“ಎಮ್ಮೆಗೆ ಬರೆ” ಕವನ – ಡಾ. ಅಶೋಕ ಕುಮಾರ ಎಸ್

ಮುದ್ನಾಳ ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಅವರ ಒಂದು ಕವನ, ತಪ್ಪದೆ ಮುಂದೆ ಓದಿ…

ಜ್ವರ ಬಂದರೆ ಎತ್ತಿಗೆ
ಬರೆ ಹಾಕುವರು ಎಮ್ಮೆಗೆ
ಬೆಲೆಯಿಲ್ಲ ಜಗದಲ್ಲಿ ದುಡಿಮೆಗೆ.

ರಾಗದ್ವೇಷ ಮುಳ್ಳಿನ ಹಾಸಿಗೆ
ಹನಿ ಹಾಲಿಲ್ಲ ಹಸಿದಳುವ ಕೂಸಿಗೆ
ವಂಚಕರು ತಿಂದು ತೇಗುವರು ಹೇಸಿಗೆ.

ಸಂಪತ್ತೇ ಮೂಲ ದುರಾಸೆಗೆ
ನೆಮ್ಮದಿ ಕೊಳ್ಳಲಾಗದು ಕಾಸಿಗೆ
ಕಾಲುಗಳಿದ್ದಷ್ಟು ಇದ್ದರೊಳಿತು ಹಾಸಿಗೆ.

ರೆಪ್ಪೆ ಆಸರಾಯಿತು ಕಣ್ಣಿಗೆ
ಮರದ ಟೊಂಗೆಯಾಧಾರ ಹಣ್ಣಿಗೆ
ಶೀಲ ಕೈಹಿಡಿದು ನಡೆಸುವುದು ಹೆಣ್ಣಿಗೆ.

ದುಡಿಮೆ ರಹದಾರಿ ಬದುಕಿಗೆ
ದುಡಿಯದುಂಡರೆ ಭಾರ ಭೂಮಿಗೆ
ದುಡಿಯದಿದ್ದರೆ ಬೇತಾಳದ ಹೊರೆ ಬೆನ್ನಿಗೆ.

ಮನಸಿದ್ದರೆ ತಂಪಾದ ಹೊಂಗೆ
ಭಾವನೆ ನೆರಳಿನಾಶ್ರಯದ ಟೊಂಗೆ
ತಾಯಿಯ ಋಣ ನಾ ಮರೆಯಲಿ ಹೆಂಗೆ.

ಹಾಕಿಸಿಕೊಂಡರು ಹೊಗೆ
ಶ್ರಾದ್ದಕಿಟ್ಟ ಅನ್ನ ಮುಟ್ಟಲಿಲ್ಲ ಕಾಗೆ
ಕಾಡುವುದು ಬಿಡಲಿಲ್ಲ ಮನಸಿನ ಬೇಗೆ.


  • ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ. – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ. ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading