ಕವಿಯತ್ರಿ ಭುವನೇಶ್ವರಿ. ರು. ಅಂಗಡಿ ಅವರ ಲೇಖನಿಯಲ್ಲಿ ಮೂಡಿದ ಮಕ್ಕಳ ಪದ್ಯ. ದೇವರು ಎಲ್ಲಿದ್ದಾನೆ?…ಹೇಗಿದ್ದಾನೆ?…ಎಲ್ಲಿದ್ದಾನೆ ? …ಕೊನೆಗೆ ಇಲ್ಲಿದ್ದಾನೆ…ತಪ್ಪದೆ ಮುಂದೆ ಓದಿ….
ದೇವರು ಎಂದರೆ
ಯಾರಮ್ಮ
ದೇವರು ಎಂದರೆ
ಎಲ್ಲಿಹನಮ್ಮ
ದೇವರು ನೋಡಲು
ಹೇಗಿಹನಮ್ಮ
ದೇವರು ಯಾವ
ಜಾತಿಯವನಮ್ಮ
ದೇವರ ಮನೆಯು
ದೊಡ್ಡದೇನಮ್ಮ
ದೇವರ ಹತ್ತಿರ ದುಡ್ಡು
ಬಹಳೇನಮ್ಮ
ದೇವರು ಯಾಕೆ
ದೂರ ಇರುವನಮ್ಮ
ನಮ್ಮನು ಕಂಡರೆ
ಭಯವೇನಮ್ಮ
ದೇವರನ ಕರೆದರೆ
ಓಡಿ ಬರುವನೇನಮ್ಮ
ಕಷ್ಟ ಸುಖ ಯಾಕೆ
ಕೊಡುವನಮ್ಮ
ಏನು ಕೇಳಿದರು ಗೊತ್ತಿಲ್ಲ
ಅಂತ ಹೇಳುವೆ ಏಕಮ್ಮ
ಅದಕೆ ನನಗೆ ನೀನೇ
ದೇವರಾಗಿರುವೆ ಅಮ್ಮ
ನಿನ್ನ ದೇವರು
ಕಾಣದ ದೇವರು
ನನ್ನ ದೇವರು
ಕಾಣುವ ದೇವರು
- ಭುವನೇಶ್ವರಿ. ರು. ಅಂಗಡಿ – ನರಗುಂದ, ಗದಗ
