ಮಂತ್ರಿವರ್ಯರು ಕಡಿಮೆ ದಿನಗಳಲ್ಲಿ ಕೋವಿಡ್ ಮುಕ್ತರಾಗಿ ಮರಳುತ್ತಾರೆ. ಅದೇ ಜನ ಸಾಮಾನ್ಯರು ಏಕೆ ಮರಳಿ ಬರವುದಿಲ್ಲ…ಸಾಕಷ್ಟು ಪ್ರಶ್ನೆಗೆ ಉತ್ತರ ಬೇಕಿದೆ…
ಒಂದು ಕಾಲದಲ್ಲಿ ನಾವೇಲ್ಲಾ ಭಾತೀಯರು ವಿದೇಶಗಳ ಸಾವಿನ ಸರಣಿ ನೋಡಿ ನಿಟ್ಟಿಸಿರು ಬಿಟ್ಟು, ನಮ್ಮ ನೆಲ, ಆಹಾರ ಪದ್ದತಿ, ನಮ್ಮ ಸಂಪ್ರದಾಯ, ಹವಾಮಾನ ಕುರಿತ ಪುಂಖಾನು ಪುಂಖವಾಗಿ ಹಾಡಿ ಹೊಗಳಿಕೊಂಡೆವು. ಆದರೆ ಅಭಿಶಾಪವೆಂಬಂತೆ ಈಗ ನಮ್ಮದೇ ಬದುಕು ತಣ್ಣಗೆ ಮಸಣ ಸೇರುತ್ತಿದೆ. ಇದಕ್ಕೆ ಕಾರಣಗಳು ಹಲವು ಹುಡುಕುತ್ತಾ ಸಾಗಿದರೆ, ಮುಗ್ದ ಜೀವಗಳ ಪ್ರಾಣ ಪಕ್ಷಿ ಸದ್ದಿಲ್ಲದೆ ಹಾರಿ ಹೋಗುತ್ತಿದೆ. ಎಲ್ಲೆಡೆ ಆಕ್ಸಿಜನ್ ಆಹಾಕಾರ, ಮತ್ತೊಂದೆಡೆ ಬೆಡ್ ಗಳ ಸಮಸ್ಯೆ , ಸಾವಿನ ಲೆಕ್ಕ ತೋರಿಸುವ ಮಾಧ್ಯಮಗಳು, ಆರೋಗ್ಯ ಕೇಂದ್ರದಲ್ಲಿನ ನೈಜ್ಯಸ್ಥಿತಿಯನ್ನು ತೆರದಿಡುತ್ತಿಲ್ಲ. ಬದುಕಿಗಿರುವ ಧಾವಂತವ ಅರಿಯುತ್ತಿಲ್ಲ.
ಜನಸಾಮಾನ್ಯರಿಗೆ ಹಲವು ನಿಯಮಗಳು ಜನಪ್ರತಿನಿಧಿಗಳಿಗೆ, ಉಳ್ಳವರಿಗೆ ಯಾವುದು ಇಲ್ಲ. ಮಂತ್ರಿಗಳಿಗೆ ಚುನಾವಣೆಗೆ ಇರುವ ಉತ್ಸಾಹ, ಕಾರ್ಯಕ್ಷಮತೆ, ದಕ್ಷತೆ ಆಡಳಿತ ನೀಡುವಲ್ಲಿ ಕಾಣುತ್ತಿಲ್ಲ.
ಹೊಣೆಗೆಡಿತನ ಜನರಿಂದ ಮಾತ್ರವಲ್ಲ, ಅಧಿಕಾರಿಗಳು- ಜನಪ್ರತಿನಿಧಿಗಳಲ್ಲೂ ಹಾಸುಹೊಕ್ಕಾಗಿದೆ. ನೊಂದವರ ನೋವು ಮುಗಿಲಗಲ ವ್ಯಾಪಿಸುತ್ತಿದೆ. ಎಂದೋ, ಯಾವಾಗಲೂ ಕೇಳುತ್ತಿದ್ದ ಸಾವಿನ ಸುದ್ದಿಈಗ ನಿತ್ಯದ ಜಪವಾಗಿದೆ. ಓಣಿ, ನಗರ, ಅಂತರ್ಜಾಲ ತಾಣ ಎಲ್ಲವೂ ಸಾವಿನ ಮನೆಯಾಗಿ ನಮ್ಮ ಬೇಜವಾಬ್ದಾರಿಯ ಅಣಕಿಸುತ್ತಿದೆ. ಯುವಕರು, ಹಿರಿಯರು. ಕಿರಿಯರು ಎನ್ನದೆ ಎಲ್ಲರೂ ಸಾವಿನ ಮನೆಯತ್ತ ಸಾಗುತ್ತಿದ್ದಾರೆ .
ಮಂತ್ರಿವರ್ಯರು ಕಡಿಮೆ ದಿನಗಳಲ್ಲಿ ಕೋವಿಡ್ ಮುಕ್ತರಾಗಿ ಮರಳುತ್ತಾರೆ. ಜನ ಸಾಮಾನ್ಯರು ಹಾಸಿಗೆ, ಆಕ್ಸಿಜನ್ ಸಿಗದೆ ಸಾಯುತ್ತಿದ್ದಾರೆ. ಓಟು ಕೇಳುವಾಗ ಮನೆಯ ಮುಂದೆ ಬಂದು ಕಾಲಿಗೆ ಬಿದ್ದು ತಲೆ ಲೆಕ್ಕ ಹಾಕಿ ಹೋಗುವ ಸಚಿವರುಗಳು ಚಿಕಿತ್ಸೆ ನೀಡಲು ಜನರ ಲೆಕ್ಕ ಯಾಕೆ ಹಾಕುವುದಿಲ್ಲ.

ಫೋಟೋ ಕೃಪೆ: Scroll.in
ಲಸಿಕೆ ಇಲ್ಲ, ಲಸಿಕೆ ಸಾಕಾಗುವುದಿಲ್ಲ ಎಂಬ ಸುದ್ದಿ ರಾಶಿ ರಾಶಿಯಾಗಿ ಪತ್ರಿಕೆ, ಮಾಧ್ಯಮದಲ್ಲಿ ಬಿತ್ತರವಾದರೂ ಯಾರಿಗೂ ಇರದ ಕಡೆ ಗಮನ ಹರಿಯಲಿಲ್ಲ. ಈಗಿನ ಸ್ಥಿತಿಯ ವಾಸ್ತವತೆಯೇ ಅರಿವಿಲ್ಲದೆ ಜನ ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಲಸಿಕೆ, ಚಿಕಿತ್ಸೆಗಳಿಗಿಂತ ಪ್ರಸ್ತುತ ಭಯ ಮುಕ್ತ ವಾತಾವರಣ ಎಲ್ಲರಿಗೂ ಅಗತ್ಯವಾಗಿದೆ …! ಯಾವುದು ಸತ್ಯ? ಯಾವುದು ಮಿಥ್ಯ? ಎಂಬ ಗೊಂದಲದಲ್ಲಿ ಜನ ಕೋಟಿ ಒದ್ದಾಡುತ್ತಿದೆ ..
ದೇಶಾದ್ಯಂತ ಕೊರೂನಾ ಹಾವಳಿಯಿಂದ ಜನತೆ ತತ್ತರಿಸಿದೆ. ಲಾಕ್ಡೌನ್ ಗಳಿಂದ ಒಂದೆಡೆ ಸಹಜ ಜೀವನಕ್ಕೆ ಸಂಕಷ್ಟವಾದರೆ, ಇದಕ್ಕೆ ಪೂರಕವಂತೆ ಆಮ್ಲಜನಕ ದ ಕೊರತೆ , ಹಾಸಿಗೆಯ ಅಭಾವದಿಂದ ಜನಮಾನಸ ಬಸವಳಿದು ಮಸಣ ಸೇರುತ್ತಿದೆ. ಕೊರೋನಾ ಸಮಸ್ಯೆಗಳು ಒಂದಲ್ಲ… ಎರಡಲ್ಲ… ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಹೀಗಿರುವಾಗ ಮೆಡಿಸಿನ್, ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್ಗಳು, ಬಿ.ಪಿ, ಶುಗರ್ ಮಾತ್ರೆಗಳು ಜ್ವರದ ಮಾತ್ರೆಗಳ ದರ ಗಗನಕ್ಕೆ ಏರಿದೆ?. ಒಂದು ಕಾಲದಲ್ಲಿ ಕೇಳುವವರು ಇಲ್ಲದ ವಸ್ತುಗಳು ಇಂದು ಮರಿಚಿಕೆಯಾಗಿ ದುಬಾರಿ ದುನಿಯಾ ಸೃಷ್ಟಿಸಿವೆ. ಇದಕ್ಕೆ ಹೊಣೆಯಾರು?.
ಸಾಮಾನ್ಯ ಜನರ ಬದುಕಿಗೆ ಅವಕಾಶ ಇಲ್ಲವೆ?. ಕೊರೂನಾ ಹೆಸರಲ್ಲಿ ಹಲವು ದಂಧೆ ಸದ್ದಿಲ್ಲದೆ ಸಾಗಿವೆ. ಅಂಗಡಿಯವರನ್ನು ಕೇಳಿದರೆ ೬೦೦ ರೂ. ಇದ್ದ ಆಕ್ಸಿಮಿಟರ್ ಇಂದು ಎರಡು ಸಾವಿರ ಆಗಿದೆ. ಇದನ್ನು ಯಾರು ಕೇಳುತ್ತಾರೆ?… ಇಗ ಲಭ್ಯವು ಇಲ್ಲ. ಎಲ್ಲಾ ಕೊರೊನಾ ಮಹಿಮೆ ಎನ್ನುತ್ತಾರೆ?. ಸಂಬಂಧಪಟ್ಟ ಅಧಿಕಾರಿ, ಮಂತ್ರಿವರ್ಯರು ಇವುಗಳತ್ತ ಗಮನ ಹರಿಸಿ ಜನರ ಬವಣೆ ನೀಗಿಸ ಬೇಕಿದೆ.
ಕೆಲಸವಿಲ್ಲ, ಆದಾಯ ಇಲ್ಲದ ಜೀವನ ಬದುಕಲು ಹೇಗೆ ಸಾಧ್ಯ? .
ಈಗ ಇದ್ದವರು ಇನ್ನೂ ಆರು ತಾಸಿಗೆ, ಒಂದು ಗಂಟೆಗೆ ಹೆಣವಾಗುತ್ತಿದ್ದಾರೆ. ಈ ಮಧ್ಯ ಬ್ಲಾಕ್, ವೈಟ್ ಫಂಗಸ್ ಗಾಯದ ಮೇಲೆ ಬರೆ ಎಳೆದಂತೆ ಒಕ್ಕರಿಸಿದೆ. ಬದುಕಿಗಾಗಿ ಯುದ್ಧ ಮಾಡುವಂತೆ ಮಾಡಿದೆ. ಇದು ಜನಸಾಮಾನ್ಯರ ಬದುಕನ್ನು ಬರ್ಬರ ಮಾಡಿದೆ . ಇಲ್ಲಿ ಎಲ್ಲದಕ್ಕೂ ಕಷ್ಟ ಪಡಬೇಕು , ಹನಿ ನೀರಿಗೂ ಒದ್ದಾಡಿ ಎಗಬೇಕು ಇಂತಹ ಸಮಯದಲ್ಲಿ ಮಧ್ಯಮ ,ಬಡ ವರ್ಗದ ಜನರಿರುವಾಗ ಉಸಿರಾಡುವ ಗಾಳಿಗೂ ಈಗ ಬೆಚ್ಚಿಬೀಳುವಂತಾಗಿದೆ .
“ಸಾವಿಲ್ಲದ ಮನೆಯ ಸಾಸಿವೆ ” ತಾರವ್ವ ಎಂಬ ಬುದ್ದ ಗುರುವಿನ ಮಾತು ಇಂದು ಎಡಬಿಡದೆ ಕಾಡುತ್ತಿದೆ . ಸಾವಿನ ಪರ್ವ ನಿರಂತರವಾಗಿದೆ . ಎರಡನೇ, ಮೂರನೇ ಅಲೆಗಳ ಸಂಖ್ಯೆ ಹೆಚ್ಚುತ್ತಾ ಹೊಗುತ್ತಿದೆ ಮಾಧ್ಯಮದಲ್ಲಿ ಪತ್ರಿಕೆಗಳಲ್ಲಿ ….!! ಗುಣಮುಖರಾದವರ ಸಹಜ ಜೀವನಕ್ಕೆ ಮರಳಿದವರ ಸುಳಿವು ಎಲ್ಲಿಯೂ ಇಲ್ಲ .?
ನಮ್ಮ ದೇಶ ಹಲವು ಸಂಕ್ರಾಮಿಕ ರೋಗಗಳನ್ನು ಕಂಡಿದೆ ಇತಿಹಾಸ ಪುಟಗಳನ್ನು ತಿರುವಿದರೆ ಸಾಕಷ್ಟು ಮಾಹಿತಿ ಒದಗಿಸುತ್ತವೆ ಈ ಸಾಂಕ್ರಾಮಿಕ ರೋಗ ಕುರಿತು. ಆದರೆ ಈ ಕರೋನಾ ಸುದ್ದಿ ಮಾತ್ರ ಎಲ್ಲಾ ರೋಗಗಳಿಗಿಂತ ಭಿನ್ನವಾಗಿ ಕಿವಿಗಳಿಗೆ ಬಡಿಯುತ್ತಿದೆ . ಇಷ್ಟು ತಂತ್ರಜ್ಞಾನ, ವಿಜ್ಞಾನ ಮುಂದುವರೆದರೂ ನಾವು ಭಯಮುಕ್ತ ವಾತಾವರಣ ಹೊಂದಲು ಸಾದ್ಯವಾಗುತ್ತಿಲ್ಲ .!!!???
ಸಿಡುಬು, ಕಾಲರಾಗಳು ಸಹ ಒಂದುಕಾಲದಲ್ಲಿ ಸವಾಲಾಗಿದ್ದವು ಮನುಜ ಕುಲವ ಕಾಡಿದವು ಆದರೆ ಕರೋನಾ ಇದಕ್ಕಿಂತಲು ಭೀಕರವಾದ ಸ್ಥಿತಿಯನ್ನು ತಂದೊಡ್ಡಿದೆ .
ಆಂತರಿಕ ಸಂಯಮವನ್ನು ಈ ಕರೋನಾ ಒರೆಹಚ್ಚಿ ನೋಡುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ ಪ್ರತಿ ಮನೆ-ಮನಗಳಲ್ಲಿ ಇದು ಸಾಮಾಜಿಕ ವಿರಬಹುದು,ವೈಯಕ್ತಿಕವಿರಬಹುದು ಎಲ್ಲಾ ಆಯಾಮಗಳಿಂದಲು ಸಂಮಯಮದ ಪರೀಕ್ಷೆ ನಡೆದಿದೆ. ಉಸಿರು ಕಟ್ಟುವ ವಾತಾವರಣ ಒಂದೆಡೆ ,ಉಸಿರೆ ಭಾರವಾದ ವರ್ತಮಾನ ಮತ್ತೊಂದೆಡೆ. “ಇನ್ನೇನು? ಮುಂದೇನು ? ಗತಿ ಎಂದು ಬೆದರದಿರು
ಕಣ್ಣಿಗೆಟುಕದೆ ಸಾಗುತಿಹುದು ದೈವದಾಸಂಚು ತಣ್ಣಗಿರಿಸಾತ್ಮವನು ಮಂಕುತ್ತಿಮ್ಮ ” ಎಂಬ ಕಗ್ಗದ ಹೊನ್ನ ನುಡಿಯೇ ನಮ್ಮಲ್ಲರಿಗೂ ದಾರಿದೀಪವಾಗುತ್ತಿದೆ.
- ರೇಶ್ಮಾಗುಳೇದಗುಡ್ಡಾಕರ್