‘ಹಡಗು’ ಕವನ – ಮೇಗರವಳ್ಳಿ ರಮೇಶ್




ರವಿ ಕಾಣದ್ದನ್ನು ಕವಿ ಕಂಡ ಅನ್ನುವ ಮಾತು ನೂರಕ್ಕೆ ನೂರು ಸತ್ಯವಾದ ಮಾತು. ಸಾಮಾನ್ಯ ವ್ಯಕ್ತಿಗೆ ಹಡಗು ಸಾಮಾನ್ಯವಾಗಿರುತ್ತದೆ, ಅದರಲ್ಲಿ ಯಾವುದೇ ವಿಶೇಷತೆ ಕಾಣುವುದಿಲ್ಲ. ಆದೇ ಮೇಗರವಳ್ಳಿ ರಮೇಶ್ ಅವರಂತಹ ಕವಿಯ ಕಣ್ಣಿಗೆ ಹಡಗು ಹೇಗೆಲ್ಲ ಕಾಣುತ್ತದೆ, ಅವರ  ಪದಗುಚ್ಛದಲ್ಲಿ ಹಡಗಿನ ವರ್ಣನೆ ಸುಂದರವಾಗಿದೆ.ಮುಂದೆ ಓದಿ…

ಲ೦ಗರು ಹಾಕಿ ನಿಲ್ಲಿಸಬೇಡ
ನಿನ್ನ ಹಡಗನ್ನ ಬ೦ದರಿನಲ್ಲಿ.
ತೇಲಿಬಿಡು ನಡುಗಡಲ
ಅಲೆಗಳೇರಿಳಿತದಲ್ಲಿ.

ಒಪ್ಪುವೆನು, ಬಲು ಸುರಕ್ಷಿತ
ಬ೦ದರಿನಲ್ಲಿ ನಿಲ್ಲಿಸಿದ ಹಡಗು.
ಆ ಹಡಗ ಕಟ್ಟಿದ್ದೇಕೆ ಹೇಳು,
ಲ೦ಗರು ಹಾಕಿ ಬ೦ದರಿನಲ್ಲಿ ನಿಲ್ಲಿಸಲೆ೦ದೆ?

ನಿರುಪಯೋಗಿ ಯಾಗದಿರಲಿ ನಿನ್ನ
ಹಡಗು ನಿ೦ತು ಬ೦ದರಿನಲ್ಲಿ!
ಪಯಣಿಸದರಲಿ ನೀನು ದೂರ ದೇಶದೆಡೆಗೆ.
ಸಾಗಿಸುತ ಸರಕುಗಳ ನಡೆಯಲಿ
ನಿನ್ನ ಅನುಭವದ ವ್ಯಾಪಾರ.

ಸಹಜ, ನಡುಗಡಲಿನಲಿ
ಏರಿ ಬ೦ದಪ್ಪಳಿಸುವವು
ಎತ್ತರೆತ್ತರದ ಅಲೆಗಳು.
ಚಾಕಚಕ್ಯತೆಯಿ೦ದ ನಡೆಸು
ಹಡಗು ಮುಳುಗದ ಹಾಗೆ.

ಎದುರಾಗಬಹುದು ನಡುಗಡ್ಡೆಗಳ ಅಪಾಯ
ಅಥವಾ ಬೃಹತ್ ತಿಮಿ೦ಗಿಲಗಳಾಕ್ರಮಣ
ಅಪಾಯಗಳನೆದಿರಿಸುತ, ಹಡಗು ಒಡೆಯದ ಹಾಗೆ
ದಾಟಿಸುವ ಕುಶಲತೆಯು ನಿನಗಿರಲಿ.

ಎಲ್ಲ ಕ೦ಟಕಗಳನು ದಾಟಿ ಸಾಗಿದ ಮೇಲೆ
ಕಾಣುವದದೋ ಅಲ್ಲಿ ನೀ ತಲುಪಬೇಕಾದ ತಾಣ.
ಕಡಲ ಪಯಣದ ರೋಚಕತೆಯಲ್ಲಿ ಹೀಗೇ
ಅನುಗಾಲ ಸಾಗಲಿ ನಿನ್ನ ಹಡಗಿನ ಯಾನ.

ಲ೦ಗರು ಹಾಕಿ ನಿಲ್ಲಿಸ ಬೇಡ
ನಿನ್ನ ಹಡಗನ್ನ ಬ೦ದರಿನಲ್ಲಿ!


  • ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW