ಲೇಖಕ, ಕವಿ ಕು.ಸ.ಮಧುಸೂದನ್ ರಂಗೇನಹಳ್ಳಿ ಅವರ ಲೇಖನಿಯಲ್ಲಿ ಮೂಡಿ ಬಂದ ‘ನಮ್ಮವರು; ಕವನವನ್ನು ತಪ್ಪದೆ ಓದಿ..
ಒಂದರ ಹಿಂದೆ ಒಂದರಂತೆ
ಇರಿದ ಚೂರಿಗಳ
ಹಿಡಿದವರು
ಬೇರ್ಯಾರು ಆಗಿರಲಿಲ್ಲ.
ಜೊತೆಯಲಿದ್ದವರೇ ಆಗಿದ್ದರು.
ಒಂದೇ ತಟ್ಟೆಯಲಿ ಉಂಡು
ಒಡನಾಡಿದ್ದವರೇ ಆಗಿದ್ದರು!
ಇರಿದ ಚೂರಿಗಳ ಹಿಂದೆ ಬರೆದಿದ್ದರೂ
ಅವರುಗಳ ಹೆಸರು
ನಾನೇನು ಮಾಡಲಾಗಲಿಲ್ಲ
ಸುಮ್ಮನೇ ರಕ್ತ ಮೆತ್ತಿದ ಕತ್ತಿಗಳ
ತೊಳೆದುಕೊಟ್ಟೆ
ಇರಿಯುವುದಾದರೆ ಇರಿದು ಬಿಡಲಿ
ಎದೆಗೆಂದು ಎದುರು ನಿಂತೆ
ಹೇಡಿಗಳು
ಹೊರಟು ಹೋದರು
ಸಂಭಾವಿತರಂತೆ!
- ಕು.ಸ.ಮಧುಸೂದನ್ ರಂಗೇನಹಳ್ಳಿ