ಸತ್ತ ಮೇಲೆ ನಾ ಯಾರು? – ಪದ್ಮಶ್ರೀ ಗೋವಿಂದರಾಜ್



‘ಆ ದಿನವ ಕಲ್ಪಿಸಿಕೊಳ್ಳುವೆ, ಸತ್ತ ಮೇಲೆ ನಾ ಯಾರು???’…. ಪದ್ಮಶ್ರೀ ಗೋವಿಂದರಾಜ್ ಅವರು ಬರೆದ ಸುಂದರ ಕವನಗಳು, ಮುಂದೆ ಓದಿ…

ಪ್ರತಿ ಸಾರಿ ಸಾವ ಹತ್ತಿರದಿಂದ ನೋಡಿದಾಗಲ್ಲೆಲ್ಲ
ನಾ ಸತ್ತು ಆ ಕ್ಷಣವ,
ಆ ದಿನವ ಕಲ್ಪಿಸಿಕೊಳ್ಳುವೆ….
ಸತ್ತ ಮೇಲೆ ನಾ ಯಾರು??

ಹೆಸರು ಹೆಣವಾಗಿ ದೇಹ ಮರಗಟ್ಟಿ
ಹೆಪ್ಪು ಗಟ್ಟಿದ ರಕ್ತ ಸಂಚಾರವಿಲ್ಲದೆ ನಿಲ್ಲುವುದು …
ರಕ್ತ ಸಂಬಂಧಿಗಳು ಕೆಲವರು
ಸ್ನೇಹ ಸಂಬಂಧ ಉಳಿದವರವು
ಅದೆಷ್ಟು ಅತ್ತಾರು???

ಅದೇಕೆ ಅತ್ತಾರು??
ಮನೆಯಲ್ಲಿ ಮಕ್ಕಳು ಸಂಸಾರ ಅವರವರದೇ ಚಿಂತೆ ..
ನಾ ಕೂಡ ಹೊರತಲ್ಲ….
ಇತ್ತ ಇಟ್ಟ ದೇಹ ಚಟ್ಟ ಸೇರಿ ಚಿತೆಯಲಿ ಉರಿಯುವುದೇ ತಡ
ತಲೆಗೊಂದಿಷ್ಟು ನೀರು.
ಉಟ್ಟ ಬಟ್ಟೆ ಜಾಲಿಸಿ
ಛೆ ಪಾಪ ಬಿಡು ನೊಂದಿದ್ದಳು
ಇನ್ನಾದರೂ ನೆಮ್ಮದಿ ಕಾಣಲಿ ಎಂದು ಲೊಚ ಗುಟ್ಟಿ ಮರೆವರು ..
ಇಷ್ಟೇ ನೋಡು ಬದುಕಿರುವ ತನಕ

ನನ್ನ ಹೆಸರು
ಅಕ್ಕ ಅಮ್ಮ ಮಗಳು ತಂಗಿ ಸತಿ ಸಖಿ…
ಉಸಿರು ಬಿಟ್ಟ ಕ್ಷಣವೇ ನಾ ಸತ್ತ ಸುದ್ದಿ…
ಹೆಣ ನೋಡಲು ಬರುವ ನನ್ನವರು ಕಂಗಳಲಿ ನೋವು ಕಂಬನಿ ತುಂಬಿ…
ನನ್ನವರು ತೂಗು ಹಾಕುವರು ಪಟದಲಿ
ಉಳಿದವರ ಮನದಲಿ ಆಗಾಗ ನಿಟ್ಟುಸಿರ ನೆನಪು…
ನಾ!!!
ಇಲ್ಲದೇ ಇದ್ದಾಗ……


  • ಪದ್ಮಶ್ರೀ ಗೋವಿಂದರಾಜ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading