ಚಾಕ್ಲೇಟ್ ಬಣ್ಣದ ಹಕ್ಕಿ ಹಸಿರು ಪುಕ್ಕಚುಕ್ಕೆ ಮುನಿ ಹಕ್ಕಿಯು ಮರಿ ಮಾಡುವ ಸಮಯದಲ್ಲಿ ತಲೆ, ಬೆನ್ನು, ರೆಕ್ಕೆಗಳು ಚಾಕೊಲೇಟ್ ಬಣ್ಣಕ್ಕಿರುತ್ತದೆ. ಈ ಹಕ್ಕಿಯ ಕುರಿತು ಪರಿಸರ ಪ್ರೇಮಿ ಚಿದು ಯುವ ಸಂಚಲನ ಅವರು ಒಂದು ಪುಟ್ಟ ಲೇಖನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ಹಕ್ಕಿಯ ಸುಂದರ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ, ನೋಡಿ…

ತನಗೆ ತಾನೆ ಬಾಲಂಗೋಚಿಯನ್ನು ಕಟ್ಟಿಕೊಂಡಂತೆ. ಸಹೋದ್ಯೋಗಿಯ ಕರೆ ಬಂದಿತ್ತು ಮಾತನಾಡುತ್ತಾ ಮನೆಯ ಟೆರೇಸ್ ಮೇಲೆ ಬಂದೆ. ಚಾಕ್ಲೆಟ್ ಬಣ್ಣದ ಹಕ್ಕಿ ಹಸಿರು ಪುಕ್ಕವನ್ನು ಹೊತ್ತು ನಮ್ಮ ಮನೆಯ ಪಕ್ಕದಲ್ಲಿರುವ ಖಾಲಿ ನಿವೇಶನದಿಂದ ನನ್ನ ತಲೆ ಮೇಲೆ ಹಾರಿ ಹೋಯಿತು ಸಡನ್ನಾಗಿ ತಬ್ಬಿಬ್ಬಾದೆ. ಕೂಡಲೇ ಓಡಿ ಹೋಗಿ ನನ್ನ ಕ್ಯಾಮರಾವನ್ನು ತಂದು ಅದನ್ನು ಹುಡುಕುತ್ತಾ ನಿಂತೆ. ದೊಡ್ಡಬಳ್ಳಾಪುರದ ನಗರದ ಮಧ್ಯೆ ಇರುವ ನಮ್ಮ ಮನೆಯು ಸದಾ ಮನುಷ್ಯರ ಗದ್ದಲ, ವಾಹನಗಳ ಗದ್ದಲಗಳಿಂದಲೇ ಕೂಡಿರುತ್ತದೆ ಇಂತಹ ಜಾಗದಲ್ಲಿ ಇದು ಯಾವುದು ವಿಚಿತ್ರ ಪಕ್ಷಿ ಎಂದು ಹುಡುಕತೊಡಗಿದೆ, ಹೋದ ದಾರಿಯಲ್ಲಿ ಮತ್ತೆ ಹಿಂತಿರುಗಿತು ಆ ಹಕ್ಕಿ ಆದರೆ ಹಸಿರು ಪುಕ್ಕ ಇರಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ತಿಳಿಯಿತು ಚುಕ್ಕೆ ಮುನಿಯ (ಸ್ಪಾಟೆಡ್ ಮುನಿಯ) ಎಂದು. ನಮ್ಮ ಮನೆಯ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಬೆಳೆದಿರುವ ಹುಲ್ಲನ್ನು ಗೂಡುಕಟ್ಟಲು ಹೊತ್ತೊಯ್ಯುತ್ತಿರುವುದನ್ನು ಗಮನಿಸುತ್ತಾ ಕೂತಿರುವಾಗ ಸಿಕ್ಕ ಒಂದಷ್ಟು ಫೋಟೋಗಳು.

This slideshow requires JavaScript.

ಚುಕ್ಕೆ ಮುನಿಯ ಗಳ ಬಗ್ಗೆ ತಿಳಿದುಕೊಳ್ಳುವುದಾದರೆ. ಗುಬ್ಬಚ್ಚಿ ಗಿಂತ ಕೊಂಚ ಚಿಕ್ಕದಾಗಿ ಕಾಣುವುದು ಈ ಹಕ್ಕಿ.

ಮರಿ ಮಾಡುವ ಸಮಯದಲ್ಲಿ ತಲೆ ಬೆನ್ನು ರೆಕ್ಕೆಗಳು ಚಾಕೊಲೇಟ್ ಬಣ್ಣಕ್ಕಿರುತ್ತದೆ. ಎದೆ ಮತ್ತು ಹೊಟ್ಟೆಯ ಭಾಗ ಬೆಳ್ಳಗಿದ್ದು ಅರ್ಧಚಂದ್ರ ಕಾರವಾದ ಕಪ್ಪು ಗೀರುಗಳಿರುತ್ತವೆ. ಸಾಧಾರಣವಾಗಿ ಚಿಕ್ಕ-ಚಿಕ್ಕ ಗುಂಪುಗಳಲ್ಲಿ ಇರುವ ಈ ಹಕ್ಕಿಯು ಪೈರು ಕಟಾವಿನ ಸಮಯದಲ್ಲಿ ಇನ್ನೂರು ಮುನ್ನೂರು ಹಕ್ಕಿಗಳ ದೊಡ್ಡ ಗುಂಪುಗಳಾಗಿರುವುದು. ಬೆಳೆದ ಭತ್ತದ ಪೈರನ್ನು ತಿನ್ನಲು ಬರುವುದರಿಂದ ರೈತರಿಗೆ ಇದರಿಂದ ತೊಂದರೆಯೂ ಸಾಗುತ್ತಿರುತ್ತದೆ. ಜುಲೈನಿಂದ ಅಕ್ಟೋಬರ್ ವರೆಗೆ ಹುಲ್ಲಿನ ಸಿಬಿರುನಿಂದ ಪೊದೆಗಳಲ್ಲಿ ಗೋಲಾಕಾರದ ದೊಡ್ಡ ಗೂಡು ಮಾಡುತ್ತವೆ ಪಕ್ಕದಿಂದ ಅದಕ್ಕೆ ಒಳದಾರಿ ಮಾಡಿರುತ್ತವೆ.


  • ಚಿದು ಯುವ ಸಂಚಲನ  (ಪರಿಸರವಾದಿ, ಲೇಖಕರು) ದೊಡ್ಡಬಳ್ಳಾಪುರ.

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW