ಸ್ತನದ ಕ್ಯಾನ್ಸರ್ ಹೆಚ್ಚಾಗಲು ಕಾರಣಗಳೇನು? – ಡಾ.ರಮ್ಯಾ ಭಟ್

ಮೊದಲನೇ ಹಂತದ ಸ್ತನದ ಕ್ಯಾನ್ಸರ್ ವು ಶೀಘ್ರವೇ ಗುಣಮುಖವಾಗುತ್ತದೆ. ದ್ವಿತೀಯ ಹಾಗೂ ತೃತೀಯ ಹಂತದ ಸ್ತನದ ಕ್ಯಾನ್ಸರ್  ದೀರ್ಘಕಾಲದ ಚಿಕಿತ್ಸೆ ಅಗತ್ಯವಿರುತ್ತದೆ ಮತ್ತು ಅದು ಮರುಕಳಿಸುವ ಸಾಧ್ಯತೆ ಹೆಚ್ಚಿರುತ್ತದೆ. ನಾಲ್ಕನೇ ಹಂತವು ಗುಣಪಡಿಸಲು ಅಸಾಧ್ಯವಾಗಿರುತ್ತದೆ.ಇನ್ನಷ್ಟು ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಡಾ.ರಮ್ಯಾ ಭಟ್ ಅವರು, ತಪ್ಪದೆ ಓದಿ…

ಸ್ತನದ ಕ್ಯಾನ್ಸರ್ /ಸ್ತನಾರ್ಬುದವು ಜಗತ್ತಿನಾದ್ಯಂತ ತುಂಬಾ ಮಹಿಳೆಯರನ್ನು ಬಾಧಿಸುತ್ತಿರುವ ಖಾಯಿಲೆಯಾಗಿದೆ. ಆತಂಕ ಪಡುವ ವಿಷಯವೆಂದರೆ ಇತ್ತೀಚಿನ ದಿನಗಳಲ್ಲಿ ಯುವತಿಯರೇ ಇದಕ್ಕೆ ಬಲಿಯಾಗುತ್ತಿದ್ದಾರೆ.1990ರಲ್ಲಿ 4ನೇ ಸ್ಥಾನದಲ್ಲಿದ್ದ ಭಾರತ,ಇದೀಗ ಮೊದಲನೆಯ ಸ್ಥಾನಕ್ಕೆ ಬಂದು ಜಗತ್ತಿನಾದ್ಯಂತ ಅತೀ ಹೆಚ್ಚು ಸ್ತನದ ಕ್ಯಾನ್ಸರ್ ಗೆ ಒಳಗಾದರವರನ್ನು ಹೊಂದಿದೆ.

ಭಾರತದಲ್ಲಿ ಪ್ರತೀ 4 ನಿಮಿಷಕ್ಕೆ ಒಂದು ಮಹಿಳೆಗೆ ಸ್ತನದ ಕ್ಯಾನ್ಸರ್ ಎಂದು ದೃಢೀಕರಿಸಿಕೊಳ್ಳುತ್ತಿದ್ದಾರೆ. ಹಾಗೂ ಪ್ರತೀ 8 ನಿಮಿಷಕ್ಕೆ ಒಬ್ಬರು ಸ್ತನದ ಕ್ಯಾನ್ಸರ್ ದಿಂದ ಸಾವನ್ನಪ್ಪುತ್ತಿದ್ದಾರೆ. ಸ್ತನದ ಕ್ಯಾನ್ಸರ್ ದ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ ಆದರೆ ಅದರ ಬಗ್ಗೆ “ಎಚ್ಚರ” ಅತ್ಯಗತ್ಯ. ಹಾಗೂ ಬರದಂತೆ ತಡೆಯುವ ಮುಂಜಾಗ್ರತಾ ಕ್ರಮಗಳೂ ಕೂಡ. ಸ್ತನದ ಕ್ಯಾನ್ಸರ್ ಒಂದು ಬಹಳ ವಿಸ್ತಾರವಾದ ವಿಷಯ.

ಸ್ತನದ ಕ್ಯಾನ್ಸರ್  ಪಯಣ ಎಲ್ಲಿಂದ? ಹೇಗೆ? :

1.ಅಚಾನಕ್ ಆಗಿ ಒಂದು ದಿನ ಸ್ತನದಲ್ಲಿ ಕಾಣಿಸಿಕೊಳ್ಳುವ ಗೆಡ್ಡೆ. ಇದರಲ್ಲಿ ತುಂಬಾ ಪ್ರಮಾಣದ ನೋವು ಇರುವುದಿಲ್ಲ.,ಚರ್ಮ ಸುಕ್ಕುಗಟ್ಟಿ ಹೊಳೆಯುತ್ತಿರುತ್ತದೆ.

2. ಚರ್ಮ ದಪ್ಪವಾಗಿ ಒಣಗಿರುತ್ತದೆ.

ಸಾಮಾನ್ಯವಾಗಿ ಅತ್ಯಂತ ಆಳದಲ್ಲಿರುವ ಗೆಡ್ಡೆಯು ದುಗ್ಧಗ್ರಂಥಿಗಳ ಸಂಚಾರಕ್ಕೆ ತಡೆಯೊಡ್ಡುತ್ತದೆ.ಇದರಿಂದ ಸ್ತನದ ಚರ್ಮವು ಕಿತ್ತಳೆಹಣ್ಣಿನ ಸಿಪ್ಪೆಯಂತಾಗಿರುತ್ತದೆ.ಇದು ಕ್ಯಾನ್ಸರ್ ಮುಂದುವರಿದ ಹಂತವಾಗಿರುತ್ತದೆ.

3.ಮೊಲೆ ತೊಟ್ಟಿನಲ್ಲಿ ಹುಣ್ಣು ಕಾಣಿಸಿಕೊಳ್ಳುವುದು ಹಾಗೂ ಮೊಲೆ ತೊಟ್ಟು ಒಳಕ್ಕೆ ಹೋಗಿರುವುದು.

ಫೋಟೋ ಕೃಪೆ : google

ಸ್ತನದ ಕ್ಯಾನ್ಸರ್ ಗೆ ಕಾರಣಗಳು :
1. ವಯಸ್ಸು
2. ಗರ್ಭಾವಸ್ಥೆ-
• ಅತೀ ತಡವಾಗಿ ಮುಟ್ಟು ನಿಲ್ಲುವುದು
• ಸ್ತನ್ಯಪಾನ ಮಾಡದೇ ಇರುವುದು
• ಅತೀ ಬೇಗ ಋತುಮತಿ ಆಗುವುದು
• 30+ ನಂತರ ಗರ್ಭಧಾರಣೆ
• ಸೌಲ್ಯತ್ವ
• ಜೀವನಶೈಲಿ
• ಹಾರ್ಮೋನ್ ಮಾತ್ರೆಗಳ ಸೇವನೆ
• ಧೂಮಪಾನ ಮತ್ತು ಮಧ್ಯಪಾನ
• ಅತೀ ಉದ್ದ ಇರುವ ಮಹಿಳೆಯರಲ್ಲಿ ಜಾಸ್ತಿ
• ಮಾನಸಿಕ ಒತ್ತಡ ರಾತ್ರಿ ಪಾಳಿಯಲ್ಲಿ ಕೆಲಸ
• ಗರ್ಭನಿರೋಧಕ ಮಾತ್ರೆಗಳು
• ಅತಿಯಾದ ಜಿಡ್ಡು ಪದಾರ್ಥಗಳ ಸೇವನೆ

ಫೋಟೋ ಕೃಪೆ : google

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು :
1. ಸ್ತನದ ಗಾತ್ರದಲ್ಲಿ ಬದಲಾವಣೆ.
2. ಸ್ತನದಲ್ಲಿ ಅಥವಾ ಕಂಕುಳಲ್ಲಿ ಗೆಡ್ಡೆ ಕಾಣಿಸಿಕೊಳ್ಳುವುದು
3. ಸ್ತನದ ಚರ್ಮದಲ್ಲಿ ಅಥವಾ ತೊಟ್ಟಿನಲ್ಲಿ ಬದಲಾವಣೆ
4. ಚರ್ಮದ ಉರಿಯೂತ, ಸ್ತನದ ಬಣ್ಣದಲ್ಲಿ ಬದಲಾವಣೆ
5. ರಸ್ತ ಅಥವಾ ಇತರ ಸ್ರಾವಗಳು

ಇತ್ತೀಚೆಗೆ ಬ್ರೆಸ್ಟ್ ಸ್ಕ್ರೀನಿಂಗ್ ಪರೀಕ್ಷೆಯನ್ನು ವೈದ್ಯರು ಕಡ್ಡಾಯಗೊಳಿಸಿದ್ದಾರೆ. ಇದರ ಮೂಲ ಉದ್ದೇಶ ಅತೀ ಬೇಗನೆ ಸ್ತನ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವುದು ಹಾಗೂ ಚಿಕಿತ್ಸೆ ಪಡೆದುಕೊಳ್ಳುವುದು ಆಗಿದೆ. 20+ ವರ್ಷದ ನಂತರ ಪ್ರತಿಯೊಬ್ಬ ಮಹಿಳೆಯು ಪ್ರತೀ ತಿಂಗಳಿಗೊಮ್ಮೆ ಸ್ವಯಂ ಸ್ತನ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ.

ಫೋಟೋ ಕೃಪೆ : google

ಸ್ಕ್ರೀನಿಂಗ್ ಪರೀಕ್ಷೆ :

20-30 ವರ್ಷ- ವರ್ಷಕ್ಕೆ ಒಂದು ಸಲ
30-60- ವರ್ಷಕ್ಕೆ ಎರಡು ಸಲ
60 ವರ್ಷ ಮೇಲ್ಪಟ್ಟವರು – ವರ್ಷಕ್ಕೆ ಒಂದು ಸಲ

ಭಾರತೀಯ ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನದ ಕ್ಯಾನ್ಸರ್ ಕಾರಣಗಳು:

• ಅತಿಸೌಖ್ಯ, ಬೊಜ್ಜು
• ಅಶಿಸ್ತಿನ ಜೀವನಶೈಲಿ
• ವ್ಯಾಯಾಮ ಕಡಿಮೆ ಆಗುತ್ತಿರುವುದು
• ಅತಿಯಾದ ಮೊಬೈಲ್, ಕಂಪ್ಯೂಟರ್ ಹಾಗೂ ಟಿವಿ ಬಳಕೆ
• 30+ ವರ್ಷದ ನಂತರ ಗರ್ಭಧಾರಣೆ
• ಕೃತ ಗರ್ಭಧಾರಣೆ
• ಗರ್ಭನಿರೋಧಕ ಮಾತ್ರೆಗಳು
• ಹಾರ್ಮೋನಲ್ ಮಾತ್ರೆಗಳ ಅತಿಯಾದ ಸೇವನೆ
• ರಾತ್ರಿ ಪಾಳಿಯ ಕೆಲಸ
• ಮಾನಸಿಕ ಒತ್ತಡ
• ಧೂಮಪಾನ ಮತ್ತು ಮದ್ಯಪಾನ
• ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆಗಳು

ಫೋಟೋ ಕೃಪೆ : google

ಸ್ತನದ ಕ್ಯಾನ್ಸರ್ ದ ಸಾಧ್ಯ ಸಾಧ್ಯತೆಗಳು : 

ಸ್ತನದ ಕ್ಯಾನ್ಸರ್ ಪತ್ತೆ ಹಚ್ಚುವಿಕೆಯು ಯಾವಾಗಲೂ ಸುಲಭವಾಗಿಲ್ಲ. ಭಾರತದಲ್ಲಿ ಸಾಮಾನ್ಯವಾಗಿ ಸ್ತನದ ಕ್ಯಾನ್ಸರ್ ವು ಕೊನೆಯ ಹಂತದಲ್ಲೇ ಪತ್ತೆಯಾಗುತ್ತದೆ. ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿದಲ್ಲಿ ಸ್ತನದ ಕ್ಯಾನ್ಸರ್ ವನ್ನು ಸುಲಭವಾಗಿ ನಿವಾರಣೆಗೊಳಿಸಬಹುದು. ಯಾವುದೇ ನೋವು ಇಲ್ಲದಿರುವ ಕಾರಣ ಭಾರತದಲ್ಲಿ ಮಹಿಳೆಯರು ಅದನ್ನು ಕಡೆಗಣಿಸುತ್ತಾರೆ. ಭಾರತದಲ್ಲಿ ಸ್ತನಾರ್ಬುದವು ಒಂದು ಬಹುಮುಖ್ಯ ಆರೋಗ್ಯಸಮಸ್ಯೆ ಎಂದು ಪರಿಗಿಣಿಸಿ ಅದನ್ನು ಬೇಗನೇ ಪತ್ತೆಹಚ್ಚಿದಲ್ಲಿ ಮಾತ್ರವೇ ಇದನ್ನು ಗುಣಮುಖಗೊಳಿಸಲು ಸಾಧ್ಯ.

ಭಾರತದಲ್ಲಿ ಇದರ ಬಗ್ಗೆ ಮುಕ್ತವಾಗಿ ಮಾತನಾಡದೇ ಹಾಗೂ ಚಿಕಿತ್ಸೆಗೆ ಒಳಪಡದೇ ಇರುವ ಕಾರಣ ಜೊತೆಗೆ ಇದರ ಬಗ್ಗೆ ಮಾತನಾಡುವುದು ಅಪರಾಧ ಎಂದು ಬಿಂಬಿಸಲ್ಪಡುವುದರಿಂದ, ಇದು ದೊಡ್ಡ ಖಾಯಿಲೆಯಾಗಿ ಕಂಡುಬರುತ್ತದೆ. ಮಹಿಳೆಯರು ತಮ್ಮ ಸ್ತನದ ಗಾತ್ರದ ಬಗ್ಗೆ ತಿಳಿದುಕೊಂಡು, ಅದರಲ್ಲಿನ ಚೂರು ಬದಲಾವಣೆಯನ್ನು ಗಮನಿಸಿ, ಕೂಡಲೇ ವೈದ್ಯರ ಸಲಹೆ ಪಡೆಯುವುದರಿಂದ ಅದರ ತೀವ್ರತೆಯನ್ನು ತಗ್ಗಿಸಬಹುದು.ಸ್ತನದ ಕ್ಯಾನ್ಸರ್ ವು ರೋಗಿಯನ್ನು ಮಾತ್ರ ಕಾಡುವುದಲ್ಲದೇ, ಇಡೀ ಕುಟುಂಬವನ್ನು ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಬಲಹೀನರನ್ನಾಗಿ ಮಾಡುತ್ತದೆ. ಚಿಕಿತ್ಸೆಯ ಖರ್ಚುವೆಚ್ಚಗಳು ದುಬಾರಿಯಾಗಿರುವುದು ಇಡೀ ಕುಟುಂಬವನ್ನೇ ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ.

ತಡೆಗಟ್ಟುವಿಕೆ :

ಸ್ತನದ ಕ್ಯಾನ್ಸರ್ ದ ಬಗ್ಗೆ ತಿಳಿದುಕೊಳ್ಳುವುದು ಮತ್ತು ಜಾಗ್ರತೆ ವಹಿಸುವುದು ಹಾಗೂ ಆಗಾಗ ಪರೀಕ್ಷೆಗೊಳಪಟ್ಟು ಅವಶ್ಯಕತೆಯಿದ್ದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತ. ಸ್ವಯಂ ಸ್ತನ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಕೊಂಡು ಯಾವುದೇ ಅಸಹಜತೆ ಕಂಡುಬಂದಲ್ಲಿ ವೈದ್ಯರನ್ನು ಕೂಡಲೇ ಭೇಟಿಯಾಗತಕ್ಕದ್ದು. ಮೊದಲೇ ಪತ್ತೆ ಹಚ್ಚುವುದರಿಂದ ಅದನ್ನು ಶೀಘ್ರವಾಗಿ ಗುಣಪಡಿಸಬಹುದು ಹಾಗೂ ಆರೋಗ್ಯವಾಗಿ ಬದುಕಿ ಬಾಳಬಹುದು.

ಮೊದಲನೇ ಹಂತದ ಸ್ತನದ ಕ್ಯಾನ್ಸರ್ ವು ಶೀಘ್ರವೇ ಗುಣಮುಖವಾಗುತ್ತದೆ. ದ್ವಿತೀಯ ಹಾಗೂ ತೃತೀಯ ಹಂತದ ಸ್ತನದ ಕ್ಯಾನ್ಸರ್  ದೀರ್ಘಕಾಲದ ಚಿಕಿತ್ಸೆ ಅಗತ್ಯವಿರುತ್ತದೆ ಮತ್ತು ಅದು ಮರುಕಳಿಸುವ ಸಾಧ್ಯತೆ ಹೆಚ್ಚಿರುತ್ತದೆ. ನಾಲ್ಕನೇ ಹಂತವು ಗುಣಪಡಿಸಲು ಅಸಾಧ್ಯವಾಗಿರುತ್ತದೆ.

ನಲುವತ್ತು ವರ್ಷ ಒಳಗಿನ ಮಹಿಳೆಯರಲ್ಲಿ ಹಾಗೂ ಎಂಬತ್ತು ವರ್ಷ ಮೇಲಿನ ಮಹಿಳೆಯರಲ್ಲಿ ಗುಣಮುಖರಾಗುವ ಸಾಧ್ಯತೆ ಕಡಿಮೆ. ಭಾರತದಲ್ಲಿ ಸ್ತನದ ಕ್ಯಾನ್ಸರ್ ಅರಿವು ಮೂಡಿಸುವಿಕೆ

ಅಕ್ಟೋಬರ್ ತಿಂಗಳನ್ನು  ಸ್ತನದ ಕ್ಯಾನ್ಸರ್ ದ ಅರಿವುಮೂಡಿಸುವಿಕೆಯ ತಿಂಗಳೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ, ಪ್ರತಿಯೊಂದು ಶಾಲಾಕಾಲೇಜುಗಳಲ್ಲಿ, ಕಂಪನಿಗಳಲ್ಲಿ, ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ದೊಡ್ಡ ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ಮನೆಮನೆಗೆ ತೆರಳು ಇದರ ಬಗ್ಗೆ ಅರಿವು ಮೂಡಿಸುತ್ತಾರೆ. ಇದರ ಬಗ್ಗೆ ಮುಕ್ತವಾಗಿ ಮಾತನಾಡುವಂತೆ ಹಳ್ಳಿಗಳಲ್ಲಿ ಮಹಿಳೆಯರನ್ನು ಹುರಿದುಂಬಿಸಲಾಗುತ್ತಿದೆ.

ಪಿಂಕ್ ರಿಬ್ಬನ್ :
ಜಗತ್ತಿನಾದ್ಯಂತ ಗುಲಾಬಿ ರಿಬ್ಬನ್ ಅಥವಾ ಪಿಂಕ್ ರಿಬ್ಬನ್ ಎಂಬುದು ಸ್ತನದ ಕ್ಯಾನ್ಸರ್ ಅರಿವು ಮೂಡಿಸುವಿಕೆಯ ಸಂಕೇತವಾಗಿದೆ.


  • ಡಾ.ರಮ್ಯಾ ಭಟ್ – ಆಯುರ್ವೇದ ವೈದ್ಯರು, ವೈದಕೀಯ ಬರಹಗಾರರು, ಬೆಂಗಳೂರು 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW