ವಿಕೃತ ಮನಸ್ಥಿತಿಯವರು ಎಲ್ಲೆಂದರಲ್ಲಿ ಇರ್ತಾರೆ ಅನ್ನೋದಕ್ಕೆ ಲೇಖಕಿ ವೀಣಾ ವಿನಾಯಕ್ ಅವರ ಅನುಭವವೇ ಸಾಕ್ಷಿ, ಆದಷ್ಟು ಮನಸ್ಸನ್ನು ನಿರ್ಮಲವಾಗಿ ಇಟ್ಟುಕೊಳ್ಳಿ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಿ ಎಂದು ಹೇಳುತ್ತಾ, ತಪ್ಪದೆ ಮುಂದೆ ಓದಿ…
ಅವತ್ತು ಮಗನಿಗೆ ಮನೆಯವರು ಬೈತಿದ್ರು. ಹೊಸ ಕಾರು ಎಷ್ಟ್ ಕಡೆ ಸ್ಕ್ರಾಚಸ್ ಆಗಿದೆ. ನೋಡ್ಕೊಂಡ್ ಓಡ್ಸೋದಲ್ವಾ ಅಂತ. ಮಗ ಹೇಳ್ತಿದ್ದ ಇಲ್ಲ ನಾ ಎಲ್ಲೂ ತಾಗ್ಸಿಲ್ಲ. ನೀವೇ ಇದ್ರಲ್ಲ ಜೊತೇಲಿ. ಪಾರ್ಕಿಂಗ್ ಮಾಡಿ ಅದೇ ಜಾಗದಿಂದ ಹೊರ್ಟಿದೀವಿ ಅಂತ. ಕಾರು ನೋಡಿದ ನನಗೆ ಹೊಟ್ಟೆ ಉರೀತು. ಮನೆಯವರೆದುರು ಮಗನಿಗೆ ಬೈದಿಲ್ಲ. ಉರಿಯೋ ಬೆಂಕಿಗೆ ತುಪ್ಪ ಸುರ್ದಂಗೆ ಅಂತ. ಒಬ್ಬನೇ ಇದ್ದಾಗ ನಾನೂ ಬೈದೆ.
ನಾವು ಮನುಷ್ಯರೇ ಹಾಗೆ ನಮ್ಮದು ನಮಗೆ ಸಂಬಂಧ ಪಟ್ಟ ವಸ್ತು ಯಾವ್ದೇ ಆಗ್ಲಿ ಪ್ರಾಣಿಗಳಾಗ್ಲಿ ಜೀವವಿರಲಿ ಇಲ್ದೇ ಇರಲಿ, ಅವಗಳ ಜೊತೆ ಒಂಥರಾ ಭಾವನಾತ್ಮಕ ಸಂಬಂಧ ಇಟ್ಕೊಂಡಿರ್ತೀವಿ. ಚೂರು ಏನಾದ್ರೂ ಒದ್ದಾಡ್ತೀವೀ.
ಮಗ ಅಂದ ನಾನ್ಮಾಡಿದ್ದಲ್ಲ ಅಂತ ಎಷ್ಟ್ ಸಲ ಹೇಳೋದು ಅಂತ. ಅದಾಗಿ ಎರಡು ದಿನ ಬಿಟ್ಟು ನನ್ನ ತಮ್ಮ ಬಂದಿದ್ದ. ಅವನಂದ ನನ್ನ ಜಿಪ್ಸಿ ಎದುರುಗಡೆ ಗ್ಲಾಸ್ ಪೂರ್ತಿ ಸ್ಕ್ರಾಚಸ್. ಮೊನ್ನೆ ತೊಳೀವಾಗ ಗೊತ್ತಾಯ್ತು. ಅದು ಉಪಯೋಗ್ಸೊದು ನಾನೊಬ್ನೇ. ಹೆಂಗಾಯ್ತು ಗೊತ್ತಿಲ್ಲ ಅಂದ.
ಹೀಗೆ ಒಂದಿನ ನಮ್ಮವರ ಫ್ರೆಂಡ್ ಬಂದಿದ್ರು. ದೇವಸ್ಥಾನಕ್ಕೆ ಬೈಕಲ್ಲಿ ಹೋಗಿದ್ದೆ. ಪೂಜೆ ಮುಗಿಸಿ ಹೊರ ಬಂದಾಗ ನೋಡ್ತೀನಿ ಬೈಕ್ ಸೀಟ್ ಉದ್ದಕ್ಕೆ ಕಟ್ ಮಾಡಿದ ಹಾಗೆ ಹರಿದು ಹೊಗಿದೆ. ನಾ ಹೋಗ್ವಾಗ ಸರೀ ಇತ್ತು ಅಂತ. ಆಮೇಲೆ ಗೈತ್ತಾಯ್ತು ದೇವಸ್ಥಾನದ ಒಳಗೆ ಹೋಗುವಾಗ ಇಬ್ಬರು ಹುಡುಗರು ಇದ್ರು (ದೊಡ್ಡವರೇ) ಅವರದ್ದೇ ಕೆಲಸ ಅಂತ ಬೇಜಾರು ಮಾಡ್ಕೋತಿದ್ರು. ಆಗಲೇ ಗೊತ್ತಾಯ್ತು ನಮ್ಮ ಕಾರು, ತಮ್ಮನ ಜಿಪ್ಸಿ ಹೀಗೆ ಗೀರಾಗಲು ಕಾರಣ. ಇದಿಷ್ಟೂ ಮಾಡಿದ್ದು ಇಂಥದೇ ಮನಸ್ಥಿತಿಯ ಬೇರೆ ಬೇರೆ ವ್ಯಕ್ತಿಗಳು.
ಇಂಥ ವಿಕೃತ ಮನಸ್ಥಿತಿಯವರು ಎಲ್ಲೆಂದರಲ್ಲಿ ಇರ್ತಾರೆ. ನಮ್ಮಿಂದ ಅವರಿಗೇನಾದರೂ ತೊಂದರೆ ಯಾಗಿರಬಹುದಾ?? ಇಲ್ಲ. ಪರಿಚಯಸ್ಥರಾ? ಗೊತ್ತೇ ಇಲ್ಲ ಅವರ್ಯಾರು ಅಂತ. ಸಂಬಂಧಿಗಳಾ? ಖಂಡಿತಾ ಅಲ್ಲ ಹೋಗ್ಲಿ ಸಿಕ್ಕಿ ಹಾಕೊಳ್ತಾರಾ? ಅದೂ ಇಲ್ಲ. ಆದರೆ ಯಾಕೆ ಇಂಥ ವಿಕೃತಿಗೆ ಇಳೀತಾರೆ. ಸಮಾಜದ ಸ್ವಾಸ್ಥ್ಯ ಕೆಡಿಸಲು ಸದ್ಧಿಲ್ಲದೇ ಇಂಥ ಕೆಳ ಮಟ್ಟದ ಕೆಲಸ ಮಾಡ್ತಾನೇ ಇರ್ತಾರೆ.ಅದರಿಂದ ಏನು ಸಂತೋಷ ಸಿಗತ್ತೋ ನಾ ಕಾಣೆ..
- ವೀಣಾ ವಿನಾಯಕ್