ನಡೆಯುತ್ತದೆ, ಪ್ರತೀ ಹಂತವೂ 20 ದಿನಗಳ ಕಾಲಾವಧಿ ಹೊಂದಿರುತ್ತದೆ. ಮೊದಲ ಹಂತ ತೀರಾ ಸುಲಭವಾಗಿದ್ದು, ಆರಂಭಿಕರೂ ಕೂಡ ಮೊದಲ ಹಂತದ ಎಲ್ಲ ಗುರಿಗಳನ್ನೂ ಸುಲಭವಾಗಿ ತಲುಪಬಹುದು. ಎರಡನೇ ಹಂತ ಮೊದಲ ಹಂತಕ್ಕಿಂತಲೂ ಕೊಂಚ ಕಷ್ಟ ಪಡಬೇಕಾದ ಗುರಿಗಳನ್ನು ಹೊಂದಿರುತ್ತದೆ. ಮೂರನೇ ಹಂತ ಇನ್ನೂ ಸ್ವಲ್ಪ ಕಷ್ಟವಿದ್ದು, ಕೊಂಚ ತಿಣುಕಾಡಿ, ಕಷ್ಟಪಟ್ಟರೆ ಸಾಧಿಸಬಹುದಾದದ್ದು. ಆದರೆ ಕೊನೆಯ ಎರಡು ಹಂತಗಳು ತುಂಬಾ ಶ್ರಮವನ್ನು, ಸಮಯವನ್ನು ಬೇಡುತ್ತವೆ. ಬಹುಶಃ ಕೇವಲ ಹವ್ಯಾಸಿ ಸೈಕಲ್ ರೈಡರ್’ಗಳು ಮತ್ತು ಸಾಧಿಸಬೇಕೆಂಬ ತುಡಿತವಿರುವವರು ತಲುಪಬಹುದಾದ ಹಂತವಿದು.

ಈ ವರ್ಷ ನಡೆದದ್ದು ಈ ಸ್ಪರ್ಧೆಯ ನಾಲ್ಕನೆಯ ಆವೃತ್ತಿ. ಈ ವರ್ಷದ ಸ್ಪರ್ಧೆ ಅಕ್ಟೋಬರ್ 1, 2022ರಿಂದ ಜನವರಿ 8, 2023ರವರೆಗೂ ನಡೆಯಿತು. ಕಳೆದ ವರ್ಷದಂತೆ ಈ ವರ್ಷವೂ ಸಹ ಭಾಗವಹಿಸಿ Platinum Finisher ಅನ್ನಿಸಿಕೊಂಡೆ. ನೂರು ದಿನಗಳಲ್ಲಿ ಸುಮಾರು 3,789 ಕಿಲೋಮೀಟರ್ ಗಳಷ್ಟು ದೂರ ಸೈಕಲ್ ತುಳಿದು 15,753 ಅಂಕಗಳನ್ನು ಗಳಿಸಿಕೊಂಡೆ.

ದೇಶಾದ್ಯಂತ ಒಟ್ಟು 2,981 ಸ್ಪರ್ಧಿಗಳು ಭಾಗವಹಿಸಿದ್ದ ಈ ಆವೃತ್ತಿಯಲ್ಲಿ ನನಗೆ ದೊರೆತ ಸ್ಥಾನ 433. ಈ ವರ್ಷದ ಸ್ಪರ್ಧೆಯಲ್ಲಿ ನನ್ನ ಸರಾಸರಿ ವೇಗ ಗಂಟೆಗೆ 21 ಕಿಲೋಮೀಟರ್.

ಇನ್ನೊಂದು ಚೂರು ಕಷ್ಟಪಟ್ಟಿದ್ದರೆ Diamond Finisher ಆಗಬಹುದಿತ್ತೇನೋ. ಮುಂದಿನ ವರ್ಷಕ್ಕೆ ಈಗಿನಿಂದಲೇ ತಯಾರಿ ಮಾಡಿಕೊಂಡರೆ ಆಯಿತು.

ನೀವೇನಂತೀರಿ?


  •  ಆರ್. ಪಿ. ರಘೋತ್ತಮ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW