ಕವಿ ರವೀಂದ್ರ ಬಿ ಆರ್ ಅವರು ಬರೆದ ಓ ಮರವೇ ಕವನ ಪರಿಸರದ ಕಾಳಜಿಯ ಜೊತೆಗೆ ಪರಿಸರ ಪ್ರೇಮವನ್ನು ವ್ಯಕ್ತ ಪಡಿಸುತ್ತದೆ, ಮುಂದೆ ಓದಿ…
ನಿಂತಲ್ಲೇ ನಿಂತು
ಬೆಳೆದು ಬಿಡಿ
ಹಚ್ಚಹಸಿರಿನ
ಮರವಾಗಿ!
ಇದ್ದಲ್ಲೇ ಇದ್ದರೂ
ದಣಿದು ಬಂದವರಿಗೆ
ನೆರಳಾಗಿ!
ಹಸಿದು ಬಂದವರಿಗೆ
ಹಣ್ಣಾಗಿ!
ಕಣ್ಮನ ತಣಿಸುವ
ಹೂವಾಗಿ!
ಹಾರುವ ಹಕ್ಕಿಗೆ
ಆಶ್ರಯವಾಗಿ!
ಬದುಕಲು ಒಂದಿಷ್ಟು
ಸ್ವಚ್ಛ ಉಸಿರಾಗಿ!
ಇದ್ದಂಗೆ ಇದ್ದು ಬಿಡಿ
ಪ್ರಕೃತಿ ಮಡಿಲಲ್ಲಿ ಮರವಾಗಿ!
ಬಿದ್ದ ಏಟಿಗೂ ಅಂಜದೆ,
ಗರಗಸದ ಶಬ್ದಕ್ಕೂ ಅಳುಕದೆ,
ಬೆಳೆದು ಬಿಡಿ ಆಕಾಶದೆತ್ತರಕ್ಕೆ
ಮೋಡಕ್ಕೆ ಕೈ ಹಾಕಿ
ಸುರಿಸಿಬಿಡಿ ಮಳೆ
ಧಾರಾಕಾರವಾಗಿ!
ತನಗೇನೂ ಕೇಳದೆ
ಕೇಳಿದ ವರ ನೀಡುವ
ವನದೇವತೆಯಾಗಿ!!
- ರವೀಂದ್ರ ಬಿ ಆರ್ (ರಾಣಾ) ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಗಳು.
