ಹೆರಿಗೆ ಸಮಯದಲ್ಲಿ ನಡೆಯುವ ಹೆಣ್ಣಿನ ಒಂದು ತೊಳಲಾಟದ ಕುರಿತು ಕವಿ ಎಂ.ಎ.ಶಶಿಕುಮಾರ್ ಅವರು ಬರೆದ ಸುಂದರ ಕವನವನ್ನು ತಪ್ಪದೆ ಓದಿ….
ತಾಯಿಯ ಗರ್ಭ ಸುಂದರ ಗುಲಾಬಿ ತೋಟ
ಗರ್ಭಧರಿಸಿದ ಹೆಣ್ಣು ತಾಯಿಯಾಗುವುದು
ಖಚಿತವಾದರು ಹೆರಿಗೆ ಯಾಗುವ ವರೆಗು
ಅವಳು ಎದೆಯಾಂತರಾಳದ ತುಮುಲ
ಗರ್ಭದೊಳಗಣ ಸಂಕಟ ಹೇಳಲಾಗದು
ಹೇಳಿದರು ವೈದ್ಯೆ ಹೆಣ್ಣಾದರು ಸಹನೆ
ತಾಳ್ಮೆ ಮೀರಿ ಕಾಯಬೇಕು ಇಲ್ಲವೆ
ಹೆರಿಗೆಯ ಸಂಕಟದ ಹೆಣ್ಣಿಗೆ ವೈದ್ಯೆಯ
ಆಯಾಗಳ ಕುಹುಕ ನೋಟ
ಅತ್ತೆಗೆ ಮೊಮ್ಮಗನ ಹೊರುವ ಆಸೆ
ತಾಯಿಗೆ ಮಗಳ ಜೀವದ ಆಸೆ
ಬಸುರಿ ಹೆಣ್ಣಿಗೆ ಮಗುವ ನೋಡಿ
ಹಾಲುಣಿಸುವಾಸೆ
ಹಿರಿಯ ಹೆಂಗಸರಿಗೆ ಏಳೆಂಟು ಹೆರಿಗೆ
ಆದ ಅನುಭವ ಮಕ್ಕಳೆಲ್ಲ ಗುಲಾಬಿಯ ಸಮ
ಈಕೆಗೆ ಚೊಚ್ಚಲ ಹೆರಿಗೆಯ ಜೀವ ಭಯ
ತನ್ನೋಡಲಲ್ಲಿ ಅರಳುವ ಗುಲಾಬಿಯ
ನೋಡುವ ಹಂಬಲ…
ಹೊರಗೆ ನಿಂತಿರುವ ನೆಂಟರೊ ಬಾಜಿಯಲಿ
ತಲ್ಲೀನ ಹುಟ್ಟುವ ಕಂದನ ಮೇಲೆ ಬಾಜಿ
ಕುದುರೆಯ ಬಾಲವ ಹಿಡಿವ ಜನ
ಪ್ರಪಂಚ ಕಾಣದ ಮಗುವಿಗು ಬಾಜಿ ಹಾಕುವರು .
- ಎಂ.ಎ.ಶಶಿಕುಮಾರ್ – ರೈಲ್ವೆ ಉದ್ಯೋಗಿ, ಹವ್ಯಾಸಗಳು ಚುಟುಕು,ಕವನ, ನ್ಯಾನೊ ಕಥೆ, ಚಿಕ್ಕ ಕಥೆಗಳನ್ನು ಬರೆಯುವುದು,ಫೋಟೋಗ್ರಫಿ, ಮೈಸೂರು .