ಭತ್ತದ ಗದ್ದೆಯಲ್ಲಿ ಹಕ್ಕಿಗಳ ಒಡನಾಟ – ಶಕುಂತಲಾ ಶ್ರೀಧರ

1980 ರ ಚಳಿಗಾಲದ ಬೆಳೆ ಮತ್ತು 1981ರ ಬೇಸಿಗೆ ಬೆಳೆಯ ಕಾಲಾವಧಿಯನ್ನ ನಾನು ಆರಿಸಿಕೊಂಡೆ. ಆ ಎಂಟು ತಿಂಗಳಲ್ಲಿ ನಾನು ಸುಮಾರು 32 ಜಾತಿಯ ಹಕ್ಕಿಗಳನ್ನು ನೋಡಿದೆ. ವಿಜ್ಞಾನಿ ಶಕುಂತಲಾ ಶ್ರೀಧರ ಅವರ ಲೇಖನಿಯಲ್ಲಿ ಹಕ್ಕಿಗಳ ಒಡನಾಟ ಕುರಿತು ಬರೆದ ಒಂದು ಸುಂದರ ಲೇಖನ ತಪ್ಪದೆ ಮುಂದೆ ಓದಿ…

ಕೆಲಸಕ್ಕೆ ಸೇರಿ ಏಳು ವರ್ಷಗಳಾಗಿದ್ದವು (1980). ಈಗ ಬರಿ ಹೆಬ್ಬಾಳದ ಕೆರೆ ಉಳಿದಿದೆ. ಆಗ ಹೆಬ್ಬಾಳದ ದಡದಾಚೆ, ರಸ್ತೆಯ ಈ ಬದಿಯಲ್ಲಿ ಕೃಷಿ ವಿಶ್ವ ವಿದ್ಯಾನಿಲಯಕ್ಕೆ ಸೇರಿದ ನಾಲ್ಕು ಹೆಕ್ಟೆರ್ ಪ್ರದೇಶದಲ್ಲಿ ಭತ್ತಡ ಬೆಳೆ ಇತ್ತು (Main Research Station{MRS}, ಆಗಿನ ಕಾಲಕ್ಕೆ ). ಅಲ್ಲಿ ಸ್ವಲ್ಪ ಮಟ್ಟಿಗೆ ತಳಿಗಳ ಮೇಲೆ ಪ್ರಯೋಗಗಳೂ, ಇನ್ನುಳಿದ ಗದ್ದೆ ವಿದ್ಯಾರ್ಥಿಗಳ ಪ್ರಾಕ್ಟಿಕಲ್ಸ್ ಗೆ ಮೀಸಲಾಗಿತ್ತು.

ನಾನು ಹಿಂದಿನ ಎರಡು ವರ್ಷಗಳಲ್ಲಿ ಭತ್ತದ ಗದ್ದೆಯಲ್ಲಿ ಇರುವ ಇಲಿಗಳ ಪ್ರಬೇಧ, ಋತುಗಳಿಗನುಸಾರವಾಗಿವಾಗಿ ಅವುಗಳ ಸಂಖ್ಯೆಗಳ ಏರುಪೇರು, ಭತ್ತಕ್ಕಾಗುವ ನಷ್ಟದ ಪ್ರಮಾಣ ಮತ್ತು ಆಗ ದೊರೆಯುತ್ತಿದ್ದ ಇಲಿ ಪಾಷಣಗಳ ಪರಿಣಾಮಕತ್ವಗಳ ಬಗ್ಗೆ ಒಂದು ವರ್ಷ ಇದೇ ಗದ್ದೆಗಳಲ್ಲಿ ಕೆಲಸ ಮಾಡಿ , ಅದರಿಂದ ನಾನು ಕಂಡುಕೊಂಡ ವಿಷಯಗಳ ಆಧಾರದ ಮೇಲೆ ಪ್ರಬಂಧವೊಂದನ್ನು ಸಿದ್ದಪಡಿಸಿ ಮುಂದೆ ಅಮೇರಿಕಾದ ಲಾಸ್ ಎಂಜಲೀಸ್ನಲ್ಲಿ ನಡೆದ ಅಂತರ ರಾಷ್ಟ್ರೀಯ ಕಾನ್ಫರೆನ್ಸ್ ಒಂದರಲ್ಲಿ ಮಂಡಿಸಿದೆ. ಆಗಲೇ ತೋಡ ಜಾತಿಯ ಇಲಿ ಅಗೆಯುವ, ಉದ್ದದಲ್ಲೂ , ಆಳದಲ್ಲೂ ದೀರ್ಘವಾದ ಬಿಲಗಳನ್ನು ಒಂದಷ್ಟು ಅಗೆಸಿ ವಿಷಯ ಸಂಗ್ರಹಿಸಿದ್ದೆ..ಈ ಭತ್ತದ ಗದ್ದೆಗಳಲ್ಲಿ ನಾನು ಸಂಗ್ರಹಿಸಬಹುದಾದ ಇನ್ನಷ್ಟು ವಿಷಯಗಳಿದ್ದವು. ಅದೇ ಸಮಯದಲ್ಲಿ ಸುಮಾರು ಬಗೆಯ ಹಕ್ಕಿಗಳನ್ನು ಅಲ್ಲಿ ಕಂಡೆ . ನನ್ನ ಸ್ವಭಾವದ ದೌರ್ಬಲ್ಲ್ಯವೆಂದರೆ ಯಾವುದಾದರೂ ಆಸಕ್ತಿದಾಯಕ ವಿಷಯ ಕಂಡರೆ ಅದರ ಬಗ್ಗೆ ಒಂದಷ್ಟು ವೈಜ್ಞಾನಿಕ ವಿಷಯಗಳನ್ನು ಸಂಗ್ರಹಿಸುವುದು. ಇದುವರೆಗೆ ನಾನು ಹಕ್ಕಿಗಳ ಬಗ್ಗೆ ಕಣ್ಣೆತ್ತಿಯೂ ನೋಡಿರಲಿಲ್ಲ . ಅಲ್ಲಿನ ಸುಮಾರು ನಾಲ್ಕು ಹೆಕ್ಟೆರ್ ಭತ್ತದ ಗದ್ದೆಗಳಲ್ಲಿ ಒಬ್ಬಿಬರು ಕೂಲಿಯವರನ್ನು ಬಿಟ್ಟರೆ ನನ್ನ ಸಂಗಾತಿಗಳು ಹಕ್ಕಿಗಳು.

