ಡಾ. ಅರ್ಜುನ ಎಂ ಜಿ ಅವರು ವೃತ್ತಿಯಲ್ಲಿ ವೈದ್ಯರಾದರೂ ಬರವಣಿಗೆಯನ್ನು ಬಿಟ್ಟಿಲ್ಲ, ‘ತೋಚಿದ್ದು -ಗೀಚಿದ್ದು’ ಶೀರ್ಷಿಕೆಯಡಿಯಲ್ಲಿ ಸಾಕಷ್ಟು ಕವನಗಳನ್ನು ರಚಿಸಿದ್ದಾರೆ.ಅವುಗಳಿಂದ ಆಯ್ದ ಕವನಗಳು ಓದುಗರಿಗಾಗಿ, ಮುಂದೆ ಓದಿ…
ಇಂದು ಇಲ್ಲಿ , ನಾಳೆ ಎಲ್ಲೋ
ಆಸೆ, ಸಂದರ್ಭಗಳಿಗೆ ಸಿಲುಕಿಸಿದರೆ
ಸಂದರ್ಭಗಳು ಬದುಕನ್ನು ತೋರಿಸುತ್ತವೆ
ಆಸೆ – ಸಂದರ್ಭಗಳಿಗೆ ಅತಿಯಾಗಿ ಒಳಗಾಗದೆ
ನಿಜ ಬದುಕನ್ನು ಜೀವಿಸುತ್ತಾ
ಸಾರ್ಥಕ ಬದಕನ್ನು ಕಾಣೋ- #ಮಹಾದೇವಿಸುತಾರ್ಜುನ ||
***
ಜೀವನವೊಂದು ದೊಡ್ಡ ನಾಟ್ಯರಂಗ,
ಇಲ್ಲಿ ಖಳನಟನೂ ನೀನೇ, ನಾಯಕನಟನೂ ನೀನೇ. ಇಲ್ಲಿ ಅರಿತು ನಟಿಸಿದರೆ ಆರು ದಿನ
ಮರೆತು ನಟಿಸಿದರೆ ಮೂರೇ ದಿನ. ಅದಕ್ಕಾಗಿ
ಎಚ್ಚೆತ್ತು ನಟಿಸೋ – ಮಹಾದೇವಿಸುತಾರ್ಜುನ ||
***
ಶತ್ರುವಿನ ಸಂಧಿ
ಪ್ರೇಮಿಯ ಬಂಧಿ
ಸಂಕೋಲೆಗಳ ಸಂಬಂಧಿ
ಈ ಮೂವರ ಮಧ್ಯೆ ಮತಿಸಿ ಹೋಗುವುದಕ್ಕಿಂತ ಮಧ್ಯಮನಾಗಿರುವುದೇ ಲೇಸು ನೋಡಾ – ಮಹಾದೇವಿಸುತಾರ್ಜುನ ||
- ಡಾ. ಅರ್ಜುನ ಎಂ ಜಿ (ವೃತ್ತಿಯಲ್ಲಿ ವೈದ್ಯರು, ಕವಿಗಳು) ಮಿರಜ್
