ಕವಿ ಮಾರುತಿ ಗೋಪಿಕುಂಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ನಾನೇನು ಸುಮ್ಮನೆ
ಬಂದೆನೆ!? ಈ ಭೂಮಿಗೆ
ಮೋಡಗಳು ಜಗಳವಾಡಿ
ಹರಿಸಿದ ನೋವಿನ
ಬೆವರ ಹನಿಗಳು
ಇಳಿದಿವೆ ಇಳೆಗೆ
ಜೀವಗಳ ಏಳ್ಗೆಗೆ.
ನನ್ನ ನೋಡಿ
ಬೆಳೆಯುವರೆಸ್ಟೊ
ಕುಣಿಯುವರೆಸ್ಟೊ
ಬೆಳೆದು ಮರವಾಗುವರೆಸ್ಟೊ
ಇವರನ್ನೆಲ್ಲ ಕಂಡು
ನಾನು ನಲಿದಿದ್ದೇನೆ.
ಈಗೀಗ ಅರ್ಥವಾಗುತ್ತಿದೆ
ಒಬ್ಬರ ನೋವು
ಇನ್ನೊಬ್ಬರ ನಲಿವಿಗೂ
ಕಾರಣವೆಂದು.
ನಾನ ಮಳೆಯಾಗುತ್ತೇನೆ!!!?
ನೀನು ಮಳೆಗೆ
ಒಡ್ಡಿಕೊಳ್ಳುವ ಪರಿಗೆ
ಕೈ ನೀಡಿ ಹಿಡಿಯುವ
ಬೊಗಸೆ ತುಂಬಾ ಮಳೆಗೆ
ಅದನ್ನು ಜತನವಾಗಿಸುವ
ನಿನ್ನ ‘ಅಗ್ಗಿಷ್ಟಿಕೆ’ಗೆ
ಈ ಬದುಕಿಗಿಷ್ಟು ಸಾಕು.
- ಮಾರುತಿ ಗೋಪಿಕುಂಟೆ