ಕವಿ ರಾಜಾಭಕ್ಷಿ .ಕೆ.ಕೊಟ್ಟೂರು ಅವರ ಚೊಚ್ಚಲ ಕೃತಿ ಈ ಚಿಮಣಿ ಬುಡ್ಡಿಕವನ ಸಂಕಲನ. ಈ ಕೃತಿಯ ಬಗ್ಗೆ ಕವಿಯತ್ರಿ ರೇಷ್ಮಾ ಗುಳೇದಗುಡ್ಡಾಕರ್ ಅವರು ಓದುಗರಿಗೆ ಪರಿಚಯಿಸಿದ್ದಾರೆ. ಮುಂದೆ ಓದಿ…
ಪುಸ್ತಕ : ಚಿಮಣಿ ಬುಡ್ಡಿ(ಭೌತ ವಿಜ್ಞಾನದ ಕವನಗಳು)
ಲೇಖಕರು : ರಾಜಾಭಕ್ಷಿ .ಕೆ.ಕೊಟ್ಟೂರು
ಪ್ರಕಾಶಕರು : ಪ್ರಕೃತಿ ಅಸ್ಮ ಪ್ರಕಾಶಕರು
ಬೆಲೆ : ೧೫೦ ರೂ
ಪುಸ್ತಕ ಖರೀದಿಸಲು : 944 8877381
ಚಿಮಣಿ ಬುಡ್ಡಿಯ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿರುವ ರಾಜಾಭಕ್ಷಿ .ಕೆ ಮೈಸೂರಿನ ಸಾಲಿಗ್ರಮದ ಭೌತಶಾಸ್ತ್ರ ಉಪನ್ಯಾಸಕರು. ನಾಡಿನಾದ್ಯಂತ ನಿಮ್ಮ ಉಪನ್ಯಾಸವನ್ನು ಹಲವು ವಿದ್ಯಾರ್ಥಿಗಳು ಕೇಳಿದ್ದಾರೆ. ಭೌತಶಾಸ್ತ್ರ ದ ನಿಮ್ಮ ಅದಮ್ಯ ಒಲವು ಕೃತಿಯಾಗಿ ಸಿದ್ದವಾಗಿದೆ ! ವಿಜ್ಞಾನವನ್ನು ಕನ್ನಡಕ್ಕೆ ನೀಡಿದವರು ಜಿ.ಟಿ ನಾರಾಯಾಣರಾವ್ , ಪರಿಸರ ವಿಜ್ಞಾನದ ಕಾಳಜಿ ಅದರ
ಅವನತಿ ಕುರಿತ ಬೆಳಕು ಚೆಲ್ಲಿದವರು ಪೂರ್ಣ ಚಂದ್ರ ತೇಜಸ್ವಿ. ಇಂದಿನ ದಿನಗಳಲ್ಲಿ ವಿಜ್ಞಾನ ದ ಬರಗಳನ್ನು ನಾವು ನಾಗೇಶ್ ಹೆಗಡೆ ಅವರ ಬರಗಳಿಂದ ತಿಳಿಯುತ್ತಿದ್ದೆವೆ .

ಭೌತವನ್ನೆ ಉಂಡು ,ಉಸಿರಾಡಿದ ದ ಆ ಐನ್ಸ್ಟೈನ್ ಗೊ ಕವನದೂಂದಿಗೆ ಸಂವಾದ ನಡೆಸಲು ಅಗಿಲ್ಲ .ಪೀಟಿಲಿನೂಂದಿಗೆ ದ್ವನಿ ಯಾಗಿ ತನ್ನೊಳಗಿನ ಖಾಲಿತನವ ತಬಿಕೊಳ್ಳುತ್ತಿದ್ದ ….! ಇಂತಹ ಭೌತವಿಜ್ಞಾನ ಕವನಗಳಾಗಿ ಮೂಲ ಭೌತಶಾಸ್ತ್ರ ದ ಪರಿಚಯ ಓದುಗನಿಗೆ ನೀಡುವಂತಿವೆ. ಇತಂಹ ಕಾರ್ಯ ನಿಮ್ಮಿಂದ ಅಗಿದೆ ಮುಂದಿನ ದಿನಗಳಲ್ಲಿ ಭೌತಶಾಸ್ತ್ರ ಕುರಿತ ಸರಳ ಲೇಖನಗಳು ಸಾಗರೂಪಾದಿಯಲ್ಲಿ ಹಿರಿದು ನಿಮ್ಮಿಂದ ಜಗವ ಬೆಳಗಲಿ. ಗಣಿತ, ವಿಜ್ಞಾನ ಮಕ್ಕಳಿಗೆ ಮೊದಲು ಇಷ್ಟವಾಗಿ ಹಂತ ಹಂತವಾಗಿ ಕಬ್ಬಿಣದ ಕಡಲೆಯಾಗಿರುವದು ಒಂದು ಹೇಳುವವರು ಇಲ್ಲದೆ,(ಭೋದನೆ) ಮತ್ತೊಂದು ಅವುಗಳ ಬಗ್ಗೆ ಇರುವ ಪೂರ್ವಾಗ್ರಹ ಪೀಡಿತ ನೋಟಗಳಿಂದ (ಕಷ್ಟ ,ಅಗದು). ಇದು ಮುಂದೆ ಸರಳವಾಗಿ ವಿದ್ಯಾರ್ಥಿಗಳಿಗೆ ದೊರಕಲಿ. ವಿಜ್ಞಾನ ವೈಜ್ಞಾನಿಕವಾಗಿ ಯೇ ತಲುಪಲಿ ! ಇದು ಬಹು ಮುಖ್ಯ.
ಇಂತಹ ವಿಜ್ಞಾನ ಕಾವ್ಯದಲ್ಲಿ ಬೆಳಗಿದೆ ಕೃತಿ ಆಶಯ ಅನುರಣನ ವಾಗಲಿ ಜಗದಲ್ಲಿ ಸಾಹಿತ್ಯ ಲೋಕದಲ್ಲಿ ಬೆಳಗಲಿ. ವೃತ್ತಿ ಜೊತೆ ಪ್ರವೃತ್ತಿಯನ್ನು ಉಳಿಸಿಕೊಂಡು ತಮ್ಮ ಧಾವಂತ ದಿನಚಯಲ್ಲಿಯೂ ಕಾಯ್ದುಕೊಂಡು ಬರುವದು ಸುಲಭದ ಮಾತಲ್ಲ. ಇಂತಹದರಲ್ಲಿ “ಚಿಮಣಿ ಬುಡ್ಡಿ” ಎಂಬ ನಿಮ್ಮ ಕೂಸು ಕಾಲಿಡಲು ಸಿದ್ದವಾಗಿದೆ ! ನಿಮ್ಮ ಜೀವನೋತ್ಸಹಕ್ಕೆ ದೊಡ್ಡ ಸಲಾಂ . ಆ ಜೀವನ ಉತ್ಸಹಾದ ಚಿಲುಮೆ ಎಂದೂ ಬಾಡದೆ ಮತ್ತಷ್ಟು ಮಗದಷ್ಟು ಇಮ್ಮಿಡಿಯಾಗಲಿ.

ನಿಮ್ಮ ಸಾಹಿತ್ಯ ಪಯಣವು ಸಮೃದ್ಧವಾಗಿ, ಉತ್ಕೃಷ್ಟ ಬರಗಳಿಂದ ರಾರಾಜಿಸಲಿ. ಕೃತಿ ಬಹು ಹಗುರವಾಗಿದೆ ಎಲ್ಲಿಯಾದರೂ ಓದುಗ ತೆಗೆದುಕೊಂಡು ಹೋಗಲು ಅನುಕೂಲವಾಗಿದೆ. ಉತ್ಕೃಷ್ಟ ಬರಹ, ಗುರಾಜ್ ಕರ್ಜಗಿ ಅವರ ಅರ್ಥ ಪೂರ್ಣ ಮುನ್ನುಡಿ ಇದೆ. ಕುಂ .ವೀ ಅವರ ಬೆನ್ನುಡಿ ಇದೆ. ಈ ಪುಟ್ಟ ಕೃತಿ ಒಟ್ಟು ೭೬ ಕವನಗಳನ್ನು ಒಳಗೊಂಡಿದೆ.
ಪ್ರತಿ ಕವನಕ್ಕೂ ಅದರದ್ದೆ ಆದ ವಿವರಣೆ ಇದೆ. ಇದರಿಂದ ಕವನಗಳನ್ನು ಯಾರು ಬೇಕಾದರೂ ಓದಿ ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ. ಭೌತವಿಜ್ಞಾನವನ್ನು ಸರಳ ಕವನಗಳ ಮೂಲಕ ಹೇಳಲು ಪ್ರಯತ್ನ ಮಾಡಿರುವುದು ಸುಲಭ ಅಲ್ಲ .ನಿಮ್ಮ ಕಾರ್ಯಕ್ಕೆ ಯಶಸ್ಸು ಸಿಗಲಿ.
- ರೇಷ್ಮಾ ಗುಳೇದಗುಡ್ಡಾಕರ್ (ಲೇಖಕಿ, ಕವಯತ್ರಿ)
