‘ವೈದ್ಯ ದೇವರು’ ಕವನ – ಚನ್ನಕೇಶವ ಜಿ ಲಾಳನಕಟ್ಟೆ



ವೈದ್ಯರ ದಿನದಂದು ಖ್ಯಾತ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಒಂದು ಸುಂದರ ಕವನ ವೈದ್ಯರಿಗಾಗಿ, ‘ವೈದ್ಯೋ ನಾರಾಯಣೋ ಹರಿಃ’ ಹೇಳುತ್ತಾ ವೈದ್ಯರಿಗೆಲ್ಲರಿಗೂ ಶುಭಾಶಯಗಳು…

ಜಾವವಾವುದಾದರೇನು
ಜೀವವೆರೆವ ವೈದ್ಯರು
ಭಾವದಿಂದ ಆಸೆಯಿಳಿಸಿ
ನೋವನೀಗೊ ದೇವರು

ದಣಿವರಿಯದೆ ಹಸಿವರಿಯದೆ
ಪ್ರತಿ ದಿನವು ದುಡಿವರು
ಇವರೊಳಗಿಹ ನಾರಯಣಾ
ಧನವಂತ್ರಿ ರೂಪಿಯು

ಬಡವನೆನದೆ ಉಪಚರಿಸುವ
ಸತ್ಯ ನಿತ್ಯ ಸೇವೆಯು
ಜಗದೊಳಗಡೆ ನಗುಮೊಗದಲೆ
ಉಪಚರಿಸುವ ರೀತಿಯು

ಹಗಲಾಗಲಿ ಇರುಳಾಡಲಿ
ಸೇವೆಗೆಂದೆ ತುಡಿವರು
ಜೀವವುಳಿಸಲ್ಹೆಣಗಾಡಿ
ಹೃದಯದೊಳಗೆ ಮಿಡಿವರು

ಮಹಾ ವ್ಯಾಧಿ ಇಳೆಗಿಳಿದರು
ಹೆದರದಂತ ಯೋಧರು
ಶಕ್ತಿಯಿಂದ ಯುಕ್ತಿಯಿಂದ
ಮಣಿಸಿದಂಥ ವೈದ್ಯರು.


  • ಚನ್ನಕೇಶವ ಜಿ ಲಾಳನಕಟ್ಟೆ(ಕವಿಗಳು, ಲೇಖಕರು) ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading