ಚಂದ್ರನೂರಿಗೆ ಇಸ್ರೋ ಪಯಣ ಚಂದ್ರಯಾನ -3

ನಾಲ್ಕು ವರ್ಷಗಳ ಬಳಿಕ ಜಗತ್ತು ಕಾದು ನೋಡುತ್ತಿದ್ದ ಇಸ್ರೋದ ಚಂದ್ರಯಾನ ನೌಕೆ ಇಂದು ನಭಕ್ಕೆ ಚಿಮ್ಮಲಿದೆ. ಚಂದ್ರನ ಕಕ್ಷೆ ಸೇರಲಿರುವ ಲ್ಯಾಂಡರ್‌, ಚಂದ್ರನಲ್ಲಿ ಕಾಲೂರಲಿರುವ ರೋವರ್‌ಗಳನ್ನು ಹೊತ್ತುಕೊಂಡು ಎಲ್‌ವಿಎಂ-3 ರಾಕೆಟ್‌ ಶ್ರೀಹರಿಕೋಟಾದ ಉಡಾವಣಾ ಪ್ಯಾಡ್‌ನ ಮೇಲೆ ನಿಂತಿದೆ. ನಿರೀಕ್ಷೆಯಂತೆ ಎಲ್ಲವೂ ಘಟಿಸಿದರೆ, ಇಂದು ಮಧ್ಯಾಹ್ನ ‘ರೆಡಿ 10, 9, 8, 7, 6, 5, 4, 3, 2, 1’… ಬಳಿಕ ಏನಾಗಲಿದೆ?…

“ಅಂದು ಮೇಲೆ ಚಂದಿರನಿರಲಿಲ್ಲ ಸೂರ್ಯನಿದ್ದ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಪಟಪಟಿಸುತ್ತಿತ್ತು”. ಅಷ್ಟೇ ವೇಗದಲ್ಲಿ ಅಂದು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಆಕಾಶದತ್ತ ಕೈ ತೋರಿಸುತ್ತಾ ನಿರರ್ಗಳ ಭಾಷಣ ಮಾಡುತ್ತಿದ್ದರು.
“Our country is now ready to fly high in the field of science”

”ನನಗೆ ಅತೀವ ಹೆಮ್ಮೆಯಾಗುತ್ತಿದೆ, 2008ರ ಮೊದಲೇ ನಾವು ಇಸ್ರೋ ಅಂತರಿಕ್ಷ ನೌಕೆ ಚಂದ್ರನ ಮೇಲೆ ಕಾಲಿಡಲಿದೆ. ಅದರ ಹೆಸರು “ಚಂದ್ರಯಾನ” ಎಂದು ಜಗತ್ತಿನೆದುರು ಘೋಷಿಸಿದ್ದರು.

56ನೇ ಸ್ವಾತಂತ್ರ್ಯ ದಿನದ ವೇದಿಕೆಯಲ್ಲಿ ಹೊಮ್ಮಿದ ಆ ವಾಗ್ದಾನದಂತೆ 2008ರ ಅ 22ರಂದು ‘ಚಂದ್ರಯಾನ-1’, ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿತ್ತು. ತ್ರಿವರ್ಣ ಧ್ವಜ ಬಣ್ಣದ ಚಂದ್ರನೌಕೆಯು 2008ರ ನ.8ರಂದು ಚಂದ್ರನನ್ನು ಚುಂಬಿಸಿತ್ತು. ಚಂದ್ರನಲ್ಲಿ ನೀರು ಪತ್ತೆಹಚ್ಚಿದ ಖ್ಯಾತಿಯೂ ಭಾರತದ ಇಸ್ರೋ ಆ ನೌಕೆಯ ಪಾಲಾಯಿತು. ಬಳಿಕ 2019ರ ಸೆಪ್ಟೆಂಬರ್‌ನಲ್ಲಿ ಅದೇ ವಿಶ್ವಾಸದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿದ್ದ ”ಚಂದ್ರಯಾನ-2”ರ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಸಾಧ್ಯವಾಗದೇ ಅಪ್ಪಳಿಸಿ, ವೈಫಲ್ಯ ಕಂಡಿತ್ತು.

ಫೋಟೋ ಕೃಪೆ : ಗೂಗಲ್

ಚಂದ್ರಯಾನ-೨ ರಲ್ಲಿ, ಸಾಫ್ಟ್ ಲ್ಯಾಂಡಿಂಗ್ ಮಾರ್ಗದರ್ಶನ ಸಾಫ್ಟ್‌ವೇರ್‌ನಲ್ಲಿ ಉಂಟಾದ ಕೊನೆಯ ನಿಮಿಷದ ದೋಷವು ಲ್ಯಾಂಡರ್‌ನ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನದ ವಿಫಲತೆಗೆ ಕಾರಣವಾಯಿತು, ಸಾಫ್ಟ್ ಲ್ಯಾಂಡಿಂಗ್ ಅನ್ನು ಪ್ರದರ್ಶಿಸಲು ಮತ್ತೊಂದು ಚಂದ್ರನ ಕಾರ್ಯಾಚರಣೆಯನ್ನು ಪ್ರಸ್ತಾಪಿಸಲಾಯಿತು. ಚಂದ್ರಯಾನ-೩ ಚಂದ್ರಯಾನ-೨ರ ಮಿಷನ್ ಪುನರಾವರ್ತನೆ ಆದರೆ ಚಂದ್ರಯಾನ-೨ ರಂತೆಯೇ ಲ್ಯಾಂಡರ್ ಮತ್ತು ರೋವರ್ ಅನ್ನು ಮಾತ್ರ ಒಳಗೊಂಡಿರುತ್ತದೆ. ಇದು ಕಕ್ಷೆಗಾಮಿ(ಆರ್ಬಿಟರ್) ಅನ್ನು ಹೊಂದಿರುವುದಿಲ್ಲ, ಆದರೆ ಅದರ ಪ್ರೊಪಲ್ಷನ್ ಮಾಡ್ಯೂಲ್ ಸಂವಹನ ರಿಲೇ ಉಪಗ್ರಹದಂತೆ ವರ್ತಿಸುತ್ತದೆ. ಬಾಹ್ಯಾಕಾಶ ನೌಕೆಯನ್ನು ೨೦೨೩ ರ ಮೊದಲ ತ್ರೈಮಾಸಿಕದಲ್ಲಿ ಉಡಾವಣೆ ಮಾಡಲು ಯೋಜಿಸಲಾಗಿದೆ. ಬಾಹ್ಯಾಕಾಶ ನೌಕೆಯ ಉಡಾವಣೆಗಾಗಿ ರಾಕೆಟ್ ಸಿದ್ಧವಾಗಿದೆ ಎಂದು ಘೋಷಿಸಲಾಯಿತು ಮತ್ತು ಮಾಡ್ಯೂಲ್ಗಾಗಿ ಕಾಯುತ್ತಿದೆ.

ಇಂದು ಭಾರತದ ಇಸ್ರೊ (ISRO) ಸಂಸ್ಥೆಯ ಚಂದ್ರಯಾನ ಸರಣಿಯ (moon mission) ಚಂದ್ರಯಾನ- 3 (Chandrayaan- 3) ಜುಲೈ 14ರಂದು ತನ್ನ ಯಾನವನ್ನು ಚಂದ್ರನೆಡೆಗೆ ಆರಂಭಿಸಲಿದೆ. ಇದಕ್ಕೆ ವಿಶೇಷತೆಯೂ ಇದೆ. ಇದುವರೆಗೂ ಮಾನವ ಹಾರಿಬಿಟ್ಟ ನೌಕೆಗಳಲ್ಲಿ ಯಾವುದೂ ಚಂದಿರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿರಲಿಲ್ಲ. ಚಂದ್ರಯಾನ-3 ತಿಂಗಳಿನ ದಕ್ಷಿಣ ಧ್ರುವದಲ್ಲಿ (south pole) ಹೆಜ್ಜೆಯೂರಲಿದೆ.

ಚಂದ್ರಯಾನ-೩ ರ ಲ್ಯಾಂಡರ್ ಕೇವಲ ನಾಲ್ಕು ಥ್ರೊಟಲ್-ಸಮರ್ಥ ಎಂಜಿನ್‌ಗಳನ್ನು ಹೊಂದಿರುತ್ತದೆ, ಚಂದ್ರಯಾನ-೨ ರಲ್ಲಿನ ವಿಕ್ರಮ್‌ಗಿಂತ ಭಿನ್ನವಾಗಿ ೮೦೦ ನ್ಯೂಟನ್‌ಗಳ ೫ ಎಂಜಿನ್‌ಗಳನ್ನು ಹೊಂದಿದ್ದು ಐದನೆಯದನ್ನು ಕೇಂದ್ರೀಯವಾಗಿ ಸ್ಥಿರವಾದ ಒತ್ತಡದೊಂದಿಗೆ ಅಳವಡಿಸಲಾಗಿದೆ. ಹೆಚ್ಚುವರಿಯಾಗಿ, ಚಂದ್ರಯಾನ-೩ ಲ್ಯಾಂಡರ್‌ನಲ್ಲಿ ಲೇಸರ್ ಡಾಪ್ಲರ್ ವೆಲೋಸಿಮೀಟರ್ (ಎಲ್‌ಡಿವಿ) ಅಳವಡಿಸಲಾಗಿದೆ.

ಫೋಟೋ ಕೃಪೆ : ಗೂಗಲ್

ಚಂದ್ರಯಾನದ ಆ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಲು ಈಗ 4 ವರ್ಷಗಳ ನಂತರ ಇಸ್ರೋ ‘ಚಂದ್ರಯಾನ 3’ಕ್ಕೆ ಕ್ಷಣಗಣನೆ ಆರಂಭಿಸಿದೆ. ದೈತ್ಯ ಲಾಂಚ್‌ ವೆಹಿಕಲ್‌ ಮಾರ್ಕ್ -3 (ಎಲ್‌ವಿಎಂ-3) ರಾಕೆಟ್‌ನ ಶಿರದಲ್ಲಿ ಚಂದ್ರನಲ್ಲಿ ಇಳಿಯಬೇಕಿರುವ ರೋವರ್‌ ಕುಳಿತಿದೆ. ಜುಲೈ 14ರ ಮಧ್ಯಾಹ್ನ 2.30-3.30ರ ನಡುವೆ ರಾಕೆಟ್‌ ನಭಕ್ಕೆ ಚಿಮ್ಮಲಿದೆ ಎಂದು ಇಸ್ರೋ ಹೇಳಿದೆ. ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಯಶಸ್ವಿಯಾದರೆ ಅಮೆರಿಕ, ರಷ್ಯಾ ಮತ್ತು ಚೀನಾ ನಂತರ ಭಾರತವು ನಾಲ್ಕನೇ ರಾಷ್ಟ್ರವಾಗಲಿದೆ.

ಎಲ್ಲ ಎಣಿಸಿದಂತೆಯೇ ನಡೆದರೆ ಚಂದ್ರಯಾನ-3, ಚಂದ್ರನ ದಕ್ಷಿಣ ಧ್ರುವದಲ್ಲಿ ಮಾನವ ಇಳಿಸಿದ ಮೊದಲ ನೌಕೆ (moon mission) ದಕ್ಷಿಣ ಧ್ರುವಕ್ಕೆ ಚಂದ್ರನಿಗೆ ಪ್ರಥಮ ಚುಂಬನ ಎನಿಸಲಿದೆ. ಅಮೆರಿಕದ ಅಪೋಲೋ ಸೇರಿದಂತೆ ಯಾವುದೇ ಮಾನವ ಕಾರ್ಯಾಚರಣೆಗಳು ಉಪಹಗ್ರಹದ ದಕ್ಷಿಣ ಧ್ರುವಕ್ಕೆ ಇದುವರೆಗೆ ತಲುಪಿಲ್ಲ. ಹೀಗಾಗಿ ಇದೊಂದು ಮಹತ್ವಾಕಾಂಕ್ಷೆಯ ತಾಂತ್ರಿಕ ಪರಾಕ್ರಮವೇ ಸರಿ.

ಚಂದ್ರಯಾನ-3ರ ನೌಕೆಯ ಮೂಲ ಕೆಲಸ ಚಂದಿರನಲ್ಲಿ ಇಳಿಯುವುದು (ಲ್ಯಾಂಡಿಂಗ್) ಮತ್ತು ಪರಿಶೀಲಿಸುವುದು (ರೋವಿಂಗ್). 2019ರಲ್ಲಿ ನಡೆಸಿದ ಚಂದ್ರಯಾನ-2 ಭಾಗಶಃ ಯಶಸ್ವಿಯಾಗಿತ್ತು. ಅದರಲ್ಲಿದ್ದಂತೆ ಈ ಬಾರಿ ಆರ್ಬಿಟರ್ ಇಲ್ಲ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಮತ್ತು ಹಗುರವಾಗಿ ಇಳಿಯುವುದು, ರೋವರ್ ಚಂದ್ರನ ಮೇಲೆ ಸಂಚರಿಸುವುದು, ಕೆಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಉದ್ದೇಶ.

ಫೋಟೋ ಕೃಪೆ : ಗೂಗಲ್

  • ಲ್ಯಾಂಡರ್‌ನಲ್ಲಿ ಚಂದ್ರನ ಮೇಲ್ಮೈ ಥರ್ಮೋಫಿಸಿಕಲ್‌ ಮಾದರಿ (ChaSTE) ಅಳವಡಿಸಲಾಗಿದ್ದು, ಇದು ಚಂದ್ರನ ಮೇಲ್ಮೈನ ತಾಪಮಾನವನ್ನು ಅಧ್ಯಯನಿಸಲಿದೆ. ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯ (ಪಿಆರ್‌ಎಲ್‌) ಇದನ್ನು ಸಿದ್ಧಪಡಿಸಿದೆ.
  • ಇನ್‌ಸ್ಟ್ರುಮೆಂಟ್‌ ಫಾರ್‌ ಲೂನಾರ್‌ ಸೀಸ್ಮಿಕ್‌ ಆ್ಯಕ್ಟಿವಿಟಿ (ILSA) ಚಂದ್ರನ ಮೇಲ್ಮೈನ ಭೂಕಂಪಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ಲ್ಯಾಂಡರ್‌ನಲ್ಲಿ ಅಳವಡಿಸಲಾಗಿರುವ ಲ್ಯಾಂಗ್ಮುಯಿರ್‌ ಪ್ರೋಬ್‌ ಚಂದ್ರನ ಮೇಲಿನ ಪ್ಲಾಸ್ಮಾ ಸಾಂದ್ರತೆ ಮತ್ತು ಅದರಲ್ಲಿರುವ ವ್ಯತ್ಯಾಸವನ್ನು ಗುರುತಿಸಲಿದೆ.
  • ರೋವರ್‌ನಲ್ಲಿ ಆಲ್ಫಾ ಪಾರ್ಟಿಕಲ್‌ ಎಕ್ಸ್‌ರೇ ಸ್ಪೆಕ್ಟ್ರೋಮೀಟರ್‌ (APXS) ಮತ್ತು ಲೇಸರ್‌ ಇಂಡ್ಯೂಸ್ಡ್ ಬ್ರೇಕ್ಡೌನ್‌ ಸ್ಪೆಕ್ಟ್ರೋಸ್ಕೋಪ್‌ (LIBS) ಅಳವಡಿಕೆಯಾಗಿದೆ. ಲ್ಯಾಂಡಿಂಗ್‌ ಸ್ಥಳದಲ್ಲಿನ ಖನಿಜಗಳು, ಮಣ್ಣು ಮತ್ತು ಅವುಗಳ ರಾಸಾಯನಿಕ ಮಿಶ್ರಣವನ್ನು ಅಧ್ಯಯನ ಮಾಡಲಿದೆ.
  • ಪ್ರೊಪಲ್ಷನ್‌ ಮಾಡ್ಯೂಲ್‌ ಚಂದ್ರನ ಸುತ್ತಲಿನ ಕಕ್ಷೆಯಲ್ಲಿ ಉಳಿದು, ಸಂವಹನ ರಿಲೇ ಉಪಗ್ರಹವಾಗಿ ಕಾರ್ಯನಿರ್ವಹಿಸಲಿದೆ.
  • ಚಂದ್ರನ ದಕ್ಷಿಣ ಧ್ರುವದ ಮೇಲೆ ಇಸ್ರೋಗೆ ವಿಶೇಷ ಆಸಕ್ತಿ ಉತ್ತರ ಧ್ರುವಕ್ಕಿಂತ ಹೆಚ್ಚು ನೀರು ಸಿಗುವ ಸಾಧ್ಯತೆ ಇರುವುದರಿಂದ ಭಾರತೀಯ ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಅನ್ನು ಇಳಿಸಲು ನಿರ್ಧರಿಸಿದ್ದಾರೆ.
  • ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಅಮೆರಿಕ ಕೂಡ ದಕ್ಷಿಣ ಧ್ರುವದತ್ತ ಕಣ್ಣಿಟ್ಟಿದೆ. ಅದರ ಆರ್ಟೆಮಿಸ್‌-3 ನೌಕೆ ಕೂಡ ಆ ದಿಕ್ಕಿಗೇ ಹೋಗಲಿದೆ. ಹಾಗೆ ಹೋದರೆ, ಅಮೆರಿಕ, ರಷ್ಯಾ ಮತ್ತು ಚೀನಾ ತಮ್ಮ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಸಿವೆ. ಈ ಭಾರತ ಮೈಲಿಗಲ್ಲು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಲಿದೆ.

  • ಸೌಮ್ಯ ಸನತ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW