ಹೆಣ್ಣೆಂದರೆ…? – ವಾಣಿ ಮೈಸೂರು

ಹೆಣ್ಣು ತನ್ನೆಲ್ಲ ನೋವನ್ನು ಮರೆತು, ಮಗಳಾಗಿ, ಹೆಂಡತಿಯಾಗಿ, ಮಗಳಾಗಿ ಜೀವಿಸುತ್ತಾಳೆ. ಅಂತಹ ಹೆಣ್ಣು ಮಹಿಳಾ ದಿನಾಚರಣೆ ದಿನವಷ್ಟೇ ಆರಾಧಿಸುವಂತವಳಾಗಬಾರದು. ಹೆಣ್ಣಿನ ಕುರಿತು ವಾಣಿ ಮೈಸೂರು ಅವರ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ…

“ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ” ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಮತ್ತು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸ್ತ್ರೀ ಎಂಬ ಪದವು ಸಂಸ್ಕೃತದಿಂದ ಬಂದಿದೆ. ಹೆಣ್ಣು, ನಾರಿ, ಚಾರಿಣಿ, ಧರಿತ್ರಿ, ಭೂಮಿ ಇನ್ನೂ ಹಲವು ನಾಮಗಳಲ್ಲಿ ಸ್ತ್ರೀ ಕರೆಸಿಕೊಳ್ಳುತ್ತಾಳೆ. ಸ್ತ್ರೀ ಸೃಷ್ಟಿಯ ಮೂಲ ನದಿಗಳ ಮೂಲ ದೇವತೆಗಳ ಸ್ವರೂಪ ಮತ್ತು ಸೃಷ್ಟಿಯ ಜಗಜನನಿ ಎಂದು ಸ್ತ್ರೀಗೆ ಹೋಲಿಕೆ ಮಾಡಲಾಗಿದೆ ಮತ್ತು ಋಷಿ ಮುನಿಗಳು ಕವಿಗಳು ಕವಿತೆ ಕವನ ಸಾಲುಗಳಲ್ಲಿ ಹೆಣ್ಣಿನ ವರ್ಣನೆಮಾಡಲಾಗಿದೆ.

ಸ್ತ್ರೀಗೆ ಸಹನೆ, ಮಮತೆ, ಕರುಣೆ, ವಾತ್ಸಲ್ಯ, ಆರೈಕೆ, ತ್ಯಾಗ, ಸತ್ಕಾರ, ತಾಳ್ಮೆ, ಪ್ರೀತಿ ಮತ್ತು ಸಾಂತ್ವನ ಹುಟ್ಟಿನ ಜೊತೆಗೆ ಮೇಲೈಸಿಕೊಂಡು ಬರುವವಳು. ಡಾ. ಜಿ. ಎಸ್. ಶಿವರುದ್ರಪ್ಪ ಅವರ ಕವನದ ಸಾಲುಗಳಲ್ಲಿ ಅದೆಷ್ಟು ಚಂದದ ವರ್ಣನೆ ಸ್ತ್ರೀ ಪದಕ್ಕೆ ಗರಿಮೆ ತಂದು ಕೊಟ್ಟಿದೆ ಅಂದರೆ ತಪ್ಪಾಗಲಾರದು!

ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೇ ಸಾಕೆ

ಸ್ತ್ರಿ ಅಂದರೆ ಅಷ್ಟೇ ಸಾಕೆ? ಹೆಣ್ಣು ಗಂಡಸಿನ ಸುತ್ತ ಜೀವಿಸುತ್ತಾಳೆ. ಅಮ್ಮನಾಗಿ, ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಮತ್ತು ಸ್ನೇಹಿತೆಯಾಗಿ ಸಹ ಉದ್ಯೋಗಿಯಾಗಿ ಮನೆಯಲ್ಲಿ ಹಾಗೂ ಸುತ್ತು ಮುತ್ತ ಓಡಾಡಿಕೊಂಡು ಮನ-ಮನೆಗಳಲ್ಲಿ ದೀಪ ಮಡಿಸಿ, ಹಸಿವಿಗೆ ಅನ್ನ ಉಣಿಸಿ ಜೀವ ತುಂಬುತ್ತಾಳೆ. ಆದರೂ ಅವಳಿಗೆ ಅತ್ಯಾಚಾರಗಳಂತಹ ಶೋಷಣೆ, ದೌರ್ಜನ್ಯ ಮತ್ತು ದಬ್ಬಾಳಿಗೆ ತಪ್ಪಿದ್ದಲ್ಲ! ವರ್ಷದಿಂದ ವರ್ಷಕ್ಕೆ ಮಹಿಳೆಯರ ದೌರ್ಜನ್ಯ ಹೆಚ್ಚಾಗುತ್ತಿರುವುದು ವಿಷಾದನೀಯ ಸಂಗತಿ. ಹೆಣ್ಣಿನ ಸಬಲೀಕರಣವಾಗಬೇಕು, ಗೌರವ ಸಿಗಬೇಕು ಮತ್ತು ಅವಳ ಸ್ಥಾನ ಮನಗಳು ಸಿಗಬೇಕು. ಹೆಣ್ಣು ಅಡಿಗೆ ಮನೆಗೆ ಅಷ್ಟೇ ಸೀಮಿತವಾಗಿಲ್ಲ ಅವಳು ಗಂಡಸಿನ ಸಮಾನವಾಗಿ ಸ್ವಾತಂತ್ರಳಾಗಿ ಹೋರಾಡುವ ಹಕ್ಕು ಸಿಗಬೇಕು. ಬರಿ ಹೆಸರಿಗಷ್ಟೇ ಹೆಣ್ಣಿನ ಸಬಲೀಕರಣವಾದರೆ ಸಾಲದು ಹೆಣ್ಣಿನ ಜೊತೆಗೆ ನಿರಂತರವಾಗಿ ಶೋಷಣೆ, ದೌರ್ಜನ್ಯ ಅತ್ಯಾಚಾರಗಳು ಕ್ಷೀಣಿಸಬೇಕು. ಕಾಮುಕ ಕಣ್ಣುಗಳಿಂದ ನೋಡುವ ವಿಕೃತ ಗಂಡಸಿನ ಕುಲಕ್ಕೆ ಅರ್ಥವಾಗ ಬೇಕು ಹೆತ್ತ ತಾಯಿ ಹೆಣ್ಣು ಜೀವ ಕೊಟ್ಟು ಹಾಲು ಉಣಿಸಿದವಳು ಹೆಣ್ಣು ಅವಳಿಗೆ ಗೌರವದಿಂದ ಕಂಡರೆ ದೇವತೆಗಳ ಮನಸ್ಸನ್ನು ಪ್ರಸನ್ನಗೊಳಿಸಿದಂತೆ. ನಿತ್ಯ ನಿರಂತರ ಹೆಣ್ಣಿಗೆ ಅರ್ಥ ಮಾಡಿಕೊಳ್ಳುವವರು ಸ್ಥಾನಮಾನಗಳು, ಗೌರವ ಸಿಕ್ಕರೆ ಸಾಕು ಹೆಣ್ಣಿನ ಮನವು ಸಾರ್ಥಕವಾದಂತೆ.

ಹೆಣ್ಣೆಂದರೆ…?

ಅವಳೆದೆಯ ನೋವ ಬಚ್ಚಿಟ್ಟು ನಗುವ ಒಡವೆಯ ಧರಿಸಿ ಸುತ್ತ ಇರುವವರ ನಗಿಸುವಳು! ಅವಳನ್ನು ಗೌರವಿಸಿ ಅರ್ಥ ಮಾಡಿಕೊಳ್ಳುವ ಬಯಕೆ ಅಷ್ಟೇ ಬಯಸುವಳು ಬೇರೇನೂ ಬಯಸದವಳು ಹೆಣ್ಣು.

ಉಸಿರು ಕೊಟ್ಟು ಜೀವ ಕೊಡುವ ಅಮೃತಬಳ್ಳಿ ಹೆಣ್ಣು. ಹೆಣ್ಣನ್ನು ಗೌರವಿಸಿ ನಿಮ್ಮ ಮನೆ ಮಗಳಂತೆ ಅವಳ ರಕ್ಷಣೆಯ ಹೊಣೆ ಹೊತ್ತು ಕಾಪಾಡಿ ಎಂದಷ್ಟೇ ಬೇಡಿಕೊಳ್ಳುವಳು ಹೆಣ್ಣು.


  • ವಾಣಿ ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW