ಬೆಲೆ ಬಂದಾಗ ಆರಾಧಿಸಿ, ಬೆಲೆ ಕುಸಿದಾಗ ಕಾಲಿನಲ್ಲಿ ಹಾಕಿ ತುಳಿದರೆ ರೈತರಿಗೆ ಅವಮಾನ ಮಾಡಿದ ಹಾಗೆ, ತಿನ್ನುವ ಆಹಾರಕ್ಕೆ ಬೆಲೆ ಕೊಡೋಣ, ತಪ್ಪದೆ ಮುಂದೆ ಓದಿ…
ಬೆಲೆ ಇದ್ದಾಗ ಮಾತ್ರ ಎಲ್ಲರೂ ಗೌರವ ನೀಡುವುದು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಈ ಮಾತು ಟೊಮ್ಯಾಟೊ ಹಣ್ಣಿಗೆ ಮಾತ್ರ ಸೀಮಿತವಲ್ಲ, ಮನುಷ್ಯನಿಗೂ ಅನ್ವಯವಾಗುತ್ತದೆ.
ಮಾರ್ಕೆಟ್ ನಲ್ಲಿ ಈ ಹಣ್ಣಿಗೆ ಬೆಲೆ ಬಂದಾಗ ಇದರ ವೈಭವ ನೋಡಬೇಕು, ಅದೇ ಇದರ ಬೆಲೆ ತಗ್ಗಿದಾಗ ಸಸ್ತಾ ಆದಾಗ ಕೇಳುವವರು ಇಲ್ಲದೆ ಎಲ್ಲೆಂದರಲ್ಲಿ ಚೆಲ್ಲಿಹೋಗುವ ನಾವು ಬೆಳದ ಭೂಮಿತಾಯಿಗೆ ಆರೈಕೆ ಮಾಡಿದ ರೈತಪ್ರಭುವಿಗೆ ವ್ಯಾಪಾರಮಾಡುವ ವ್ಯಾಪರಿಗಳಿಗೆ ಅವಮಾನವಾದಂತೆ ಸರಿ.
ಈ ಜಗತ್ತು ಇಷ್ಟೇ ನೋಡಿ ಸಸ್ತಾ ಆದರೆ ಹಣದ ಗೌರವ ಕಳೆದುಕೊಂಡರೆ ಮೌಲ್ಯ ಕುಸಿದರೆ ಇದೇ ಪುಟ್ ಪಾತ್ ಪಾಡು ಹಾಡು ನಾವು ಉಣ್ಣುವ ಆಹಾರ ಅದು ಪ್ರಸಾದ ಹೀಗಾಗಿ ಯಾವುದೇ ತರಕಾರಿ ವಸ್ತುಗಳ ಬೆಲೆ ಕಡಿಮೆಯಾದರೆ ಈ ರೀತಿ ಚೆಲ್ಲುವ ಬದಲಾಗಿ ಇವುಗಳನ್ನು ಜೋಪಾನವಾಗಿ ಸಂರಕ್ಷಸಿ ಇಟ್ಟರೆ ಅವಶ್ಯಕತೆ ಇದ್ದವರು ಬಳಸಿಕೊಳ್ಳಬಹುದು.
ಉಚಿತ ಪ್ರಸಾದ ನಿಲಯಗಳಿಗಾಗಲಿ, ಹಾಸ್ಟೇಲ್ ಗಳಿಗಾಗಲಿ, ಶಾಲಾ ಬಿಸಿಯೂಟಕ್ಕಾಗಲಿ ಬಳಸಿಕೊಳ್ಳುಬಹುದಾಗಿದೆ. ಉಚಿತ ಸಾಮಾಜಿಕ ಕಾರ್ಯಗಳಿಗೆ ಬಳಸಬಹುದಲ್ಲವೆ
ಬೇಕಾಬಿಟ್ಟಿ ಚೆಲ್ಲಿದರೆ ಯಾರು ತಾನೆ ತೆಗೆದುಕೊಂಡು ಉಪಯೋಗಿಸುವರು ?.
ಕೆಲ ಜನರಿಗೆ ಎಷ್ಟೇ ಸಸ್ತಾ ಆದರೂ ಕೊಂಡುಕೊಳ್ಳವಲ್ಲಿ ಆರ್ಥಿಕವಾಗಿ ಅಶಕ್ತರಾಗಿರಬಹದು. ಎಲ್ಲರೂ ಎಲ್ಲ ರೀತಿ ಸಬಲರಾಗಿರುವುದಿಲ್ಲ. ಹೀಗಾಗಿ ವ್ಯಾಪಾರಸ್ಥರು ಇದಕ್ಕೆ ಸೂಕ್ತ ಸ್ಥಳಾವಕಾಶ ಕಲ್ಪಸಿ ಸರಿಯಾಗಿ ಸದುಪಯೋಗ ಮಾಡಿಸುವ ಹೊಣೆಗಾರಿಕೆ ತಮ್ನದು ಅಲ್ಲವೆ ?.
ಬೇಡವಾಗಿದ್ದರೆ ಒಂದು ಜಾಗ ಮಾಡಿ ಅದರಲ್ಲಿ ಇಡಿ ಅದು ಯಾರಿಗಾದರೂ ಉಪಯೋಗ ಅಗಬಹುದು ಈ ನಿಟ್ಟಿನಲ್ಲಿ ಸದಾ ಸಮಾಜಮುಖಿ ಸತ್ಕಾರ್ಯದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಸಂಘ ಸಂಸ್ಥೆಗಳು ಸಮಾಜ ಸೇವಕರು ಇನ್ನರ್ ವೀಲ್ ಕ್ಲಬ್ ಏನಾದರೂ ಮಾಡಲು ಅಗುತ್ತದೆಯೋ ನೋಡಿ.
ರೈತರ ಶ್ರಮ ಗೌರವಿಸೋಣ .
- ನಟರಾಜ್ ಸೋನಾರ್