ಪುಸ್ತಕ : ಹೆಗ್ಗುರುತು
ಲೇಖಕರು : ಕೆ. ಸತ್ಯನಾರಾಯಣ
ಪ್ರಕಾಶನ : ಮನೋಹರ ಗ್ರಂಥ ಮಾಲಾ, ಧಾರವಾಡ,
ಪ್ರಕಾರ : ಕಥಾಸಂಕಲನ
ಬೆಲೆ : ೧೨೦.೦೦
ವಿಭಿನ್ನ ಬಗೆಯ ಕತೆಗಳನ್ನು ಒಳಗೊಂಡಿವೆ: ಅವುಗಳನ್ನು ಅವುಗಳ ವಸ್ತುಗಳನ್ನು ಆಧರಿಸಿ ನಾಲ್ಕು ಬಗೆಯವನ್ನಾಗಿ ವಿಂಗಡಿಸಬಹುದು.
ಒಂದು: ನಿಮ್ನ ವರ್ಗದ ಕತೆಗಳು,
ಎರಡು: ಅಲ್ಪಸಂಖ್ಯಾತರ ಕತೆಗಳು .
ಮೂರು:ಮಹಿಳಾ ಕೇಂದ್ರಿತ ಕತೆಗಳು.
ನಾಲ್ಕು: ಸ್ವಾತ್ಮವಿಮರ್ಶೆಯ ಕತೆಗಳು.
ನಿಮ್ನ ವರ್ಗದ ಕತೆಗಳು : ಮೊದಲನೆಯದಕ್ಕೆ ನಿದರ್ಶನವಾಗಿ ಓಬಳಯ್ಯನ ಕತೆಯನ್ನು ಗಮನಿಸಬಹುದು. ರಸ್ತೆಯ ಬದಿಯಲ್ಲಿ ಟೀ ಮಾರುವವರ ಪೈಕಿಯಲ್ಲಿ ಒಬ್ಬನಾದ ಇವನಿಗೆ ಇದ್ದ ಒಬ್ಬ ಮಗ , ಕಾರ್ಮಿಕ ನಾಯಕನ ಪ್ರಭಾವದಿಂದಾಗಿ ,ಓದಿ ಮುಂದೆ ಅಮೆರಿಕಾಗೆ ಹೋಗುತ್ತಾನೆ.ಅಲ್ಲಿಯೆ ಒಬ್ಬ ಪಂಜಾಬಿ ಹುಡುಗಿಯನ್ನು ಮದುವೆಯಾಗುತ್ತಾನೆ. ಅಪ್ಪನ ಮೇಲಿನ ಪ್ರೀತಿಯಿಂದ ಆ ಮಗ ಇವರಿಗಾಗಿ ಒಳ್ಳೆಯ ಮನೆ ಮಾಡಿ ಕೊಟ್ಟರೂ ಅಲ್ಲಿಗೆ ಹೋಗುವುದಿಲ್ಲ. ಸೊಸೆಯನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಮಗ ಕಳಿಸಿದ ಹಣವನ್ನೂ ಮುಟ್ಟುವುದಿಲ್ಲ. ಸಂಬಂಧಗಳು ಬಿರುಕುಬಿಟ್ಟು ಮೂರಾಬಟ್ಟೆಯಾಗುವುದನ್ನು ಲೇಖಕರು ಅನುಭೂತಿಯಿಂದ ಚಿತ್ರಿಸಿದ್ದಾರೆ. ಅವನು ಯಥಾಪ್ರಕಾರ ರಸ್ತೆಯಲ್ಲಿ ಟೀ ಮಾರುವುದನ್ನು ಮುಂದುವರಿಸುತ್ತಾನೆ. ಅಭಿವೃದ್ದಿ ಎನ್ನುವ ಪ್ರಕ್ರಿಯೆ ಉಂಟುಮಾಡುವ ಕೌಟುಂಬಿಕ ತಲ್ಲಣಗಳನ್ನು ಈ ಕತೆ ಅನನ್ಯವಾಗಿ ಸೆರೆಹಿಡಿಯುತ್ತದೆ.


ಹೆಗ್ಗುರುತು ಲೇಖಕರು ಕೆ. ಸತ್ಯನಾರಾಯಣಮಹಿಳಾ ಕೇಂದ್ರಿತ ಕತೆಗಳು : ಮಹಿಳಾ ಕೇಂದ್ರಿತ ಕತೆಗಳ ಪ್ರಾತಿನಿಧಿಕ ರೂಪವಾಗಿ ಕಂಡಕ್ಟರ್ ರಾಜಮ್ಮನ ಕತೆಯನ್ನು ನೋಡಬಹುದು. ಇಲ್ಲಿ ಅವಳು ಏಕಕಾಲಕ್ಕೆ ಕೌಟುಂಬಿಕ ನೆಲೆಯಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಎದುರಿಸುವ ತಲ್ಲಣಗಳನ್ನು ಸೆರೆಹಿಡಿಯಲಾಗಿದೆ. ರಾತ್ರಿ ಹೊತ್ತಿನ ಕೆಲಸದಲ್ಲಿ ಶೌಚಕ್ಕೆ ಅವಳು ಎದುರಿಸುವ ಸವಾಲು.ಅದನ್ನು ತನ್ನ ಸಂಗಾತಿ ಮತ್ತು ಮಗಳ ಜತೆ ಸಮೀಕರಿಸಿರುವುದು. ಬಹುಶಃ ಕನ್ನಡ ಕಥಾ ಸಾಹಿತ್ಯದಲ್ಲಿ ಇದು ಮೊದಲ ಮಹಿಳಾ ಕಂಡಕ್ಟರ್ ಕಥನ
ಸ್ವಾತ್ಮ ವಿಮರ್ಶೆಯ ಕಥನ: ಭ್ರಷ್ಟಾಚಾರದ ಮೊತ್ತ ಎನ್ನುವ ಕತೆ ಇದಕ್ಕೆ ನಿದರ್ಶನ .ಇದರಲ್ಲಿ ಭ್ರಷ್ಟಾಚಾರದ ಅನಂತರೂಪಗಳನ್ನು ಆತ್ಮವಿಮರ್ಶೆಯ ನೆಲೆಯಲ್ಲಿ ಕಂಡಿರಿಸಲಾಗಿದೆ. ಯಾರದೋ ಪ್ರಭಾವವಲಯಕ್ಕೆ ಒಳಗಾಗಿ, ತಾನು ಪರೋಕ್ಷವಾಗಿ ಅನ್ಯರ ಬದುಕಿನಲ್ಲಿ ಪ್ರವೇಶಿಸಿದ ಪರಿಣಾಮವಾಗಿ ,ಅವರ ಬದುಕಿನ ಅಲ್ಲೋಲಕಲ್ಲೋಳಗಳಿಗೆ ಕಾರಣನಾದೆ.ಇದೂ ಒಂದು ಬಗೆಯ ಭ್ರಷ್ಟಾಚಾರವಲ್ಲವೆ? ಎಂದು ಕಥಾನಾಯಕ ಕೇಳಿಕೊಳ್ಳುವ ಪ್ರಶ್ನೆ ಭ್ರಷ್ಟಾಚಾರದ ಅನ್ಯಾನ್ಯರೂಪಗಳನ್ನು ಬಯಲುಗೊಳಿಸುತ್ತದೆ. ಲೇಖಕರ ಪರಕಾಯ ಪ್ರವೇಶ ಶಕ್ತಿಯೆ ಈ ಬಗೆಯ ಕಥನಗಳ ಅನಾವರಣಕ್ಕೆ ಕಾರಣ. ಸಮಕಾಲೀನ ಜೀವನದ ವಿವಿಧ ವಿನ್ಯಾಸಗಳನ್ನು , ಪಲ್ಲಟಗಳನ್ನು ಈ ಮೂಲಕ ಸೆರೆಹಿಡಿಯಲಾಗಿದೆ. ಅಭಿನಂದನೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.