ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ದಾರಿ ದೀಪವಾಗಬೇಕೇ ವಿನಃಹ ಮಾರಕವಾಗಬಾರದು. ಇದರ ಬಗ್ಗೆ ಲೇಖಕ ಪ್ರೊ.ರೂಪೇಶ್ ಅವರು ತಮ್ಮ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ಮುಂದೆ ಓದಿ …
ಮಕ್ಕಳು ಕಲಿಯಬೇಕಾದ ಅತ್ಯಂತ ದೊಡ್ಡ ವಿದ್ಯೆ ಸಿಗುವುದು ಅಜ್ಜ, ಅಜ್ಜಿ,ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ,ತಂಗಿ, ಅಣ್ಣ, ತಂದೆ, ತಾಯಿ ಎಂಬ ಸಮಾಜವೆಂಬ ಪ್ರಾಯೋಗಿಕ ಮನೆಯಿಂದ. ಮನೆಯೇ ಸಾಂಸ್ಕೃತಿಕ ಪಾಠ ಶಾಲೆ. ಮನೆಯಲ್ಲಿರುವ ಕುಟುಂಬದೊಂದಿಗೆ ಬೆರೆಯುವ ಅವಕಾಶ ಇದ್ದರೆ ಅದು ಉತ್ತಮ ಶಿಕ್ಷಣ.
ಇಂದು ಅತ್ಯಂತ ಹೆಚ್ಚು ಸಿಲೆಬಸ್. ಅದನ್ನು ಮುಗಿಸಲು special class ತೆಗೆದುಕೊಳ್ಳುವ ಅಧ್ಯಾಪಕರು ಟ್ಯೂಷನ್ ಮುಂತಾದ ನಿರಂತರ ಯೋಜಿತ ಭಾಗವಹಿಸುವಿಕೆಯಿಂದ ವಿದ್ಯಾರ್ಥಿಗಳಿಗೆ ತಂದೆ ತಾಯಿಯೊಂದಿಗೆ ಕುಟುಂಬದೊಂದಿಗೆ ಬೆರೆಯಲು ಕಷ್ಟವಾಗಿದೆ. ಇಂತಹಾ ವಿದ್ಯಾರ್ಥಿಗಳಿಗೆ ಮುಂದೊಂದು ದಿನ ತನ್ನ ಹೆತ್ತವರನ್ನು, ಕುಟುಂಬದವರನ್ನು ಕಾಣಲು ನ್ಯಾಯಾಲಯಕ್ಕೆ ಮೊರೆ ಹೋಗಬೇಕಾದ ದಿನ ಬರಬಹುದು.
ಮುಂಬರುವ ಹೊಸಾ ಶಿಕ್ಷಣ ನೀತಿಯೊಳಗೆ ನೋಡಿದರೆ,
ಜೀವನ ತುಂಬಾ ಚಿಕ್ಕದು, ೪ ನೇ ವಯಸ್ಸಿಗೇ ಆಂಗ್ಲ ಸಂಸ್ಕೃತಿಯ Ukg, Lkg ಗಳು ನಮಗೆ ಬೇಕೇ?…
ಆ ಇಳಿಯ ವಯಸ್ಸಿನಿಂದ ಗೋಡೆಗಳ ಮಧ್ಯೆ ವಿದ್ಯಾಭ್ಯಾಸ ಎಂಬ ಹೆಸರಲ್ಲಿ ಸಿಗುವ ಕಾರಾಗೃಹ ಎಷ್ಟು ಸರಿ?…
ಫೋಟೋ ಕೃಪೆ : Youtube
ಒಂದು ಪಕ್ಷಿ ಕೂಡಾ, ತನ್ನ ಮರಿ –
ಆಹಾರ ಯಾವುದು?
ಹಾರುವ ರೀತಿ ಏನು – ಎಂದು ಅರಿವು ಪಡೆದುದ್ದು ಖಚಿತವಾದ ಕೂಡಲೇ , ತಾಯಿ ತನ್ನ ಮರಿಯನ್ನು ದೂರ ಓಡಾಡಲು ಅನುವದಿಸುವುದು. ಆ ಸಂದರ್ಭದಲ್ಲಿ ಮತ್ತೊಂದು ಹಕ್ಕಿಯನ್ನು ಕಿಂಚಿತ್ ಅರ್ಥಮಾಡುವ ತಾಕತ್ತು ಅದಕ್ಕಿರುತ್ತದೆ.
ನಾಲ್ಕು ವಯಸ್ಸಿನ ಮಗು ಅಂಬೆಗಾಲಿನಿಂದ ಸ್ವಾತಂತ್ರ್ಯ ಪಡೆದು ಅದರ ಅಚ್ಚು ಮೊಣಗಾಲಿನಿಂದ ಹೋಗುವ ಮೊದಲೇ ಕಾರಾಗೃಹ ಎಂಬ ಶಾಲೆ ಅಲ್ಲಿ ಸಿಗುವ ಆಹಾರ, ಒಡನಾಟ… ಸರಿಯಾಗಿರಲೆಂದು ಆಶಿಸೋಣ.
ಇನ್ನು ಸ್ನಾತಕೋತ್ತರ ಪದವಿ ಪಡೆಯುವಾಗ ಅವನ/ಳ ವಯಸ್ಸು, ಕೆಲಸದ ಹುಡುಕಾಟ, ನಂತರ ಮದುವೆ , ಪ್ರಕೃತಿಯ ಕರ್ತವ್ಯ ಇದೆಲ್ಲಾ ಹರೆಯ ಕಾಯದ ಕ್ರೀಯೆಗಳಾಗುತ್ತದೆ.
ನಮ್ಮ ಭಾರತೀಯ ಆಹಾರ ಪದ್ದತಿ ಬಹಳಾ ನೈಸರ್ಗಿಕವಾಗಿತ್ತು. ಆದರೆ ತೊಂಬತ್ತರ ದಶಕಗಳ ನಂತರ ಜಾಗತೀಕರಣದಿಂದ, ಪ್ರಪಂಚದಲ್ಲಿ ಯಾರಿಗೂ ಬೇಡದ , ವಂಶಾಭಿವೃದ್ದಿಗೆ ಪೂರಕವಲ್ಲದ ರಾಸಾಯನ ಮಿಶ್ರಿತ ಆಹಾರ , ಬಿಳಿ ದ್ರವ್ಯ( white drug- ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನುವ ವ್ಯಸನ/ adict) ಭರಿತ ಆಹಾರ, ಭಾರತೀಯನ ದೇಹವನ್ನು ಕ್ಷೀಣಿಸತೊಡಗಿತು. ಇಂದು ನಿಮಗೆ ಗೊತ್ತಿರುವ ಎಷ್ಟೋ ನವ- ದಂಪತಿಗಳು ಮಕ್ಕಳಿಲ್ಲ ಎಂದು ಚಡಪಡಿಸುವುದು ನೀವು ಕಾಣುತ್ತಿದ್ದೀರಿ. ಹಿಂದೆ ಇದು ಭಾರತದಲ್ಲಿ ಶೇಕಡಾ ೦.೧೭ ಇತ್ತು. ಇಂದು (೨೦೧೨) ೧೩.೪೫ % ತಲುಪಿದೆ.(೨೦೧೯ ಸರ್ವೇ ಸಿಕ್ಕಿಲ್ಲ)
ಹರೆಯ ಜಾಸ್ತಿಯಾಗುವುದರ ಜೊತೆ ಜೊತೆಗೆ ಇಂತಹಾ ಆಹಾರ ಸೇವನೆಯಿಂದ ವಂಶಾಭಿವೃದ್ಧಿ ಕುಂಠಿತವಾಗುತ್ತದೆ ಎಂದು ಅಖಿಲ ಭಾರತ ವಿಜ್ಞಾನ ಪರಿಷತ್ತಿನ ವಿಜ್ಞಾನಿಯೊಬ್ಬರು ಹೇಳಿದ್ದರು. ಆದರೆ ದೇಶದ ನಾಡಿ ಇರುವುದು
ಆಹಾರ
ವಿದ್ಯಾಭ್ಯಾಸ
ಆರೋಗ್ಯ
ಫೋಟೋ ಕೃಪೆ : daily mail
ವಿದ್ಯಾಭ್ಯಾಸ ಮಕ್ಕಳಿಗೆ ಬೇಕಾದ ಹಾಗೆ ಇರಬೇಕು. ಅವರು ತಮ್ಮ ಕೌಶಲದಿಂದ ಅರಿವನ್ನು ಮುಂದುವರಿಯುವಂತೆ, ಅಂದರೆ ಹರೆಯಕ್ಕೆ ತಕ್ಕಂತೆ ಇರಬೇಕು. ಕೆಲವು (೦.೦೦೦೧ % ) ಶಿಕ್ಷಕರು ಶಾಲೆಯಲ್ಲಿ ಕೆಟ್ಟದಾಗಿ ಪಾಠ ಮಾಡಿ ಟ್ಯೂಷನಿಗೆ ಕರೆ ನೀಡುವವರು ಇದ್ದಾರೆ. ಅಂತವರನ್ನು ಸರಿ ದಾರಿಗೆ ತರಬೇಕು.
ಪ್ರಜೆಗಳಿಗೆ ಸಿಗುವ ಆಹಾರ ವಿಶಾಮೃತವಾಗದಂತೆ ಆದಷ್ಟು ಸರ್ಕಾರ ನೋಡಿಕೊಳ್ಳಬೇಕು. ಇಂದು ಯಾವುದೇ ವಿಷವನ್ನು’ತಿನ್ನಿ… ತಿನ್ನಿ…’ ಎಂದು ಜಾಹಿರಾತು ಕೊಡುವ, ಜಾಹಿರಾತು- ನಟ/ಟಿಯರು ತಾವು ದುಡ್ಡಿಗಾಗಿ ತನ್ನನ್ನು ಬೆಳೆಸಿದ, ಬೆಳೆಸುತ್ತಿರುವ ಜನರಿಗೆ ವಿಷಪಾನ ಮಾಡುತ್ತಿದ್ದೇವೆ ಎಂಬ ಅರಿವು ಮೂಡಬೇಕು.
ಇಲ್ಲದ ರೋಗ ಇದೆ- ಎಂದು, ಬೇರೆ ರೋಗ ಬರಲೆಂದು ಔಷಧಿಕೊಟ್ಟು, ಸುಶ್ರೂಷಿಸುವ ವೈದ್ಯರನ್ನು/ ಆಸ್ಪತ್ರೆಯನ್ನು ಸರಿ ದಾರಿಗೆ ತರಬೇಕು.
ಮುಂದಿನ ಪೀಳಿಗೆ ವಂಶಾಭಿವೃಧಿಗೆ ಮತ್ತೊಂದು ರಾಷ್ಟ್ರದ ಮುಂದೆ ಕೈ ಜೋಡಿಸುವ ದಿನ ಬಾರದಂತೆ ಇರುವ ಸ್ಥಿತಿಯ ಚಿಂತನೆ ಇರುವ ರಾಜಕಾರಣಿಯನ್ನು ಮತದಾರ ಚುನಾಯಿಸಬೇಕು.
ತೆನಾಲಿ ರಾಮ, ಬೀರಬಲ್ ರಂತಹಾ ರಾಜನ ಆಜ್ಞೆಯನ್ನು ವಿಮರ್ಶೆ ಮಾಡುವವರು ಮುಂದೆ ಬರಬೇಕು.
ಎಲ್ಲವನ್ನೂ ಹೊಗಳುವವರು
ಒಂದು ದೇಶದ
ಕುಂಠಿತದ ಬೇರು– ಎಂಬ
ಚಾಣಕ್ಯ ವಾಕ್ಯದೊಂದಿಗೆ….
ನಮನಗಳು.
ನಿಮ್ಮವ ನಲ್ಲ
ರೂಪು
- ಪ್ರೊ.ರೂಪೇಶ್