ಅಂತರಂಗದ ತರಂಗ ನಿನ್ನನ್ನೆ ಹುಡುಕುತಿದೆ ನಲ್ಲ… ಬೆಳಕು-ಪ್ರಿಯ – (ಮುರಳಿ) ಹೊಸದುರ್ಗ ಅವರ ಲೇಖನದಲ್ಲಿ ಮೂಡಿಬಂದ ಕವನವನ್ನು ತಪ್ಪದೆ ಮುಂದೆ ಓದಿ….
ಏಕೆ ಬರದೆ ಹೋದೆ
ಬದುಕ ತೊರೆದು
ಅದೆಲ್ಲಿ ಹಿಂದೆ ಸರಿದೆ
ಬೆರಳ ಸರಿದು
ನಡೆದ ಹಾದಿ ಬೆದಕಿದೆ
ಅವನೆಲ್ಲಿ ಎಂದು
ಮುಡಿದ ಹೂವು ಮುನಿದಿದೆ
ನಿನ್ನೊಲವ ನೆನೆದು
ಕಡಲ ತಡಿಯ ಮರಳ
ಮನೆಯು ಕುಸಿಯಿತೆ
ಒಡಲ ನುಡಿಯ ಕೊರಳ
ದನಿಯು ಮುಗಿಯಿತೆ
ಅಂತರಂಗದ ತರಂಗ ನಿನ್ನನ್ನೆ
ಹುಡುಕುತಿದೆ ನಲ್ಲ
ನನ್ನ ಅಂತರಾತ್ಮದ ಪರಮಾತ್ಮ
ಎಂದಿಗೂ ನೀನಾದೆಯಲ್ಲ.
- ಬೆಳಕು-ಪ್ರಿಯ – (ಮುರಳಿ) ಹೊಸದುರ್ಗ