ಫೋಟೋ ಕೃಪೆ : agricultureindi

ಲೈಬ್ರರಿಯಲ್ಲಿ ಭತ್ತದ ಬೆಳೆಯಲ್ಲಿನ ಹಕ್ಕಿಗಳ ಬಗ್ಗೆ ಹೆಚ್ಚು ಕೆಲಸ ನಡೆದಿಲ್ಲ ಅಂಥ ಗೊತ್ತಾಯಿತು. ಇದ್ದ ಬದ್ದ ಕೆಲಸ ಕೀಟಶಾಸ್ತ್ರಜ್ಞರು ಮಾಡಿದ್ದರು. ನಾನು ಪ್ರಾಣಿಶಾಸ್ತ್ರಜ್ಞೆ. ಹಕ್ಕಿಗಳನ್ನ ನಾನು ಕೀಟಗಳಂತೆ ನೋಡುವುದಿಲ್ಲ. ನನಗೆ ಅವುಗಳ ಶರೀರ ರಚನೆ, ಶರೀರ ಕ್ರಿಯಾ ಶಾಸ್ತ್ರ, ಸ್ವಲ್ಪ ಮಟ್ಟಿಗೆ ಮೊಟ್ಟೆ ಮರಿಗಳ ಪೋಷಣೆ, ಗೂಡುಗಳ ವಿಷಯ ಗೊತ್ತಿತ್ತು . ಹಕ್ಕಿಗಳನ್ನು ಕ್ಯಾಮರದಲ್ಲಿ ಸೆರೆ ಹಿಡಿಯುವವರೇ ಹೆಚ್ಚು. ಇದೀಗ ನನಗೆ ಗದ್ದೆಗಳಲ್ಲಿ ಹಕ್ಕಿಗಳ ವೈವಿಧ್ಯ , ಅವುಗಳ ಆಹಾರ, ಚಟುವಟಿಕೆಗಳು, ಭತ್ತಕ್ಕೆ ಮಾಡುವ ಹಾನಿಗಳ ಬಗ್ಗೆ ಒಂದಷ್ಟು ವೈಜ್ಞಾನಿಕವಾಗಿ ವಿಷಯ ಸಂಗ್ರಹ ಮಾಡುವ ಹುಚ್ಚು ಹಿಡಿಯಿತು. ಈ ವಿಷಯದಲ್ಲಿ ನನಗೇನೂ ತರಬೇತಿ ಇರಲಿಲ್ಲ. ಅಲ್ಲಿ ಬರುತ್ತಿದ್ದ ಹಕ್ಕಿಗಳ ಹೆಸರೂ ಗೊತ್ತಿರಲಿಲ್ಲ. ಪುಸ್ತಕಗಳೂ, ವಿಜ್ಞಾನ ಪ್ರಬಂಧಗಳೂ ಸಹಾಯಕ್ಕೆ ಬರಲಿಲ್ಲ. ಈಗಿನಂತೆ ವಿಷಯ ಸಂಗ್ರಹಿಸಲು ಗೂಗಲ್ ಸ್ಕಾಲರ್, ರಿಸರ್ಚ್ ಗೇಟ್ ನಂಥ ಮೂಲಗಳು ಇರಲಿಲ್ಲ ..

ನಾನು ಧೃತಿಗೆಡಲಿಲ್ಲ . ದೇವರು ಕೊಟ್ಟ ಎರಡು ಕಣ್ಣುಗಳು, ಅಪಾರವಾದ ತಾಳ್ಮೆ , ಒಂದಿಷ್ಟು ವ್ಯವಸ್ಥಿತವಾಗಿ ಅವುಗಳ ಚಟುವಟಿಕೆಗಳನ್ನ ದಾಖಲೆ ಮಾಡಿಕೊಳ್ಳುವ ಕಲೆಯಿದ್ದರೆ ಸಾಕು ಎನ್ನಿಸಿತು. ಅದರಂತೆ 1980 ರ ಚಳಿಗಾಲದ ಬೆಳೆ ಮತ್ತು 1981ರ ಬೇಸಿಗೆ ಬೆಳೆಯ ಕಾಲಾವಧಿಯನ್ನ ಆರಿಸಿಕೊಂಡೆ. ಆ ಎಂಟು ತಿಂಗಳಲ್ಲಿ ನಾನು ಕಂಡ ಹಕ್ಕಿಗಳ ವೈವಿದ್ಯವನ್ನು ನಾನು ಹೇಳಿದರೆ ನೀವು ನಂಬಲಾರರಿ. ಈ ಅವಧಿಯಲ್ಲಿ ಸುಮಾರು 32 ಜಾತಿಯ ಹಕ್ಕಿಗಳನ್ನ ನೋಡಿದೆ. 1980 ರಲ್ಲಿ ನನ್ನ ಅಧ್ಯಯನ ಪ್ರಾರಂಭಿಸಿದೆ. ಬೆಳಿಗ್ಗೆ ಎಂಟರ ಮೊದಲೇ ಊಟ ಕಟ್ಟಿಕೊಂಡು, ಒಂದೊಳ್ಳೆ ಕಾದಂಬರಿ ಮತ್ತು ಸಣ್ಣ ಟ್ರಾನ್ಸಿಸ್ಟರ್ ರೇಡಿಯೋ ಜೊತೆಗಿಟ್ಟುಕೊಂಡು, ಹೆಬ್ಬಾಳದ ಕೆರೆ ದಡದಲ್ಲಿದ್ದ, ಕೃಷಿ ವಿಶ್ವ ವಿದ್ಯಾನಿಲಯಕ್ಕೆ ಸೇರಿದ ಗದ್ದೆಗೆ ಹೊರಟೆನೆಂದರೆ ಸಂಜೆಯವರೆಗೆ ಆ ಗದ್ದೆಗೆ ನಾನೇ ರಾಣಿ.

ಫೋಟೋ ಕೃಪೆ : ebird

ಅಲ್ಲೊಂದು ಹಲಸಿನ ಮರ, ಅದರ ಕೆಳಗೊಂದು ಕಲ್ಲಿನ ಬೆಂಚು..ಕಣ್ಣು ಹಾಯಿಸಿದಷ್ಟು , MRS ಆಚೆಗೂ ಬರಿ ಭತ್ತದ ಗದ್ದೆಗಳು. MRS ನ ಒಂದು ಪಕ್ಕ ಸ್ಮಶಾನ , ಇನ್ನೊಂದುಕಡೆ ಆಗಿನ್ನೂ ಹಳ್ಳಿಯಾಗಿದ್ದ ಹೆಬ್ಬಾಳ. ರಸ್ತೆ ಆ ಕಡೆ ವಿಶಾಲವಾದ ಹೆಬ್ಬಾಳದ ಕೆರೆ. ಹೋದ ತಕ್ಷಣ ಭಾರವಾದ ವಸ್ತುಗಳನ್ನೆಲ್ಲ ಆ ಕಲ್ಲು ಬೆಂಚಿನ ಮೇಲಿಟ್ಟು ಆಯಾತವಾಗಿದ್ದ (rectangle) 10 ಹೆಕ್ತೇರ್ ಗದ್ದೆಯ ಸುತ್ತ ಒಂದು ರೌಂಡ್ ಹಾಕೋದು. ನೆಲದ ಮೇಲಿದ್ದ ಹಕ್ಕಿಗಳು, ಭತ್ತಕ್ಕೆ ದಾಳಿ ಇಡುವ ಗೀಜಗ ಮತ್ತು ಮುನಿಯಾ ಹಕ್ಕಿಗಳು,, ಭತ್ತದ ಸುದ್ದಿಯೇ ಬೇಡ ಎಂದು ಆಕಾಶದಲ್ಲಿ ಮೋಡಗಳ ಕೆಳಗಡೆ ಹಾರುತಿದ್ದ ಹದ್ದು, ಗಂಡು ಭೇರುಂಡಗಳು, ನೆಲದ ಮೇಲಿದ್ದ ಕಾಳುಗಳನ್ನು ಹಾಗೂ ಕೀಟಗಳನ್ನ ತಿನ್ನುತ್ತಿದ್ದ ಮೈನಾ ಹಕ್ಕಿಗಳು, ಆಗೊಮ್ಮೆ ಇಗೊಮ್ಮೆ ತನ್ನ ಆಕರ್ಷಕ ರೆಕ್ಕೆಗಳನ್ನ ಅಗಲಿಸಿ ಹಾರಿ ಬಂದು ಭತ್ತಕ್ಕೆ ದಾಳಿ ಇಟ್ಟು ಕೀಟಗಳನ್ನು ಭಕ್ಷಿಸುತ್ತಿದ್ದ blue jay (drongo), ಕಾಗೆ , ಕಾಡಿನ ಕಾಗೆ, ಗಿಣಿ, ನೀರಿನಲ್ಲೇ ನಿಂತು ಹುಳಗಳನ್ನೂ, ಸಣ್ಣ ಮೀನುಗಳನ್ನೂ, ಕೀಟಗಳನ್ನೂ ತಿನ್ನುತ್ತಿದ್ದ ಶುಭ್ರ ಬಿಳಿಯ ಬಣ್ಣದ ಇಗ್ರೆಟ್, ನೆಲದ ಮೇಲಿದ್ದ ಕಾಳು , ಕ್ರಿಮಿಗಳನ್ನ ತಿನ್ನುತ್ತಿದ್ದ, ಅದರೊಟ್ಟಿಗೆ ಹಸು, ಎಮ್ಮೆಗಳ ಮೇಲೆ ಸವಾರಿ ಮಾಡಿಕೊಂಡು ಅವುಗಳ ಮೇಲಿದ್ದ ಉಣ್ಣೆಗಳನ್ನು, ಇತರೆ ಪರೋಪಕಾರಿ ಕೀಟಗಳನ್ನು ಸ್ವಾಹಾ ಮಾಡುವ ಬೂದು ಬಣ್ಣದ cattle egret, ಪಕ್ಕದ ಕೆರೆಯ ಮೀನನ್ನು ಹಿಡಿದು ಅದನ್ನು ಕೊಕ್ಕಿನಲ್ಲಿ ಸಿಗಿಸಿಕೊಂಡು telegraph ತಂತಿಯ ಮೇಲೆ ರಾಜನಂತೆ ಕುಳಿತ ಕಿಂಗ್ ಫಿಶೆರ್, ಇವೆಲ್ಲಾ ನನ್ನ ಸುತ್ತಾಟದಲ್ಲಿ ತಟ್ಟನೆ ಕಂಡ ಪಕ್ದಗಳು. ಭತ್ತ ತೇನೆಯೊಡುತ್ತಿದ್ದಂತೆ ಬಳುಕುತ್ತಿದ್ದ ಭತ್ತದ ತೆನೆಯ ಮೇಲೆ ನಾಜುಕಾಗಿ ಕೂತು ಭತ್ತ ತಿನ್ನುತ್ತಿದ್ದ ಗೀಜಗ. ಅದು ಅತ್ತ ಹೋಗುತ್ತಲೆ ಸಣ್ಣ, ಸಣ್ಣ ಗುಂಪುಗಳಲ್ಲಿ ಹಾರಿ ಬಂದು ಗೀಜಗದಷ್ಟೇ ಗಾತ್ರವಿದ್ದ ಮುನಿಯಾಗಳು ಅಷ್ಟೇ ನಾಜುಕಾಗಿ ತೆನೆ ಮೇಲೆ ಕೂತು, ಕಾಳು ಕಿತ್ತು ತಿನ್ನುತಿದ್ದವು. ಈ ರೆಕ್ಕೆಗಳ ಅತಿಥಿಗಳನ್ನ ಹದಿನೈದು ದಿನದ ಅಂತರದಲ್ಲಿ ಎರಡು ದಿನ, ಭತ್ತ ನಾಟಿ ಮಾಡಿದಾಗಿನಿಂದ ಕೊಯ್ಲು ಮುಗಿಯುವವರೆಗೆ ಪ್ರತಿ ಗಂಟೆಗೊಮ್ಮೆ ದಾಖಲಿಸುತ್ತಿದ್ದೆ. ಒಂದು ರೌಂಡ್ ಹಾಕಿದ ನಂತರ ಕೂತು ಟ್ರಾನ್ಸಿಸ್ಟರ್ ಆನ್ ಮಾಡಿ , ಕಾದಂಬರಿ ಹಿಡಿದು ಕೂರುವುದು. ಸಂಶೋಧನೆ ಇಷ್ಟೊಂದು ಅಹ್ಲಾದ ಅಂಥ ಮೊದಲ ಬಾರಿಗೆ ಅರಿವಾಯಿತು.

ಫೋಟೋ ಕೃಪೆ : flickr

ಒಟ್ಟು 32 ಜಾತಿಯ ಹಕ್ಕಿಗಳು ಭತ್ತದ ಗದ್ದೆಯಲ್ಲಿ ಕಂಡೆ. ಇವುಗಳನ್ನ ಬೀಜಹಾರಿ(ಗೀಜಗ), ಕೀಟಹಾರಿ (drongo), ಮಾಂಸಾಹಾರಿ (ಹದ್ಧು), ಕೀಟ,ಬೀಜ, ಕಾಳು ಸೇವಿಸುವ ಸರ್ವಭಕ್ಷಕ ಹಕ್ಕಿಗಳು (ಮೈನಾ ), ನೆಲದ ಮೇಲೆ ಕೂತು ತಿನ್ನುವ (ಮೈನಾ,pond heron), ಭತ್ತದ ತೆನೆಯ ಮೇಲೆ ಕೂತು ಕಾಳು ತಿನ್ನುವ ( ಗೀಜಗ, ಮುನಿಯಾ), ಹಾರಿಬಂದು ಕಾಳನ್ನು ತೆನೆಯಿಂದ ಹಾಗೆ ಕಿತ್ತು ಹಾರಿಹೋಗುವ (ಗಿಣಿ) ಹೀಗೆ ಅಂತ ಅವು ಗಳನ್ನೆಲ್ಲಾ ವರ್ಗೆಕರಿಸಿದೆ.ದಿನದ ಯಾವ ವೇಳೆಯಲ್ಲಿ ಅವುಗಳ ಸಾಂದ್ರತೆ ಹೆಚ್ಚು, ಭತ್ತದ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹಕ್ಕಿಗಳ ವೈವಿದ್ಯತೆ ಮತ್ತು ಎಷ್ಟೆಷ್ಟು ಹಾನಿ, ಇವೆಲ್ಲುವುಗಳನ್ನೂ ಸಮೀಕರಣಗಳ ಮೂಲಕ ದೃಢ ಪಡಿಸಿದೆ. ಇಷ್ಟೆಲ್ಲಾ ಆದ ಮೇಲೆ ಈ ಅಂಕೆ ಸಂಖ್ಯೆ, ಹಕ್ಕಿಗಳು ವಿವರಣೆ,ವೈವಿದ್ಯತೆ, ಮಾಡುತ್ತಿದ್ದ ಹಾನಿ , ಇವುಗಳ ಆಧಾರದ ಮೇಲೆ ವೈಜ್ಞಾನಿಕ ಪ್ರಭಂಧವೊಂದನ್ನು ಸಿದ್ದಪಡಿಸಿ ಅಮೇರಿಕಾದಲ್ಲಿದ್ದ ಪ್ರೊ. ಜ್ಯಾಕ್ಸನ್ ( ಅವರ ಬಗ್ಗೆ ಮುಂದೆ ಬರೆಯುವೆ) ಕಳುಹಿಸಿ ಕೊಟ್ಟೆ. ಅವರು ಅದನ್ನು ಕೊಲೆರೆಡೊ ರಾಜ್ಯದ ಗೆನ್ಸ್ವಿಲ್ಲೇನ ಲ್ಲಿ ನಡೆದ ಅಂತರ ರಾಷ್ಟ್ರೀಯ ಸಮ್ಮೇಳನಕ್ಕೆ ಕಳುಹಿಸಿಕೊಟ್ಟರು. ಸಮ್ಮೇಳನಕ್ಕೆ ನಾನು ಹೋಗದಿದ್ದರೂ ಅದರ proceedings ನಲ್ಲಿ ನನ್ನ ಸಂಪೂರ್ಣ ಲೇಖನ, ಒಂದಕ್ಷರವೂ ತಿದ್ದಲ್ಪಡದೆ ಪ್ರಕಟವಾಯಿತು


  • ಶಕುಂತಲಾ ಶ್ರೀಧರ – ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಾಣಿ ಶರೀರಶಾಸ್ತ್ರದಲ್ಲಿ ಪಿಎಚ್‌ಡಿ ಪಡೆಡಿದ್ದು, ಭಾರತೀಯ ದಶಕಗಳ ಮೇಲಿನ ಅವರ ಪ್ರವರ್ತಕ ಕೆಲಸವನ್ನು ಗುರುತಿಸಿ, ಡಾ.ಶ್ರೀಧರ ಅವರನ್ನು ಆಕ್ಸ್‌ಫರ್ಡ್, ನಾಟಿಂಗ್‌ಹ್ಯಾಮ್, ಯಾರ್ಕ್, ಮ್ಯೂನಿಚ್, ಡ್ಯಾನಿಶ್ ಕೀಟ ನಿಯಂತ್ರಣ ಪ್ರಯೋಗಾಲಯ, ಸ್ಪೇನ್, ವಿಯೆನ್ನಾ, ಟುಬಿಂಗೆನ್,ಅಮೇರಿಕಾದ ಪ್ರತಿಷ್ಟಿತ ವಿಶ್ವವಿದ್ಯಾನಿಲ್ಸಯಾಗಳೇ ಸೇರಿದಂತೆ ವಿಶ್ವದಾದ್ಯಂತ ಸೆಮಿನಾರ್‌ಗಳನ್ನು ನೀಡಲು ಆಹ್ವಾನಿಸಿದ್ದಾರೆ . 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW