ಗೆಳತಿಯರ ಸಂಭಾಷಣೆ ಹೇಗಿರುತ್ತೆ ಅಂದ್ರೆ… – ಶ್ರೀವಲ್ಲಭ ಕುಲಕರ್ಣಿ

ಶ್ರೀವಲ್ಲಭ ಕುಲಕರ್ಣಿ ಅವರ ಲೇಖನಿಯಲ್ಲಿ ಅರಳಿದ ಉತ್ತರಕರ್ನಾಟಕ ಜವಾರಿ ಭಾಷೆಯ ಒಂದು ಮಾತುಕತೆ, ತಪ್ಪದೆ ಮುಂದೆ ಓದಿ….

ಜೋಶಿ: ವೀಣಕ್ಕಾ ಎಲ್ಲಿದ್ದೀರಿ?

ವೀಣಕ್ಕ: ಯಾಕ್ರಿ ಜೋಶಿ ಬಾಯಾರ? ಏನಾತು?

ಜೋಶಿ: ಏನಿಲ್ಲಾ ವೀಣಕ್ಕಾ ಹಂಗ ಮಾತಾಡಿಸಿ ಹೋಗೋಣಂತ ಬಂದೆ..

ವೀಣಕ್ಕ: ಕರೆಕ್ಟ್ ಊಟದ್ ಟೈಮಿಗೆ ನಾ ನೆನಪ ಆಗ್ತೇನಿ ಇಕಿಗೆ(ಸ್ವಗತ) ಬರ್ರಿ .. ಚಾ ತಗೋತೀರೋ ? ಕಾಫಿನೋ ? ಮತ್ತೇನರ……?ಇಲ್ಲಾ ಊಟಾನ ಮಾಡೋಣ ಬರ್ರಿ… ಬಿಸಿ ಬಿಸಿ ಭಕ್ರಿ ಬಡೀತೇನಿ…!

ಜೋಶಿ: ಮೊದಲಿನ್ವು ಎರಡೂ ಬ್ಯಾಡಾ .ಭಕ್ರ್ಯಂತೂ ಮದಲ ಬ್ಯಾಡಾ.. ನಾವ್ ಅನ್ನದ್ ಮಂದಿ! ಜ್ವಾಳಾ ತಡ್ಯೂದಿಲ್ಲ ನಮಗ ! ಮೂರನೇದ್ ನಡೀತದ . . ಬಟ್ ಈಗ ವೈಕ್ ವೈಕ್ ಅನಸ್ಲಿಕತ್ತದ . ಸೋ …ಇಬ್ರಿಗೂ ಪಾನಕಾ ಮಾಡ್ರಿ ಸಾಕು. ನೀವ್ ಕುಡಿತಿದ್ರ ಅಷ್ಟ ನಾ ಕುಡಿತೇನಾ ಮತ್ತss ಪ್ರತ್ಯೇಕ ಮಾಡೂದ ಏನ್ ಬ್ಯಾಡಾ. ಪಾಪ ನಿಮಗೂ ಕೆಲಸ ಭಾಳಾಗ್ತಾವು…

ವೀಣಕ್ಕ: ಹೀಂಗ ಅಂದ ಅಂದ ಕೆಲಸಾ ತಗೋತಾಳ ಇಕಿ (ಸ್ವಗತ) ಇರ್ಲೇಳ್ರಿ..‌ಅದೆಷ್ಟ ಹೊತ್ತು. ಯಾಲಕ್ಕಿ ಹಾಕಿ ಮಾಡ್ತೇನಿ..

ಜೋಶಿ: ಅಂದಂಗ ಭಾಳ ದಿನಾ ಆತು ಯಾವುದರ ಪಿಚ್ಚರ್ ಹೋಗೋಣೇನು? ಇಬ್ರsss ನಾ ಮತ್ತ…. ಆ ಡುಮ್ಮಿ ಜಿನಲ್ ಗ ಕನ್ನಡ ಬರೂದಿಲ್ಲಾ .. ವೋ ಕೌನ್ ರೇ ಅಂತ ತಲಿ ತಿಂತಾಳಕಿ.

ವೀಣಕ್ಕ: ಅಷ್ಟ ಮಾಡೂಣ . ನೋಡಿದ್ರ ಬಿಡೂದಿಲ್ಲ ಅಕಿ. ಮೇ ಭೀ ಆತೀ ಹೂಂ ಅಂತಾಳ. ಅದಕ್ಕ ನೀವು ಎರಡ ಹೆಜ್ಜಿ ಮುಂದ‌ ಹೋಗ್ರಿ .. ನಾ ಅಕಿ ಕಣ್ ತಪ್ಪಿಸಿ, ಆಮ್ಯಾಲೆ ಜಾಯಿನ್ ಆಗ್ತಿನಿ.

ಜೋಶಿ: ಗುಡ್ ಐಡಿಯಾ ! ಅಲ್ಲೇ ಬಾಜೂ ಕ್ರಾಸ್ ಒಳಗ ಭಜ್ಜಿ ಮಾಡ್ತಾನ.‌ ಹೊಸಾ ಅಂಗಡಿ ಶುರು ಆಗೇದ.. ಬರೋವಾಗ ಮಸ್ತ ತಿಂದ ಬರೂಣು.. !
ಅಂದಂಗ ಯಾವ್ ಪಿಚ್ಚರ್ ಗೊತ್ತಾ?.

ವೀಣಕ್ಕ: ಮತ್ತೊಮ್ಮೆ “ಕಂಬ್ಳಿ ಹುಳಾ” ಆದ್ರ ನಾ “ವಲ್ಯಾ” “ವಲ್ಯಾ” “ವಲ್ಯಾ”!

ಜೋಶಿ: ಏ ಈ‌ ಸರ್ತಿ ಬ್ಯಾರೆ …. “ಹೊಂದಿಸಿ ಬರೆಯಿರಿ”

ವೀಣಕ್ಕ: ಸ್ಪೇಲಿಂಗ್ ಸರಿ‌ ಅದಲಾ? ಹೊದಿಸಿ?ಹೊಂದಿಸಿ? ಬಟ್ ಪಿಚ್ವರ್ ಸ್ವಲ್ಪ ಗಡಬಡ್ ಅನಸ್ತದ . ಅಕಿ ಪ್ರೇಮಿ ಇವನ ಪ್ರೇಮಿ ಅದ್ಲಿ ಬದ್ಲಿ ಆಗೋ ಸ್ಟೋರಿ ಇರಬೇಕು!.

ಜೋಶಿ: ಏನಿದ್ರ ನಮಗೇನಾಗೂದದ ? ಕಾರ್ನರ್ ಅಂಗಡಿ ಬಿಸಿ ಭಜ್ಜಿ ಸಿಕ್ರ ಸಾಕು…!

ವೀಣಕ್ಕ: ಅಲಾ ಇಕಿನ ನಾಕಣೆ ಮಂಗ್ಯಾಕ ಎಂಟಾಣೆ ಖರ್ಚ ಮಾಡಸ್ತಾಳ ಇಕಿ..‌ನನಗರ ಕೆಲಸ ಒಟ್ಯಾವು ಮನ್ಯಾಗ …! ಬಂದ ಮ್ಯಾಲೆ ಹವುರಕ ಮಾತಾಡ್ಕೋತ ಇಕಿ‌ ಕಡೆನ ಕೆಲಸಾ ತಗೋತೀನಿ ತಡಿ (ಸ್ವಗತ). ಹೂಂ ರೀ… ನಾ ರೆಡಿ …! ನೀವು ಮುಂದ ನಡೀರಿ . ಹಿತ್ತಲ ಬಾಗ್ಲಾ ಹಾಕ್ಕೊಂಡ್ ಬರ್ತೇನಿ. ಇದೀಗ ಆ ಜೋಶಿ ಬಾಯಿ‌ ಈ ವೀಣಕ್ಕ ಪಾಸ್ ಇದ್ರೂ ಕಳೀಬಾರದಂತ ಟಿಕೇಟ್ ತಗಸ್ಲಿಕ್ಕೆ ನಿಂತಾವು !

ಏನಾರಾ ಮಾಡ್ಕಳಿ ..

ನೀವುಂಟು ಅವರುಂಟು ಅಂದ ಬಿಡ್ರಿ.. ಜಪಾ ತಪಾ ಮಾಡಂದ್ರ ಕೇಳಂಗಿಲ್ಲಾ .. ಮಂದಿ ಹೇಳಿದ್ರ ತಿಳಿಯಂಗಿಲ್ಲಾ .. ಸ್ವಂತಕ್ಕಂತೂ ಬುದ್ಧಿ ಇಲ್ಲಾ… ತಮ್ಮದ ತಾವ್ ಬಿಡಂಗಿಲ್ಲಾ…ತಲ್ಯಾಗ ಬಂದದ್ ಆಗಬೇಕಂದ್ರ ಆಗssಬೇಕಂತಾವು !

ನಮಗೇನ್ ಪಿಸ್ಸsss ! ಕತ್ಲ್ಯಾಗ್ ಹುಳಾ ಕಡಿಸ್ಗೊಂಡ್ ಬರ್ಲಿ !


  • ಶ್ರೀವಲ್ಲಭ ಕುಲಕರ್ಣಿ, ಹುಬ್ಬಳ್ಳಿ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW